ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ನೈಟ್ ಕ್ಲಬ್ ಮೇಲೆ ಗುಂಡಿನ ದಾಳಿ, 3 ಸಾವು

|
Google Oneindia Kannada News

ವಾಷಿಂಗ್ಟನ್ ಜೂನ್ 6: ಅಮೆರಿಕದ ಟೆನ್ನಿಸ್ಸಿ ಸಮೀಪದ ನೈಟ್ ಕ್ಲಬ್ ಒಂದರ ಮೇಲೆ ಭಾನುವಾರ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಗುಂಡೇಟು ಬಿದ್ದು 14 ಮಂದಿ ಗಾಯಗೊಂಡಿದ್ದಾರೆ.

"ಅಮೆರಿಕದ ಟೆನ್ನಿಸ್ಸಿ ನಗರದ ಮ್ಯಾಕ್ ಕ್ಯಾಲಿ ಅವೆನ್ಯೂ ಸಮೀಪದ ನೈಟ್ ಕ್ಲಬ್ ಮೇಲೆ ಭಾನುವಾರ ನಸುಕಿನ 2.42 ಗಂಟೆಗೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಇಬ್ಬರು ನಾಗರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂದೂಕುಧಾರಿಗಳು ವಾಹನ ಡಿಕ್ಕಿಯೊಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ,'' ಎಂದು ಚಟ್ಟನೂಗಾ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಸೆಲೆಸ್ಟ್ ಮರ್ಫಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷರನ್ನು ಮನೆಯಿಂದ ಹೊರಕಳಿಸುವಂತೆ ಮಾಡಿದ ಪುಟ್ಟ ವಿಮಾನಅಮೆರಿಕ ಅಧ್ಯಕ್ಷರನ್ನು ಮನೆಯಿಂದ ಹೊರಕಳಿಸುವಂತೆ ಮಾಡಿದ ಪುಟ್ಟ ವಿಮಾನ

"14 ಮಂದಿ ಗುಂಡೇಟು ತಿಂದು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರು ವಯಸ್ಕರಾಗಿದ್ದಾರೆ. ಘಟನೆಯಲ್ಲಿ ಒಬ್ಬ ಬಾಲಕ ಕೂಡ ಗಾಯಗೊಂಡಿದ್ದಾನೆ,'' ಎಂದು ಅವರು ಮಾಹಿತಿ ನೀಡಿದ್ದಾರೆ.

US Tennessee nightclub shooting: 3 dead, 14 injured

ದಾಳಿ ಕುರಿತು ಮಾಹಿತಿ ಸಂಗ್ರಹ; "ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಕೂಡಲೇ ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ದಾಳಿ ಕುರಿತು ಮಾಹಿತಿ ತಿಳಿದವರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ಅವರ ಮೂಲವನ್ನು ಗೌಪ್ಯವಾಗಿಡಲಾಗುವುದು,'' ಎಂದು ಸೆಲೆಸ್ಟ್ ಮರ್ಫಿ ತಿಳಿಸಿದ್ದಾರೆ.

ನೈಜೀರಿಯಾ ಚರ್ಚ್‌ ಮೇಲೆ ದಾಳಿ: 50 ಮಂದಿ ಹತ್ಯೆನೈಜೀರಿಯಾ ಚರ್ಚ್‌ ಮೇಲೆ ದಾಳಿ: 50 ಮಂದಿ ಹತ್ಯೆ

"ಪ್ರಾಥಮಿಕ ತನಿಖೆಯ ಪ್ರಕಾರ ಗಮನಿಸಿದರೆ ಇದೊಂದು ಪ್ರತ್ಯೇಕ ಘಟನೆ. ಇದರಿಂದ ಸಾರ್ವಜನಿಕ ಸುರಕ್ಷತೆಯ ಮೇಲೆ ಯಾವುದೇ ಬೆದರಿಕೆ ಇಲ್ಲ. ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಘಟನೆ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಲಾಗುತ್ತಿದೆ,'' ಸೆಲೆಸ್ಟ್ ಮರ್ಫಿ ಮಾಹಿತಿ ನೀಡಿದ್ದಾರೆ.

ಅಮೆರಿಕದಲ್ಲಿ ಸರಣಿ ದಾಳಿ; ಶನಿವಾರವಷ್ಟೇ ಚಟ್ಟನೂಗಾ ಜಿಲ್ಲೆಯಲ್ಲಿ ಬಾಲಕರ ಗುಂಪುಗಳ ನಡುವೆ ನಡೆದ ಗ್ಯಾಂಗ್ ವಾರ್‌ನಲ್ಲಿ ಆರು ಬಾಲಕರು ಗಾಯಗೊಂಡಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಮೇ 24ರಂದು ಅಮೆರಿಕದ ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 19 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 23 ಜನರು ಮೃತಪಟ್ಟಿದ್ದರು. ವಾಹನದಲ್ಲಿ ಆಗಮಿಸಿದ ದಾಳಿಕೋರ ಪ್ರಾಥಮಿಕ ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದ 18 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಹತ್ಯೆ ಮಾಡಿದ್ದರು.

US Tennessee nightclub shooting: 3 dead, 14 injured

ಗನ್ ಮಾಫಿಯಾ ಹೆಚ್ಚಳ; ಅಮೆರಿಕದಲ್ಲಿ ಸರಣಿ ಗುಂಡಿನ ದಾಳಿಗಳು ನಡೆಯುತ್ತಿದೆ. ಘಟನೆಗಳ ಹಿನ್ನೆಲೆಯಲ್ಲಿ ಗನ್ ಮಾಫಿಯಾ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕ ಮಕ್ಕಳಿಗೆ ಸುಲಭವಾಗಿ ಬಂದೂಕುಗಳು ಸಿಗುವಂತಾಗಿದೆ. ಈ ಬಗ್ಗೆ ಅಮೆರಿಕ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುಬೇಕು. ಈ ಮೂಲಕ ಭವಿಷ್ಯದಲ್ಲಿ ನಡೆಯಬಹುದಾದ ದೊಡ್ಡ ಸಂಖ್ಯೆಯ ಗುಂಡಿನ ದಾಳಿಗಳನ್ನು ತಡೆಯಬೇಕಿದೆ ಎಂದು ಸ್ಥಳೀಯ ನಾಗರಿಕರು ಅಮೆರಿಕ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಅಭಿಯಾನಗಳು ಕೂಡ ಆರಂಭವಾಗಿವೆ.

English summary
Three people died and fourteen were injured in a shooting near a Tennessee nightclub in the US early on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X