ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆಯ ಡೇಟಾ ಹ್ಯಾಕ್: ಚೀನಾ ವಿರುದ್ಧ ಯುಎಸ್ ವಾರ್ನಿಂಗ್

|
Google Oneindia Kannada News

ವಾಷಿಂಗ್ಟನ್, ಮೇ 11: ಮಾರಣಾಂತಿಕ ಕೊರೊನಾ ವೈರಸ್ ಅನ್ನು ಕಟ್ಟಿಹಾಕಲು ಅಮೇರಿಕಾದಲ್ಲಿ ಹಲವು ಪ್ರಯತ್ನಗಳು ನಡೆಯುತ್ತಲೇ ಇದೆ. ಕೋವಿಡ್-19 ಗೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯುವ ಕಾಯಕದಲ್ಲಿ ಯುಎಸ್ಎ ನಲ್ಲಿ ಅನೇಕ ವಿಜ್ಞಾನಿಗಳು ತೊಡಗಿದ್ದಾರೆ. ಹೀಗಿರುವಾಗಲೇ, ಒಂದು ಆತಂಕಕಾರಿ ವರದಿ ಬಹಿರಂಗವಾಗಿದೆ.

ಕೊರೊನಾ ವೈರಸ್ ಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಮೇರಿಕಾದ ವಿಜ್ಞಾನಿಗಳ ಶ್ರಮವನ್ನು ಮಟ್ಟಹಾಕಲು ಚೀನಾ ಪ್ರಯತ್ನಿಸುತ್ತಿದೆ. ಕೋವಿಡ್-19 ಗೆ ಲಸಿಕೆ ಅಭಿವೃದ್ಧಿ ಮಾಡುತ್ತಿರುವ ಡೇಟಾವನ್ನು ಕದಿಯಲು ಚೀನಾದ ನುರಿತ ಹ್ಯಾಕರ್ ಗಳು ಗೂಢಾಚಾರರು ಮುಂದಾಗಿದ್ದಾರೆ ಎಂಬ ವಾರ್ನಿಂಗ್ ನೀಡಲು ಎಫ್.ಬಿ.ಐ ಮತ್ತು ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಸಿದ್ಧತೆ ನಡೆಸಿದೆ.

ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

ಕೋವಿಡ್-19 ಗೆ ಲಸಿಕೆ ಅಥವಾ ಔಷಧಿ ಕಂಡುಹಿಡಿಯಲು ಜಗತ್ತಿನಾದ್ಯಂತ ವಿಜ್ಞಾನಿಗಳು ಇನ್ನಿಲ್ಲದ ಪ್ರಯೋಗ ನಡೆಸುತ್ತಿದ್ದು, ಆ ಕುರಿತ ಎಲ್ಲಾ ಮಾಹಿತಿಯ ಮೇಲೆ ಕಣ್ಣಿಡಲು ಚೀನಾದ ಹ್ಯಾಕರ್ ಗಳು 'ಸೈಬರ್ ಥೆಫ್ಟ್'ಗೆ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ವಾರ್ನಿಂಗ್ ಕೊಡಲು ತಯಾರಿ

ವಾರ್ನಿಂಗ್ ಕೊಡಲು ತಯಾರಿ

ಕೊರೊನಾ ವೈರಸ್ ಕುರಿತಾದ ಲಸಿಕೆ, ಚಿಕಿತ್ಸೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅಮೂಲ್ಯವಾದ ಮಾಹಿತಿಯನ್ನು ಚೀನಾ ಅಕ್ರಮವಾಗಿ ಪಡೆಯಲು ಪ್ರಯತ್ನಿಸುತ್ತಿದೆ. ಶೈಕ್ಷಣಿಕ ಮತ್ತು ಖಾಸಗಿ ಪ್ರಯೋಗಾಲಯಗಳ ಒಳಗಿನಿಂದ ಡೇಟಾವನ್ನು ಕದಿಯಲು ಚೀನಾ ಫೋಕಸ್ ಮಾಡಿದೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತ ವಾರ್ನಿಂಗ್ ಕೊಡಲು ಮುಂದಾಗಿದೆ.

ಡೇಟಾ ಹ್ಯಾಕ್ ವಾರ್ನಿಂಗ್

ಡೇಟಾ ಹ್ಯಾಕ್ ವಾರ್ನಿಂಗ್

''ಕೊರೊನಾ ವೈರಸ್ ಜಗತ್ತಿನಾದ್ಯಂತ ಹಬ್ಬಲು ಚೀನಾ ಕಾರಣ, ವುಹಾನ್ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಹರಡಿದ್ದು'' ಎಂದು ಪದೇ ಪದೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಟುರು ಹಾಕಿದ್ದರು. ಇದೀಗ ಚೀನಾ ವಿರುದ್ಧ 'ಡೇಟಾ ಹ್ಯಾಕ್' ವಾರ್ನಿಂಗ್ ಅನ್ನು ನೀಡಲು ಡೊನಾಲ್ಡ್ ಟ್ರಂಪ್ ಆಡಳಿತ ತಯಾರಿ ಮಾಡಿಕೊಂಡಿದೆ.

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?

ದೊಡ್ಡ ಇತಿಹಾಸ ಇದೆ

ದೊಡ್ಡ ಇತಿಹಾಸ ಇದೆ

''ಸೈಬರ್ ಸ್ಪೇಸ್ ನಲ್ಲಿ ಚೀನಾದ ಕೆಟ್ಟ ವರ್ತನೆಯ ಬಗ್ಗೆ ದೊಡ್ಡ ಇತಿಹಾಸವೇ ಇದೆ. ಆದ್ದರಿಂದ ಕೋವಿಡ್-19 ತಡೆಗಟ್ಟಲು ಯುಎಸ್ ಪಡುತ್ತಿರುವ ಶ್ರಮದ ಕುರಿತು ತಿಳಿದುಕೊಳ್ಳಲು ಚೀನಾ ಮುಂದಾದರೆ ಆಶ್ಚರ್ಯವಿಲ್ಲ'' ಎಂದು ಸೈಬರ್ ಸೆಕ್ಯೂರಿಟಿ ನಿರ್ದೇಶಕ ಕ್ರಿಸ್ಟೋಫರ್ ಕ್ರೆಬ್ಸ್ ಹೇಳಿದ್ದಾರೆ.

ದಿಢೀರ್ ನಿರ್ದೇಶನ

ದಿಢೀರ್ ನಿರ್ದೇಶನ

ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಕುರಿತಾದ ಮಾಹಿತಿಯನ್ನು ಕಲೆಹಾಕಲು ಹಲವು ದೇಶಗಳು ತಮ್ಮ ಮಿಲಿಟರಿ ಮತ್ತು ಗುಪ್ತಚರ ಹ್ಯಾಕರ್ ಗಳನ್ನು ಬಳಸಿಕೊಳ್ಳುತ್ತಿವೆ. ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ಕೂಡ ಕೊರೊನಾ ವೈರಸ್ ಸಂಬಂಧಿತ ಮಾಹಿತಿ ಮೇಲೆ ಕಣ್ಣಿಡುವಂತೆ ಹ್ಯಾಕರ್ ಗಳಿಗೆ ದಿಢೀರ್ ನಿರ್ದೇಶನ ನೀಡಿವೆ ಎಂದು ಅಮೇರಿಕಾದ ಖಾಸಗಿ ಭದ್ರತಾ ಸಂಸ್ಥೆ ತಿಳಿಸಿದೆ.

ಕಳೆದ ವಾರ ಬಂದಿತ್ತು ಒಂದು ವಾರ್ನಿಂಗ್

ಕಳೆದ ವಾರ ಬಂದಿತ್ತು ಒಂದು ವಾರ್ನಿಂಗ್

''ಆರೋಗ್ಯ ಸಂಸ್ಥೆ, ಔ‍ಷಧೀಯ ಕಂಪನಿಗಳು, ಅಕಾಡೆಮಿ, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ಸ್ಥಳೀಯ ಸರ್ಕಾರಗಳು'' ಹ್ಯಾಕರ್ ಗಳಿಗೆ ಟಾರ್ಗೆಟ್ ಆಗಿವೆ ಎಂದು ಕಳೆದ ವಾರವಷ್ಟೇ ಯುಎಸ್ಎ ಮತ್ತು ಬ್ರಿಟನ್ ಜಂಟಿ-ವಾರ್ನಿಂಗ್ ನೀಡಿತ್ತು. ಆದರೆ, ಯಾವುದೇ ನಿರ್ದಿಷ್ಟ ದೇಶಗಳನ್ನು ಹೆಸರಿಸಿರಲಿಲ್ಲ. ರಷ್ಯಾ, ಚೀನಾ, ಇರಾನ್ ಮತ್ತು ಉತ್ತರ ಕೊರಿಯಾ ಅತ್ಯಂತ ಸಕ್ರಿಯ ಸೈಬರ್ ಆಪರೇಟರ್ ಗಳನ್ನು ಹೊಂದಿವೆ ಎಂಬುದು ನಿಮ್ಮ ಗಮನಕ್ಕಿರಲಿ.

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

English summary
US to accuse China of Trying to Hack Vaccine Data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X