ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ; ವಿದೇಶಿಯರ ಭೇಟಿಗೆ ಅನುಮತಿ ಕೊಟ್ಟ ಅಮೆರಿಕ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 15; ಅಮೆರಿಕ ಅಂತಿಮವಾಗಿ ವಿದೇಶಿ ಪ್ರವಾಸಿಗರಿಗೆ ತನ್ನ ನೆಲ ಮತ್ತು ವಾಯುಗಡಿಗಳನ್ನು ತೆರೆಯಲಿದೆ. ಸಂಪೂರ್ಣವಾಗಿ ಕೋವಿಡ್ 19 ಲಸಿಕೆ ಪಡೆದ ಜನರು ನವೆಂಬರ್ 8ರಿಂದ ಭೇಟಿ ನೀಡಲು ಒಪ್ಪಿಗೆ ಕೊಡಲಾಗಿದೆ.

ಸುಮಾರು 18 ತಿಂಗಳ ಬಳಿಕ ವಿದೇಶಿ ಪ್ರವಾಸಿಗರು ದೇಶದಕ್ಕೆ ಭೇಟಿ ನೀಡಲು ಅಮೆರಿಕ ಅವಕಾಶ ನೀಡಿದೆ. ಕೋವಿಡ್ ಪರಿಸ್ಥಿತಿಯ ಕಾರಣ ವಿದೇಶಿಯರಿಗೆ ದೇಶಕ್ಕೆ ಭೇಟಿ ನೀಡಲು ಅಮೆರಿಕ ಅನುಮತಿ ಕೊಟ್ಟಿರಲಿಲ್ಲ. ಇದರಿಂದಾಗಿ ಹಲವು ಜನರು ಕುಟುಂಬದಿಂದ ದೂರವಾಗಿದ್ದರು.

ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ 30 ದೇಶದ ಮಾನ್ಯತೆ ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ 30 ದೇಶದ ಮಾನ್ಯತೆ

ಅಮೆರಿಕ ತನ್ನ ಭೂಮಿ ಮತ್ತು ವಾಯು ಗಡಿಗಳನ್ನು ನವೆಂಬರ್ 8 ರಂದು ಮತ್ತೆ ತೆರಯಲಿದೆ. ಕೋವಿಡ್ ವಿರುದ್ಧದ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ವಿದೇಶಿ ಪ್ರವಾಸಿಗರು ದೇಶಕ್ಕೆ ಭೇಟಿ ನೀಡಬಹುದಾಗಿದೆ. ಇದರಿಂದಾಗಿ ಅಮೆರಿಕಕ್ಕೆ ಭೇಟಿ ನೀಡಲು ಕಾಯುತ್ತಿದ್ದ ಜಗತ್ತಿನ ವಿವಿಧ ರಾಷ್ಟ್ರಗಳ ಜನರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.

ಉಂಡ ಮನೆಗೆ ದ್ರೋಹ ಮಾಡೋದನ್ನು ಅಮೆರಿಕ ನೋಡಿ ಕಲಿಯಬೇಕು..!ಉಂಡ ಮನೆಗೆ ದ್ರೋಹ ಮಾಡೋದನ್ನು ಅಮೆರಿಕ ನೋಡಿ ಕಲಿಯಬೇಕು..!

US To Allow Fully Vaccinated Visitors From November 8

ಕೋವಿಡ್ ನಿರ್ಬಂಧಗಳನ್ನು ಸರಳೀಕರಿಸುವ ಕುರಿತು ಶ್ವೇತಭವನದ ಸಹಾಯಕ ಮಾಧ್ಯಮ ಕಾರ್ಯದರ್ಶಿ ಕೆವಿನ್ ಮುನೋಜ್ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರ ಆರೋಗ್ಯದ ರಕ್ಷಣಗಾಗಿ ಕೆಲವು ನಿಯಮಗಳನ್ನು ಮುಂದುವರೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈಗ ಘೋಷಣೆ ಮಾಡಿರುವ ಹೊಸ ನೀತಿಯು ಅಂತರಾಷ್ಟ್ರೀಯ ವಿಮಾನ ಪ್ರಯಾಣ ಮತ್ತು ಭೂ ಪ್ರಯಾಣ ಎರಡಕ್ಕೂ ಅನ್ವಯವಾಗುತ್ತದೆ. ನವೆಂಬರ್ 8ರಿಂದ ಇದು ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಕೋವಿಡ್ ಲಸಿಕೆ ಜೊತೆಗೆ ಹಣದುಬ್ಬರದ ಕಡೆಗೂ ಗಮನವಿರಲಿ: ಭಾರತಕ್ಕೆ ಗೀತಾ ಕಿವಿಮಾತುಕೋವಿಡ್ ಲಸಿಕೆ ಜೊತೆಗೆ ಹಣದುಬ್ಬರದ ಕಡೆಗೂ ಗಮನವಿರಲಿ: ಭಾರತಕ್ಕೆ ಗೀತಾ ಕಿವಿಮಾತು

ಅಮೆರಿಕ ಹೊಸ ನೀತಿಯನ್ನು ಘೋಷಣೆ ಮಾಡುತ್ತಿದ್ದಂತೆ ಅಮೆರಿಕದಲ್ಲಿರುವ ಯುರೋಪಿಯನ್ ಯೂನಿಯನ್ ರಾಯಭಾರಿ ಸ್ಟಾವ್ರೋಸ್ ಲ್ಯಾಂಬ್ರಿನಿಡಿಸ್ ಸಂತಸ ವ್ಯಕ್ತಪಡಿಸಿದ್ದಾರೆ. "ಮುಖ್ಯವಾದ ಮತ್ತು ಅತ್ಯಂತ ಸ್ವಾಗತಾರ್ಹ ಸುದ್ದಿ ಇದಾಗಿದೆ" ಎಂದು ಹೇಳಿದ್ದಾರೆ.

ಅಮೆರಿಕ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು 2020ರ ಮಾರ್ಚ್‌ನಲ್ಲಿ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ಗಡಿಯನ್ನು ಮುಚ್ಚಿತ್ತು. ಯುರೋಪಿಯನ್ ಯೂನಿಯನ್, ಬ್ರಿಟನ್, ಚೀನಾ, ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಜನರು ದೇಶಕ್ಕೆ ಭೇಟಿ ನೀಡುವಂತಿರಲಿಲ್ಲ. ಮೆಕ್ಸಿಕೋ ಮತ್ತು ಕೆನಡಾದ ಭೂಪ್ರದೇಶದ ಪ್ರವಾಸಿಗರಿಗೆ ಸಹ ನಿರ್ಬಂಧ ವಿಧಿಸಲಾಗಿತ್ತು.

ಕೋವಿಡ್ ಪರಿಸ್ಥಿತಿಯಲ್ಲಿ ಹೇರಿದ ನಿರ್ಬಂಧದ ನೂರಾರು ಮಿಲಿಯನ್ ಜನರ ಮೇಲೆ ಪರಿಣಾಮ ಉಂಟಾಗಿದೆ. ಆರ್ಥಿಕ ಸಂಕಷ್ಟ ಉಂಟು ಮಾಡಿದೆ. ವೈಯಕ್ತಿಕ ಪರಿಣಾಮವನ್ನು ಬೀರಿದೆ ಎಂದು ಅಮೆರಿಕ ಹೇಳಿದೆ. ನವೆಂಬರ್ 8ರಿಂದ ನಿರ್ಬಂಧ ಸಡಿಲಿಸಲಾಗಿದೆ. ಆದರೆ ಹೊಸ ನೀತಿಯಲ್ಲಿನ ಎಲ್ಲಾ ತಾಂತ್ರಿಕ ವಿವರಗಳನ್ನು ಇನ್ನೂ ಘೋಷಣೆ ಮಾಡಿಲ್ಲ.

ಹೊಸ ನೀತಿ ಹೇಗಿರಲಿದೆ? ಎಂಬ ಬಗ್ಗೆ ಅಧಿಕಾರಿಗಳು ಈಗಾಗಲೇ ಸುಳಿವು ಕೊಟ್ಟಿದ್ದರು. ದೇಶಕ್ಕೆ ಭೇಟಿ ನೀಡುವ ಪ್ರಯಾಣಿಕರು ಸಂಪೂರ್ಣ ಲಸಿಕೆಯನ್ನು ಪಡೆದಿದ್ದರೂ ಸಹ ಪ್ರಯಾಣಕ್ಕೆ ಮೂರು ದಿನ ಮೊದಲು ಕೋವಿಡ್ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ವಿಮಾನಯಾನ ಸಂಸ್ಥೆಗಳು ಕಾಂಟ್ಯಾಕ್ಟ್ ಲೆಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ವಾಯು ಮಾರ್ಗದ ಮೂಲಕ ಅಮೆರಿಕಕ್ಕೆ ಭೇಟಿ ನೀಡುವ ಜನರು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಲಸಿಕೆಗಳನ್ನು ಪಡೆದಿದ್ದರೆ ದೇಶಕ್ಕೆ ಪ್ರವೇಶ ನೀಡಲಾಗುತ್ತದೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆಸ್ಟ್ರಾಜೆನೆಕಾ, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಫೈಜರ್/ ಬಯೋಎನ್ಟೆಕ್, ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ಸಹ ಇದರಲ್ಲಿ ಸೇರಿವೆ.

ಅಮೆರಕ ಭೂ ಗಡಿಯನ್ನು ಎರಡು ಹಂತದಲ್ಲಿ ತೆರೆಯಲು ನಿರ್ಧರಿಸಲಾಗಿದೆ ಎಂದು ಶ್ವೇತ ಭವನ ಹೇಳಿದೆ. ಮೊದಲನೇ ಹಂತ ನವೆಂಬರ್‌ನಲ್ಲಿ ಆರಂಭವಾದರೆ 2ನೇ ಹಂತವು 2022ರ ಜನವರಿಯಲ್ಲಿ ಆರಂಭವಾಗಲಿದೆ. 2ನೇ ಹಂತದಲ್ಲಿ ಯಾರು ಬೇಕಾದರೂ ಭೂ ಮಾರ್ಗದ ಮೂಲಕ ದೇಶಕ್ಕೆ ಪ್ರವೇಶ ಪಡೆಯಬಹುದು. ಆದರೆ ಸಂಪೂರ್ಣ ಲಸಿಕೆಯನ್ನು ಪಡೆದಿರಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಭೂ ಮಾರ್ಗದ ಮೂಲಕ ದೇಶಕ್ಕೆ ಭೇಟಿ ನೀಡಲು ಇರುವ ನಿರ್ಬಂಧ ಅಕ್ಟೋಬರ್ 21ಕ್ಕೆ ಅಂತ್ಯಗೊಳ್ಳಲಿದೆ. ಹೊಸ ನೀತಿ ಜಾರಿಗೆ ಬರುವ ಮೊದಲು ಅದನ್ನು ಮತ್ತೊಂದು ಅವಧಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಶ್ವೇತ ಭವನ ಹೇಳಿದೆ.

English summary
United States will reopen its land and air borders on November 8 to foreign visitors who fully vaccinated against Covid 19. Announcement apply to both international air travel and land travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X