ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟಿ ಕೋಟಿ ಜನರಿಗೆ ಉಚಿತ ಚಿಕಿತ್ಸೆ! ಸುಪ್ರೀಂಕೋರ್ಟ್ ಮಹತ್ವದ ಆದೇಶ!

|
Google Oneindia Kannada News

ಕೊರೊನಾ ಇಡೀ ಜಗತ್ತಿನ ಜೀವ ಹಿಂಡಿದೆ. ಅದರಲ್ಲೂ ಶ್ರೀಮಂತ ರಾಷ್ಟ್ರಗಳು ಎಂಬ ಹಣೆಪಟ್ಟಿ ಹೊತ್ತಿದ್ದ ರಾಷ್ಟ್ರಗಳಿಗೆ ಕೊರೊನಾ ಭಾರಿ ಪೆಟ್ಟುಕೊಟ್ಟಿದೆ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರ ಸಾವು ಸಂಭವಿಸಿದೆ. ಈ ಹೊತ್ತಲ್ಲೇ ಅಮೆರಿಕದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಅಮೆರಿಕದ ಬಡವರಿಗೆ ಸಿಹಿಸುದ್ದಿ ನೀಡಿದೆ. ಬಡವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆ 'ಒಬಾಮಾ ಕೇರ್'ಗೆ ಅಸ್ತು ಎಂದಿದೆ.

ಅಮೆರಿಕದ ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆ ಬಳಿಕ 7-2ರ ಅಂತರದಲ್ಲಿ 'ಒಬಾಮಾ ಕೇರ್'ಗೆ ಗ್ರೀನ್ ಸಿಗ್ನಲ್ ನೀಡಿದೆ. ಯೋಜನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಗಳನ್ನ ಈ ತೀರ್ಪಿನ ಮೂಲಕ ವಜಾಗೊಳಿಸಿದೆ ಅಮೆರಿಕದ ಸುಪ್ರೀಂಕೋರ್ಟ್. ಅಂದಹಾಗೆ ಅಮೆರಿಕದ ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸಲು ಒಬಾಮಾ ತಮ್ಮ ಆಡಳಿತದಲ್ಲಿ 'ಒಬಾಮಾ ಕೇರ್' ಎಂಬ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದ್ದರು. ಆದರೆ ಇದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಿರಲಿಲ್ಲ.

ಹೀಗಾಗಿಯೇ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ 'ಒಬಾಮಾ ಕೇರ್' ಯೋಜನೆಗೆ ಬ್ರೇಕ್ ಹಾಕಿದ್ದರು. ಟ್ರಂಪ್‌ರ ಈ ನಿರ್ಧಾರಕ್ಕೆ ರಿಪಬ್ಲಿಕನ್ ಪಕ್ಷ ಅಧಿಕಾರದಲ್ಲಿದ್ದ ರಾಜ್ಯಗಳಿಂದಲೂ ಬೆಂಬಲ ಸಿಕ್ಕಿತ್ತು. ಹೀಗಾಗಿ ಅಮೆರಿಕದ ಕೋಟ್ಯಂತರ ಬಡವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಕೊರೊನಾ ಸಂದರ್ಭದಲ್ಲಿ ಕಷ್ಟ ಅನುಭವಿಸಿದ್ದರು ಎಂಬ ಆರೋಪ ಇದೆ. ಆದರೆ ಈ ಎಲ್ಲಾ ಅಡೆತಡೆಗೆ ಅಮೆರಿಕದ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದ್ದು, ಗುಡ್ ನ್ಯೂಸ್ ಕೊಟ್ಟಿದೆ.

Sub Head: 3 ಕೋಟಿ ಜನರಿಗೆ ಸೌಲಭ್ಯ

Sub Head: 3 ಕೋಟಿ ಜನರಿಗೆ ಸೌಲಭ್ಯ

ಸದ್ಯದ ಅಂಕಿ-ಅಂಶಗಳ ಪ್ರಕಾರ ಒಟ್ಟು 3 ಕೋಟಿಗೂ ಹೆಚ್ಚು ಅಮೆರಿಕನ್ನರಿಗೆ 'ಒಬಾಮಾ ಕೇರ್' ಯೋಜನೆ ಅಡಿ ಉಚಿತ ಆರೋಗ್ಯ ಸೇವೆ ಒದಗಿಸಲು ಸಿದ್ಧತೆ ನಡೆದಿದೆ. ಬಡವರಿಗೆ ಅತಿ ಕಡಿಮೆ ದರದ ಆರೋಗ್ಯ ವಿಮೆ ಅಥವಾ ಮೆಡಿಕಲ್ ಇನ್ಶೂರೆನ್ಸ್ ಇದಾಗಿದ್ದು, ಕೋಟ್ಯಂತರ ಜನರ ಪಾಲಿಗೆ ಸಂಜೀವಿನಿ ಎನ್ನಬಹುದು. ಅರ್ಜಿ ವಿಚಾರಣೆ ನಡೆಸಿದ ಅಮೆರಿಕನ್ ಸುಪ್ರೀಂಕೋರ್ಟ್ ಸರಿಯಾದ ಸಮಯದಲ್ಲಿ, ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ. ಅದರಲ್ಲೂ 7-2ರ ಅಂತರದಲ್ಲಿ ಕೋರ್ಟ್ ನಿರ್ಧಾರ ಗೆಲುವು ಕಂಡಿರುವುದು ಅಮೆರಿಕದ ಬಡರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಒಬಾಮಾ ಕೇರ್ v/s ಟ್ರಂಪ್

ಒಬಾಮಾ ಕೇರ್ v/s ಟ್ರಂಪ್

ಅಮೆರಿಕದ ವ್ಯವಸ್ಥೆಗೆ ಟ್ರಂಪ್ ಮಾಡಿದ ಎಡವಟ್ಟು ಒಂದೆರಡಲ್ಲ. ಅದರಲ್ಲೂ ಒಬಾಮಾ ಕೇರ್ ಬಗ್ಗೆ ಟ್ರಂಪ್ ತೋರಿದ ಅಸಡ್ಡೆ, ಅಮೆರಿಕದಲ್ಲಿ ದೊಡ್ಡ ಆಪತ್ತು ತಂದಿತ್ತು. ಇದು ಟ್ರಂಪ್-ಒಬಾಮಾ ನಡುವೆ ವಾಗ್ದಾಳಿಗೂ ದಾರಿಮಾಡಿಕೊಟ್ಟಿತ್ತು. 'ಕೊರೊನಾ' ಸೋಂಕಿನಿಂದ ಅಮೆರಿಕದಲ್ಲಿ ಲಕ್ಷಾಂತರ ಜನರು ಮೃತಪಟ್ಟಿದ್ದು ಟ್ರಂಪ್ ಕೈಗೊಂಡ ಈ ನಿರ್ಧಾರದಿಂದ ಎಂಬ ಆರೋಪವಿದೆ. 'ಒಬಾಮಾ ಕೇರ್'ಗೆ ಬ್ರೇಕ್ ಹಾಕಿದ್ದರಿಂದ ಬಡವರಿಗೆ ಚಿಕಿತ್ಸೆ ಸಿಗಲಿಲ್ಲ, ಹೀಗಾಗಿಯೇ ಅಮೆರಿಕದಲ್ಲಿ ಅತಿಹೆಚ್ಚು ಜನ ಕೊರೊನಾಗೆ ಬಲಿಯಾದರು ಎಂದು ಟ್ರಂಪ್ ವಿರೋಧಿಗಳು ಆರೋಪ ಮಾಡುತ್ತಿದ್ದರು. ಆದರೆ ಈಗ ಸ್ವತಃ ಅಮೆರಿಕದ ಸುಪ್ರೀಂಕೋರ್ಟ್, ಬಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಮಹತ್ವದ ಆದೇಶ ಹೊರಡಿಸಿದೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ ಈ ಮಟ್ಟಿಗೆ ಕೊರೊನಾ ಸೋಂಕು ಉಲ್ಬಣವಾಗಲು ಟ್ರಂಪ್ ಆಡಳಿತದ ಎಡವಟ್ಟು ದೊಡ್ಡದು. ಸಣ್ಣ ಸಣ್ಣ ವಿಚಾರಗಳಿಗೆ ಜಗಳ ತೆಗೆದು ಕೂರುತ್ತಿದ್ದ ಟ್ರಂಪ್ ತಜ್ಞರ ಮಾತನ್ನು ಕೇಳಲೇ ಇಲ್ಲ. ಕೊರೊನಾ ಬಗ್ಗೆ ಅಸಡ್ಡೆ ಮಾಡುತ್ತಲೇ ಬಂದರು. ಮಾಸ್ಕ್ ಬಗ್ಗೆ ಕೇರ್ ಲೆಸ್ ಆಗಿದ್ದರು. ಅಲ್ಲದೆ ಮಾಸ್ಕ್ ಹಾಕುವುದು ಬೇಡ ಅಂತಾ ತನ್ನ ಬೆಂಬಲಿಗರಿಗೆ ಆಜ್ಞೆ ಹೊರಡಿಸಿದ್ದರು. ಇದೆಲ್ಲದರ ಪರಿಣಾಮ ಅಮೆರಿಕದಲ್ಲಿ ಕೊರೊನಾ ವೈರಸ್ ಗೂಡು ಕಟ್ಟಿಬಿಟ್ಟಿತು. ಆದರೆ ಜೋ ಬೈಡನ್ ಖುದ್ದು ತಾವೇ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು, ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಸಿಬ್ಬಂದಿಗೆ ಶಿಸ್ತಿನ ಪಾಠ ಹೇಳಿದ್ದರು. ಇದು ಅಮೆರಿಕದಲ್ಲಿ ಸೋಂಕು ನಿಯಂತ್ರಣಕ್ಕೆ ದೊಡ್ಡ ಕೊಡುಗೆ ಕೊಟ್ಟಿತು.

‘ಕೊರೊನಾ’ ಕಂಟ್ರೋಲ್ ಆಯ್ತಾ..?

‘ಕೊರೊನಾ’ ಕಂಟ್ರೋಲ್ ಆಯ್ತಾ..?

ಕಳೆದ ಒಂದು ವರ್ಷದಲ್ಲಿ ಅಮೆರಿಕ ಹಿಂದೆಂದೂ ನೋಡದ, ಕಾಣದ ಸಂಕಷ್ಟ ಎದುರಿಸಿದೆ. ಸುಮಾರು 6 ಲಕ್ಷ 14 ಸಾವಿರ ಅಮೆರಿಕನ್ನರು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು 3 ಕೋಟಿ 43 ಲಕ್ಷ ಸೋಂಕಿತರು ಅಮೆರಿಕ ಒಂದರಲ್ಲೇ ಪತ್ತೆಯಾಗಿದ್ದಾರೆ. ಆದ್ರೆ ಬೈಡನ್ ಅಧಿಕಾರ ವಹಿಸಿಕೊಂಡ ಬಳಿಕ, ಕೊರೊನಾ ಹಾವಳಿ ಕ್ರಮೇಣ ತಗ್ಗಿದೆ. ಟ್ರಂಪ್ ಆಡಳಿತದಲ್ಲಿ 3ನೇ ಅಲೆಯಲ್ಲಿ ನಿತ್ಯ ಬರೋಬ್ಬರಿ 3 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಜೋ ಬೈಡನ್ ಆಡಳಿತ ಸೋಂಕು ನಿಯಂತ್ರಣಕ್ಕೆ ತರುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇದಕ್ಕೆ ಬೈಡನ್ ಕೈಗೊಂಡ ಹಲವು ಕಠಿಣ ಹಾಗೂ ಅರ್ಥಪೂರ್ಣ ಕ್ರಮಗಳೇ ಕಾರಣವಾಗಿವೆ.

English summary
US supreme court upheld the law which aims to provide health insurance for all Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X