ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಬಾರಿಗೆ ಲಾಟರಿ ಮೂಲಕ ಎಚ್‌1ಬಿ ವೀಸಾ ಅರ್ಜಿದಾರರ ಆಯ್ಕೆ: ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಜುಲೈ 30: ಎಚ್‌1ಬಿ ವೀಸಾಗೆ ಎರಡನೇ ಬಾರಿಗೆ ಲಾಟರಿ ಮೂಲಕ ಅರ್ಜಿದಾರರನ್ನು ಆಯ್ಕೆ ಮಾಡಿ ನೀಡಲಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ.

ಅಲ್ಲಿನ ವಲಸೆ ಸಂಸ್ಥೆ (immigration agency) ಅಪರೂಪವಾಗಿ ನಡೆಸುವ ಎರಡನೇ ಲಾಟರಿಯ ಮೂಲಕ ಮೊದಲ ಹಂತದ ಆಯ್ಕೆಯಲ್ಲಿ ವೀಸಾ ಪಡೆಯಲು ಸಾಧ್ಯವಾಗದ ವಿದೇಶಿಗರಿಗೆ ಹೆಚ್1 ಬಿ ವೀಸಾ ಆಯ್ಕೆ ಮಾಡಲು ಮುಂದಾಗಿದೆ.

ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಟಿ ಉದ್ಯೋಗಿಗಳನ್ನು ಅಮೆರಿಕದ ಸಂಸ್ಥೆಗಳು ನೇಮಕ ಮಾಡಿಕೊಳ್ಳುವುದಕ್ಕಾಗಿ ಹೆಚ್1 ಬಿ ವೀಸಾಗಳು ಸಹಕಾರಿಯಾಗಿದ್ದು, ಐಟಿ ಕ್ಷೇತ್ರದಲ್ಲಿರುವ ಅತಿ ಹೆಚ್ಚು ಭಾರತೀಯ ಉದ್ಯೋಗಿಗಳು ಹೆಚ್1 ಬಿ ವೀಸಾ ಪಡೆಯುವುದಕ್ಕೆ ಯತ್ನಿಸುತ್ತಾರೆ.

US To Conduct Rare 2nd Lottery For H-1B Visa Applicants

ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆ (ಯುಎಸ್ ಸಿಐಎಸ್) ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರ್ಷದ ಪ್ರಾರಂಭದಲ್ಲಿ ನಡೆಸಲಾಗಿದ್ದ ಗಣಕೀಕೃತ ಡ್ರಾ ನಲ್ಲಿ ಕಾಂಗ್ರೆಸ್ ಅನುಮೋದನೆ ನೀಡಿರುವ ಸಂಖ್ಯೆಯಷ್ಟು ಹೆಚ್1 ಬಿ ವೀಸಾಗಳು ಆಯ್ಕೆಯಾಗಿರಲಿಲ್ಲ.

H-1B cap- ಅರ್ಜಿದಾರರು ಸಲ್ಲಿಸುವುದಕ್ಕೆ, ಅದರಲ್ಲಿ ಅಡ್ವಾನ್ಸ್ಡ್ ಪದವಿ ವಿನಾಯಿತಿ ಅರ್ಜಿಗೆ ಅರ್ಹವಾಗಿರುವುದು ಒಳಗೊಂಡಿರುತ್ತದೆ. ಆದರೂ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಕಾನೂನು ನಿಯಮಾವಳಿ ಹಾಗೂ ನಿಬಂಧನೆಗಳ ಅಗತ್ಯಕ್ಕೆ ತಕ್ಕಂತೆ ಕಡ್ಡಾಯವಾಗಿ ಸಾಕ್ಷ್ಯವನ್ನು ಸಲ್ಲಿಸಬೇಕು ಮತ್ತು ಅರ್ಜಿ ಮಂಜೂರಿಗೆ ಅರ್ಹತೆಯನ್ನು ಸಾಬೀತು ಮಾಡಬೇಕು ಎಂದು USCIS ತಿಳಿಸಿದೆ.

ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್..!ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್..!

USCIS ತಿಳಿಸಿರುವ ಮಾಹಿತಿಯಂತೆ, H-1B cap- subject ಅರ್ಜಿಯನ್ನು ಸರಿಯಾದ ಸೇವಾ ಕೇಂದ್ರದಲ್ಲಿ ಸಲ್ಲಿಸಬೇಕು. H-1Bಗೆ ಆನ್​ಲೈನ್ ಅರ್ಜಿ ದೊರೆಯುತ್ತಿಲ್ಲ. H-1Bಗೆ ಅರ್ಜಿ ಸಲ್ಲಿಸುವವರು ಕಾಗದದಲ್ಲಿ ಮಾಡಬೇಕು ಹಾಗೂ ಪ್ರಿಂಟೆಡ್ ಕಾಪಿ (ಮುದ್ರಿತ ನಕಲು) ಒಳಗೊಂಡಿರಬಹುದು.

ಅನ್ವಯ ಆಗುವ ನೋಂದಣಿ ಆಯ್ಕೆಯ ನೋಟಿಸ್ FY 2022 H-1B cap- subject petition ಎಂದಿರುವುದಾಗಿ ಅಮೆರಿಕದ ಏಜೆನ್ಸಿ ಮಾಹಿತಿ ನೀಡಿದೆ.

ವಾರ್ಷಿಕವಾಗಿ 65,000 ಹೆಚ್1 ಬಿ ವೀಸಾಗಳ ಮಿತಿಯನ್ನು ಅಮೆರಿಕದ ಕಾಂಗ್ರೆಸ್ ನಿಗದಿಪಡಿಸಿದೆ. ಅಮೆರಿಕದ ಸ್ನಾತಕೋತ್ತರ ಪದವಿ ಹೊಂದಿರುವವರಿಂದ ಸಲ್ಲಿಕೆಯಾಗುವ ಮೊದಲ 20,000 ಅರ್ಜಿಗಳಿಗೆ ಕಾಂಗ್ರೆಸ್ ನಿಗದಿಪಡಿಸಿರುವ ಮಿತಿಯಿಂದ ವಿನಾಯ್ತಿ ದೊರೆಯಲಿವೆ.

ಕಾಂಗ್ರೆಸ್ ನಿಗದಿಪಡಿಸಿರುವ ಸಂಖ್ಯೆಯ ಹೆಚ್1 ಬಿ ವೀಸಾಗಳನ್ನು ನೀಡುವುದಕ್ಕೆ ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ ಸಾಧ್ಯವಾಗಲಿಲ್ಲ ಈ ಹಿನ್ನೆಲೆಯಲ್ಲಿ ಅಪರೂಪವಾಗಿ ನಡೆಯುವ ಎರಡನೇ ಲಾಟರಿ ಪ್ರಕ್ರಿಯೆಯ ಮೂಲಕ ಹೆಚ್1 ಬಿ ವೀಸಾ ಅರ್ಜಿಗಳ ಆಯ್ಕೆ ನಡೆಸಲಾಗುತ್ತಿದೆ ಎಂದು ಅಮೆರಿಕ ಮಾಹಿತಿ ನೀಡಿದೆ.

ನೋಂದಣಿ ದಿನಾಂಕವನ್ನು ಜುಲೈ 28ನೇ ತಾರೀಕಿನಂದು ನಿರ್ಧರಿಸಲಾಗಿದೆ. ಆ ಪ್ರಕಾರ, ಆಗಸ್ಟ್ 2ನೇ ತಾರೀಕಿನಿಂದ ಶುರುವಾಗಿ ನವೆಂಬರ್ 3ನೇ ತಾರೀಕಿಗೆ ಕೊನೆ ಆಗುತ್ತದೆ. ಆಯ್ಕೆಯಾದ ನೋಂದಣಿ ಸಂಖ್ಯೆಯೊಂದಿಗೆ ಇರುವವರ myUSCIS ಖಾತೆಯು ಅಪ್​ಡೇಟ್ ಆಗಿರುತ್ತದೆ.

ಆಯ್ಕೆಯ ನೋಟಿಸ್, ಅದರ ಜತೆಗೆ ಎಲ್ಲಿ ಹಾಗೂ ಹೇಗೆ ಫೈಲ್ ಮಾಡಬೇಕು ಎಂಬ ಮಾಹಿತಿ ಇರುತ್ತದೆ ಎನ್ನಲಾಗಿದೆ. USCIS ಹೇಳಿರುವಂತೆ, 2021ರ ಮಾರ್ಚ್​ನಲ್ಲಿ H-1B capಗೆ ಎಲೆಕ್ಟ್ರಾನಿಕ್ ಮೂಲಕ ಸಲ್ಲಿಸಲಾದ ನೋಂದಣಿಯಿಂದ ಆರಿಸಲಾಗಿತ್ತು. ಅದು 2022ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದಾಗಿತ್ತು. ಫಲಾನುಭವಿಗಳ ಪೈಕಿ ಅಡ್ವಾನ್ಸ್ಡ್ ಪದವಿ ವಿನಾಯಿತಿ ಇರುವವರು ಸಹ ಇದ್ದರು.

ಈ ವರ್ಷದ ಆರಂಭದಲ್ಲಿ ವೀಸಾ ಆಯ್ಕೆ ಮಾಡಲಾಗಿತ್ತು, ಆದರೆ ಸಂಸತ್ ನಿಗದಿಪಡಿಸಿದ ಸಂಖ್ಯೆಯಷ್ಟು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ, ಹೀಗಾಗಿ, ಈ ಬಾರಿ ಲಾಟರಿ ಮೂಲಕ ಆಯ್ಕೆಮಾಡುವ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ತಿಳಿಸಿದೆ.

ಎಚ್‌1ಬಿ ವೀಸಾಗೆ ಹೆಚ್ಚಿನ ಬೇಡಿಕೆ ಇದೆ, ಮಾಹಿತಿ ತಂತ್ರಜ್ಞಾನ ಕಂಪನಿಗಳು ಭಾರತ, ಚೀನಾ ಸೇರಿದಂತೆ ವಿವಿಧ ದೇಶದ ವೃತ್ತಿಪರರನ್ನು ನೇಮಿಸಿಕೊಳ್ಳುತ್ತಿದೆ. ಎರಡನೇ ಬಾರಿ ಲಾಟರಿ ಮೂಲಕ ಆಯ್ಕೆ ಮಾಡುವ ಯುಎಸ್‌ಸಿಐಎಸ್ ನಿರ್ಧಾರದಿಂದ ಹಲವು ಅರ್ಜಿದಾರರಿಗೆ ಆಶಾಭಾವ ಮೂಡಿದೆ ಎನ್ನಬಹುದು.

English summary
In what can be good news for hundreds of Indian IT professionals seeking the H-1B work visa, the US' immigration agency has decided to conduct a rare second lottery for the most sought-after visas to decide on the successful applicants who could not make it in the first random selection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X