ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಟಿವಿ ಟಾಕ್ ಶೋ ದಿಗ್ಗಜ ಲ್ಯಾರಿ ಕಿಂಗ್ ವಿಧಿವಶ

|
Google Oneindia Kannada News

ಲಾಸ್ ಏಂಜಲೀಸ್, ಜನವರಿ 24: ಲ್ಯಾರಿ ಕಿಂಗ್ ಎಂದೇ ಜನಪ್ರಿಯರಾಗಿದ್ದ ಲಾರೆನ್ಸ್ ಹಾರ್ವೆ ಜೈಗರ್ ಅವರು ನಿಧನರಾಗಿದ್ದಾರೆ. ಅಮೆರಿಕದ ಟಿವಿ ನಿರೂಪಕ, ಸಂದರ್ಶಕ, ವಕ್ತಾರರಾಗಿ 5 ದಶಕಗಳಿಗೂ ಅಧಿಕ ಕಾಲ ಖ್ಯಾತನಾಮರನ್ನು ಸಂದರ್ಶಿಸಿದ ಕಿಂಗ್ ನಿಧನಕ್ಕೆ ವಿಶ್ವದೆಲ್ಲೆಡೆಯಿಂದ ಸಂತಾಪ ಕೇಳಿ ಬಂದಿದೆ.

ಲಾಸ್ ಏಂಜಲೀಸ್‌ನ ಸೆಡಾರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ 87 ವರ್ಷ ವಯಸ್ಸಿನ ಕಿಂಗ್ ನಿಧನರಾದರು ಎಂದು ಒರಾ ಮಾಧ್ಯಮ ಸಂಸ್ಥೆ ಪ್ರಕಟಿಸಿದೆ. ಲ್ಯಾರಿ ಕಿಂಗ್ಸ್ ಸ್ಥಾಪಿಸಿದ ಸ್ಟುಡಿಯೋ, ನೆಟ್ವರ್ಕ್ ಒರಾ ಮೀಡಿಯಾ, ಕಿಂಗ್ ಅವರ ನಿಧನಕ್ಕೆ ಏನು ಕಾರಣ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಸಿಎನ್ಎನ್ ಈ ಹಿಂದಿನ ವರದಿ ಪ್ರಕಾರ ಕಿಂಗ್ ಅವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮಿಖಾಯಿಲ್ ಗೊರ್ಬಚೇವ್, ವ್ಲಾದಿಮಿರ್ ಪುಟಿನ್, ಯಾಸಿರ್ ಅರಾಫತ್, ದಲಾಯಿ ಲಾಮಾ, ಎಲಿಜಬೆತ್ ಟೇಲರ್, ಬರಾಕ್ ಒಬಾಮಾ, ಬಿಲ್ ಗೇಟ್ಸ್, ಲೇಡಿಗಾಗಾ ಸೇರಿದಂತೆ ರಾಜಕೀಯ, ಸಿನಿಮಾ ಸೆಲೆಬ್ರಿಟಿಗಳನ್ನು ಸಂದರ್ಶಿಸುತ್ತಿದ್ದ ಲ್ಯಾರಿ ಕಿಂಗ್ ಅವರು ಸುಮಾರು 50 ಸಾವಿರಕ್ಕೂ ಅಧಿಕ ಟಾಕ್ ಶೋ ಸಂದರ್ಶನ ನಡೆಸಿದ ದಾಖಲೆ ಹೊಂದಿದ್ದಾರೆ. ಹ್ಯಾರಿ ಕಿಂಗ್ ಲೈವ್ ಶೋ ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ.

US talk show host Larry King dies weeks after testing Covid positive

2007ರಲ್ಲಿ ಜೈಲುವಾಸದ ಬಗ್ಗೆ ಪ್ಯಾರೀಸ್ ಹಿಲ್ಟನ್ ಹೇಳಿಕೊಂಡಿದ್ದು, 2009ರಲ್ಲಿ ಮೈಕಲ್ ಜಾಕ್ಸನ್ ಸಾವಿನ ಬಗ್ಗೆ ಅವರ ಕುಟುಂಬಸ್ಥರು, ಅಪ್ತರು ಮಾತನಾಡಿದ್ದು, ಎಲ್ಲವೂ ಲ್ಯಾರಿ ಕಿಂಗ್ ಟಾಕ್ ಶೋನಲ್ಲಿ ಮಾತ್ರ ಸಾಧ್ಯವಾಗಿತ್ತು. ಫ್ರಾಂಕ್ ಸಿನಾಟ್ರಾ ಕೊನೆ ಸಂದರ್ಶನ ಮಾಡಿದ್ದು ಕಿಂಗ್. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಅಬ್ಬರ ಮಾತುಗಾರಿಕೆಯಿಲ್ಲದೆ ಕಿಂಗ್ ನಡೆಸುತ್ತಿದ್ದ ಟಾಕ್ ಶೋ ಎಲ್ಲರ ಮೆಚ್ಚುಗೆ ಗಳಿಸಿತ್ತು, ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು ಎಂಬುದನ್ನು ಸ್ಮರಿಸಬಹುದು.

English summary
Larry King, the suspenders-sporting everyman whose broadcast interviews with world leaders, movie stars and ordinary Joes helped define American conversation for a half-century, died Saturday. He was 87.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X