ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ ಎದುರಲ್ಲೇ ಅಮೆರಿಕ ಲೇಡಿ ಸ್ಪೀಕರ್ ಮಾಡಿದ್ದೇನು? ವಿಡಿಯೋ ವೈರಲ್...

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 5: ತಮ್ಮ ವಿವಾದಾತ್ಮಕ ನಡೆಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದಾ ಸುದ್ದಿಯಲ್ಲಿರುತ್ತಾರೆ. ಅಮೆರಿಕ ಕೆಳಮನೆಯಾದ "ಹೌಸ್‌ ಆಫ್‌ ರಿಪ್ರಸೆಂಟಿಟಿವ್ಸ್'‌ನಲ್ಲಿ ಮಂಗಳವಾರ ರಾತ್ರಿ ನಡೆದ ಪ್ರಸಂಗ ಸಕತ್ ವೈರಲ್ ಆಗಿದೆ.

ಹೌಸ್ ಆಫ್ ರಿಪ್ರಸೆಂಟಿಟಿವ್ಸ್‌ನಲ್ಲಿ ಕಳೆದ ರಾತ್ರಿ ಡೊನಾಲ್ಡ್ ಟ್ರಂಪ್ ಭಾಷಣ ಮುಗಿದ ನಂತರ, ಟ್ರಂಪ್ ಭಾಷಣದ ಪ್ರತಿಗಳನ್ನು ಸದನದಲ್ಲೇ ಸ್ಪೀಕರ್ ನ್ಯಾನ್ಸಿ ಫೆಲೋಸಿ ಹರಿದು ಹಾಕಿದ್ದಾರೆ. ನ್ಯಾನ್ಸಿ ಫೆಲೋಸಿ ಅವರ ಈ ನಡೆಯು ಸಾಕಷ್ಟು ಪರ ಮತ್ತು ವಿರೋಧದ ಚರ್ಚೆಗೆ ನಾಂದಿ ಹಾಡಿದೆ.

ಡೊನಾಲ್ಡ್ ಟ್ರಂಪ್ ವಾಗ್ದಂಡನೆ: ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭಡೊನಾಲ್ಡ್ ಟ್ರಂಪ್ ವಾಗ್ದಂಡನೆ: ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭ

ಒಂದು ಕಡೆ ಸ್ಪೀಕರ್ ನ್ಸಾನ್ಸಿ ದೈರ್ಯಶಾಲಿ, ದುರಂಹಕಾರಿ ಟ್ರಂಪ್‌ಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೆ, ಶ್ವೇತ ಭವನ ಹಾಗೂ ಟ್ರಂಪ್ ಬೆಂಬಲಿಗರು ಸ್ಪೀಕರ್‌ದು ಸದನದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ವರ್ತನೆ, ಕೆಟ್ಟ ಸ್ಪೀಕರ್ ಎಂದು ಜರದಿದ್ದಾರೆ.

ಸ್ಪೀಕರ್ ನ್ಯಾನ್ಸಿ ಕೋಪಕ್ಕೆ ಕಾರಣ ಏನು?

ಸ್ಪೀಕರ್ ನ್ಯಾನ್ಸಿ ಕೋಪಕ್ಕೆ ಕಾರಣ ಏನು?

ಅಮೆರಿಕ ಕೆಳಮನೆಯಾಗಿರುವ ಹೌಸ್‌ ಆಫ್‌ ರಿಪ್ರಸೆಂಟಿಟಿವ್ಸ್‌ನಲ್ಲಿ ಮಂಗಳವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದನವನ್ನು ಉದ್ದೇಶಿಸಿ ಮಾತನಾಡಿದರು. ಟ್ರಂಪ್ ತಮ್ಮ ಭಾಷಣದಲ್ಲಿ ಮುಂಬರುವ ಚುನಾವಣಗೆ ತಮ್ಮ ಪಕ್ಷದ ಪ್ರಣಾಳಿಕೆಗಳ ಬಗ್ಗೆಯೂ ಮಾತನಾಡಿದರು. ನಮ್ಮ ವಿರೋಧಿಗಳ ಮಾತಿಗೆ ಅಮೆರಿಕನ್ನರು ತಲೆ ಕೆಡಿಸಿಕೊಳ್ಳಬೇಕಿಲ್ಲ. ನಾವು ಸಾಗುತ್ತಿರುವ ದಾರಿ ಸರಿಯಾಗಿಯೇ ಇದೆ ಎಂದರು. ಇದಕ್ಕೂ ಮೊದಲು ಟ್ರಂಪ್, ಭಾಷಣದ ಪ್ರತಿಯನ್ನು ಸ್ಪೀಕರ್ ನ್ಯಾನ್ಸಿ ಅವರಿಗೆ ನೀಡಿದರು. ಆಗ ನ್ಯಾನ್ಸಿ ಟ್ರಂಪ್ ಅವರ ಕೈ ಕುಲಕಲು ಮುಂದಾದರು. ಆದರೆ, ಟ್ರಂಪ್ ಮಾತ್ರ ನೋಡಿಯೂ ನೋಡದಂತೆ ತಿರುಗಿದರು.

ಪ್ರತಿಯನ್ನು ಒಂದೊಂದೇ ಹರಿದು ಹಾಕಿದರು

ಟ್ರಂಪ್ ಅವರ ವರ್ತನೆಯನ್ನು ಮೊದಲೇ ನಿರೀಕ್ಷಿಸಿದ್ದ ಸ್ಪೀಕರ್ ನ್ಯಾನ್ಸಿ, ಟ್ರಂಪ್ ಭಾಷಣ ಮುಗಿಯುತ್ತಿದ್ದಂತೆ ಎದ್ದು ನಿಂತು ಭಾಷಣದ ಪ್ರತಿಯನ್ನು ಒಂದೊಂದೇ ಹರಿದು ಹಾಕಿದರು. ಆದರೆ ಇದನ್ನು ಟ್ರಂಪ್ ನೋಡಲಿಲ್ಲ. ಸದನದಲ್ಲಿದ್ದವರು ಸ್ಪೀಕರ್ ನಡೆಯಿಂದ ದಂಗಾದರು. ಭಾಷಣದ ಪ್ರತಿಯನ್ನು ಹರಿದು ಹಾಕಿದ ದೃಶ್ಯ ಇದೀಗ ಜಗತ್ತಿನಾದ್ಯಂತ ಸಕತ್ ವೈರಲ್ ಆಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆ

ಕಣ್ಣೀರಿಟ್ಟ ಸ್ಪೀಕರ್ ನ್ಯಾನ್ಸಿ!

ಕಣ್ಣೀರಿಟ್ಟ ಸ್ಪೀಕರ್ ನ್ಯಾನ್ಸಿ!

ರಿಪಬ್ಲಿಕನ್ ಪಕ್ಷದ ಸದಸ್ಯರು ಟ್ರಂಪ್ ಅವರು ಭಾಷಣ ಮಾಡುತ್ತಿದ್ದಾಗ ಚಪ್ಪಾಳೆ ತಟ್ಟಿ ಅವರ ಮಾತಿಗೆ ಅನುಮೋದಿಸುತ್ತಿದ್ದರೆ, ಡೆಮಾಕ್ರಟಿಕ್ ಪಕ್ಷದ ಫೆಲೋಸಿ ಕೋಪದಿಂದ ಪದೇ ಪದೇ ತಲೆ ಅಲ್ಲಾಡಿಸುತ್ತಾ ಅಧ್ಯಕ್ಷರ ಮಾತುಗಳನ್ನು ನಂಬದೇ ಅಸಮಾಧಾನ ಸೂಚಿಸುತ್ತಿದ್ದರು. ಭಾಷಣ ಮುಗಿಯುತ್ತಿದ್ದಂತೆ ತಮ್ಮ ಆಸನದಿಂದ ಮೇಲೆದ್ದು ಎಲ್ಲರ ಮುಂದೆ ಪ್ರತಿಯನ್ನು ಹರಿದು ಹಾಕುವಾಗ, ತೀವ್ರ ಭಾವುಕರಾಗಿದ್ದು ಕಂಡು ಬಂತು.

ಸ್ಪೀಕರ್ ಮೇಲೆ ಟ್ರಂಪ್‌ಗೆ ಏಕೆ ಸಿಟ್ಟು?

ಸ್ಪೀಕರ್ ಮೇಲೆ ಟ್ರಂಪ್‌ಗೆ ಏಕೆ ಸಿಟ್ಟು?

ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿ ಜಾಯ್ ಬಿಡೆನ್ ವಿರುದ್ಧ ತನಿಖೆಗೆ ಆದೇಶಿಸಲು ಟ್ರಂಪ್ ಪ್ರಭಾವ ಬೀರಿದ್ದಾರೆ ಎಂಬ ವಾಗ್ದಂಡನೆಯನ್ನು ಸ್ಪೀಕರ್ ನ್ಯಾನ್ಸಿ ಅವರಿಂದ ಟ್ರಂಪ್ ಎದುರಿಸಿದ್ದಾರೆ. ವಾಗ್ದಂಡನೆ ಎದುರಿಸಿದ ನಂತರ "ಹೌಸ್‌ ಆಫ್‌ ರಿಪ್ರಸೆಂಟಿಟಿವ್ಸ್'‌ನಲ್ಲಿ ಡೊನಾಲ್ಡ್ ಟ್ರಂಪ್ ಮಾಡಿರುವ ಭಾಷಣದಲ್ಲೇ ಈ ರೀತಿಯ ಘಟನೆ ನಡೆದಿದೆ.

ಸ್ವಿಟ್ಜರ್ಲ್ಯಾಂಡ್‌ನಲ್ಲಿ ಯಡಿಯೂರಪ್ಪ-ಟ್ರಂಪ್ ಮುಖಾಮುಖಿ!ಸ್ವಿಟ್ಜರ್ಲ್ಯಾಂಡ್‌ನಲ್ಲಿ ಯಡಿಯೂರಪ್ಪ-ಟ್ರಂಪ್ ಮುಖಾಮುಖಿ!

ಆ ಸಂದರ್ಭದಲ್ಲಿ ಮಾಡಬೇಕಾದ ಕೆಲಸ ಅದು

ಆ ಸಂದರ್ಭದಲ್ಲಿ ಮಾಡಬೇಕಾದ ಕೆಲಸ ಅದು

ಭಾಷಣದ ಪ್ರತಿ ಹರಿದು ಹಾಕಿದ್ದರ ಬಗ್ಗೆ ಟ್ವೀಟ್ ಮಾಡಿರುವ ಸ್ಪೀಕರ್ ನ್ಯಾನ್ಸಿ ಅವರು, ಅಧ್ಯಕ್ಷರ ಭಾಷಣದ ಗೊಡ್ಡು ವಿಚಾರವನ್ನು ಪರಿಗಣಿಸಿ ಆ ಸಂದರ್ಭದಲ್ಲಿ ಮಾಡುವ ವಿನಯಶೀಲ ಕೆಲಸ ಅದಾಗಿತ್ತು ಎಂದಿದ್ದಾರೆ. ನಿಮ್ಮ ಕೆಲಸ ಮಾಡಿಸಿಕೊಳ್ಳಲು ಸ್ನೇಹಕ್ಕಾಗಿ ಕೈ ಚಾಚುವುದನ್ನು ಎಂದಿಗೂ ನಿಲ್ಲಿಸಬೇಡಿ ಎಂದು ನ್ಯಾನ್ಸಿ, ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.

ಕ್ರೇಜಿ ನ್ಯಾನ್ಸಿ ಎಂದಿದ್ದ ಟ್ರಂಪ್

ಕ್ರೇಜಿ ನ್ಯಾನ್ಸಿ ಎಂದಿದ್ದ ಟ್ರಂಪ್

ಡೆಮಾಕ್ರಟಿಕ್ ಪಕ್ಷದ ನಿಯಂತ್ರಣವಿರುವ "ಹೌಸ್‌ ಆಫ್‌ ರಿಪ್ರಸೆಂಟಿಟಿವ್ಸ್'ನಲ್ಲಿ ಆರು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ವಾಗ್ದಂಡನೆಗೆ ಒಳಗಾಗಿದ್ದರು. ತಮ್ಮ ಮೇಲೆ ವಾಗ್ದಂಡನೆ ಹೊರಿಸಿದ್ದಕ್ಕೆ ಸ್ಪೀಕರ್ ಅವರನ್ನು ಟ್ರಂಪ್, ವಂಚಕಿ, ಕ್ರೇಜಿ ನ್ಯಾನ್ಸಿ ಎಂದು ಟ್ವಿಟ್ಟರ್ ನಲ್ಲಿ ಕರೆದಿದ್ದರು. ಅಮೆರಿಕಾದ ಶ್ವೇತ ಭವನ ಸ್ಪೀಕರ್ ಅವರು ಭಾಷಣದ ಪ್ರತಿ ಹರಿದು ಹಾಕಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷರಿಗೆ ಅಗೌರವ ತೋರಿಸಿದ್ದಾರೆ ಎಂದು ಹೇಳಿದೆ.

English summary
US Speaker Nancy Pelosi Tearing Down Copies of The Donald Trump Speech in US House of the Representatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X