ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನ

|
Google Oneindia Kannada News

ವಾಷಿಂಗ್ಟನ್‌, ಜೂ.08: ಕೋವಿಡ್‌ನ ಮೂಲದ ಬಗ್ಗೆ ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯವೊಂದು ನಡೆಸಿದ ಅಧ್ಯಯನವು ವುಹಾನ್‌ನ ಚೀನೀ ಪ್ರಯೋಗಾಲಯದಿಂದ ಕೊರೊನಾ ವೈರಸ್‌ ಸೋರಿಕೆಯಾಗಿರಬಹುದು ಎಂಬ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ. ಹಾಗೆಯೇ ಇದು ಸಮರ್ಥನೀಯ ಮತ್ತು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಕೂಡಾ ಈ ಅಧ್ಯಯನ ಹೇಳಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ವರದಿ ಮಾಡಿದೆ.

ಈ ಕೊರೊನಾ ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆ ನಡೆಸುವ ಈ ಅಧ್ಯಯನವನ್ನು ಮೇ 2020 ರಲ್ಲಿ ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್‌ಮೋರ್ ರಾಷ್ಟ್ರೀಯ ಪ್ರಯೋಗಾಲಯವು ರಾಜ್ಯ ಇಲಾಖೆ ಶಿಫಾರಸ್ಸಿನ ಮೇರೆಗೆ, ಟ್ರಂಪ್ ಆಡಳಿತದ ಅಂತಿಮ ತಿಂಗಳುಗಳಲ್ಲಿ ಆರಂಭಿಸಿದೆ ಎಂದು ವರದಿ ತಿಳಿಸಿದೆ.

ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್

ಲಾರೆನ್ಸ್ ಲಿವರ್ಮೋರ್ ಅವರ ಮೌಲ್ಯಮಾಪನವು ಕೊರೊನಾ ಸೋಂಕಿನ ಜೀನೋಮಿಕ್ ವಿಶ್ಲೇಷಣೆಯನ್ನು ಮಾಡಿದೆ ಎಂದು ಕೂಡಾ ವರದಿ ತಿಳಿಸಿದೆ. ಆದರೆ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಲಾರೆನ್ಸ್ ಲಿವರ್ಮೋರ್ ನಿರಾಕರಿಸಿದೆ.

US study concluded COVID-19 may have leaked from Wuhan lab, says report

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಕಳೆದ ತಿಂಗಳು ಕೊರೊನಾ ವೈರಸ್‌ನ ಉಗಮದ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಗುಪ್ತಚರ ಇಲಾಖೆಗೆ ಆದೇಶಿಸಿದ್ದರು. ''ಚೀನಾದಲ್ಲಿ ಪ್ರಾಣಿ ಮೂಲದಿಂದ ಕೊರೊನಾ ಸೋಂಕು ಹರಡಿತೇ ಅಥವಾ ಪ್ರಯೋಗಾಲಯದಲ್ಲಿನ ಅವಘಡದಿಂದ ಸೋಂಕು ಸೃಷ್ಟಿಯಾಯಿಯೇ ಎಂಬ ಎರಡು ಸಂಭವನೀಯ ಸನ್ನಿವೇಶಗಳ ಬಗ್ಗೆ ಗುಪ್ತಚರ ಇಲಾಖೆಯು ತನಿಖೆ ನಡೆಸುತ್ತಿದೆ. ಆದರೆ ಅವರು ಇನ್ನೂ ಒಂದು ಅಂತಿಮ ತೀರ್ಮಾನಕ್ಕೆ ಬಂದಿಲ್ಲ'' ಎಂದು ಬಿಡೆನ್‌ ತಿಳಿಸಿದ್ದರು.

ವುಹಾನ್ ಲ್ಯಾಬ್‌ ಸಿಬ್ಬಂದಿಗಳ ವೈದ್ಯಕೀಯ ದಾಖಲೆ ಬಿಡುಗಡೆ ಮಾಡಿ - ಚೀನಾಕ್ಕೆ ಡಾ. ಫೌಸಿ ಆಗ್ರಹ ವುಹಾನ್ ಲ್ಯಾಬ್‌ ಸಿಬ್ಬಂದಿಗಳ ವೈದ್ಯಕೀಯ ದಾಖಲೆ ಬಿಡುಗಡೆ ಮಾಡಿ - ಚೀನಾಕ್ಕೆ ಡಾ. ಫೌಸಿ ಆಗ್ರಹ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿನ ವರದಿಯೊಂದು ಚೀನಾದ ವುಹಾನ್ ಲ್ಯಾಬ್‌ನ ಮೂವರು ಸಂಶೋಧಕರು ನವೆಂಬರ್ 2019 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಆರೋಪಿಸಿತ್ತು. ಹಾಗೆಯೇ ಆ ಮೂವರು ಸಂಶೋಧಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಯು.ಎಸ್. ಸರ್ಕಾರದ ಮೂಲಗಳು ತಿಳಿಸಿವೆ.

US study concluded COVID-19 may have leaked from Wuhan lab, says report

ಆ ವರದಿಯ ಇಮೇಲ್‌ ಇತ್ತೀಚೆಗೆ ಸೋರಿಕೆಯಾಗಿದ್ದು ಕೊರೊನಾ ಮೂಲದ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿದೆ. ಈ ನಡುವೆ ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್‌ ಸೋರಿಕೆಯಾಗಿದೆ ಎಂದು ಬ್ರಿಟನ್‌ ಹೇಳಿತ್ತು. ವುಹಾನ್‌ ಲ್ಯಾಬ್‌ನಿಂದಲೇ ಕೊರೊನಾ ಸೋಂಕು ಹರಡಿದೆ ಎಂದು ತನ್ನ ಅಧಿಕಾರವಧಿಯಲ್ಲಿ ಆರೋಪಿಸುತ್ತಿದ್ದ ಟ್ರಂಪ್‌, ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಮತ್ತೆ ಚೀನಾ ವಿರುದ್ದ ವಾಗ್ದಾಳಿ ಆರಂಭಿಸಿದ್ದರು.

''ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ. ಈಗ ಎಲ್ಲರೂ, ಶತ್ರು ಎಂದು ಕರೆಯಲ್ಪಡುವವರೂ ಸಹ, ಅಧ್ಯಕ್ಷ ಟ್ರಂಪ್ ವುಹಾನ್ ಲ್ಯಾಬ್‌ನಿಂದ ಚೀನಾದ ವೈರಸ್ ಬಂದಿದೆ ಎಂದು ಹೇಳಿದ್ದು ಸರಿಯಾಗಿದೆ. ಅಧ್ಯಕ್ಷರು ಸರಿಯಾಗಿಯೇ ಹೇಳಿದ್ದರು ಎಂದು ಹೇಳಲು ಆರಂಭಿಸಿದ್ದಾರೆ'' ಎಂದು ಟ್ರಂಪ್‌ ಹೇಳಿದ್ದರು.

ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌ ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌

ಈ ಬಳಿಕ ಕೊರೊನಾ ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆಯೇ ಎಂಬ ಬಗ್ಗೆ ಪ್ರಮುಖ ಮಾಹಿತಿಗಳನ್ನು ನೀಡುವ ದಾಖಲೆ ಬಿಡುಗಡೆ ಮಾಡಲು ಯುಎಸ್ ಉನ್ನತ ಕೊರೊನಾವೈರಸ್ ಸಲಹೆಗಾರರಾದ ಡಾ. ಆಂಥೋನಿ ಫೌಸಿ ಆಗ್ರಹಿಸಿದ್ದಾರೆ. ಲ್ಯಾಬ್ ಸೋರಿಕೆಯ ಪರಿಣಾಮವಾಗಿ ಕೋವಿಡ್‌-19 ಹೊರಹೊಮ್ಮಿದೆಯೇ ಎಂಬ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡುವ ಒಂಬತ್ತು ಜನರ ವೈದ್ಯಕೀಯ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Covid-19 Origin : US study concluded COVID-19 may have leaked from Wuhan lab, says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X