ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಲಕ್ಷ ರೂಪಾಯಿ ಕರೆಂಟ್ ಬಿಲ್, ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ ಖಾಲಿ..!

|
Google Oneindia Kannada News

1 ತಿಂಗಳ ಕರೆಂಟ್ ಬಿಲ್ ಮೊತ್ತ ಎಷ್ಟಿರಬಹುದು ಹೇಳಿ..? ಮಧ್ಯಮ ವರ್ಗದ ಜನರಿಗೆ 500 ರೂಪಾಯಿ ಬಂದರೆ ದೊಡ್ಡ ಹೊರೆ. ಇನ್ನು ಶ್ರೀಮಂತರ ಸಹವಾಸ ಯಾಕೆ ಬಿಡಿ. ಕೈಗಾರಿಕೆಗಳಲ್ಲಿ ಲಕ್ಷಾಂತರ ರೂಪಾಯಿ ಕರೆಂಟ್ ಬಿಲ್ ಬರೋದು ಮಾಮೂಲಿ. ಆದರೆ ಮಾಮೂಲಿ ಮನೆಗಳಲ್ಲೂ ಲಕ್ಷ ಲಕ್ಷ ರೂಪಾಯಿ ಮೊತ್ತದ ಕರೆಂಟ್ ಬಿಲ್ ಬಂದರೆ ಪರಿಸ್ಥಿತಿ ಹೇಗೆ ಇರಬೇಡಿ ಹೇಳಿ..? ಅಮೆರಿಕದ ಕೆಲ ರಾಜ್ಯಗಳು ಇಂತಹದ್ದೇ ಸ್ಥಿತಿಗೆ ಸಾಕ್ಷಿಯಾಗಿವೆ.

ಅಮೆರಿಕದ ದಕ್ಷಿಣದ ರಾಜ್ಯಗಳು ಚಳಿಗೆ ನಲುಗಿ ಹೋಗಿವೆ. ಆದರೆ ಇದೇ ಹೊತ್ತಲ್ಲಿ ಜನರಿಗೆ ಕರೆಂಟ್ ಶಾಕ್ ಕೂಡ ಹೊಡೆದಿದೆ. ಟೆಕ್ಸಾಸ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಳಿ ಅಬ್ಬರ ತಡೆಯಲಾಗಿಲ್ಲ. ಹತ್ತಾರು ಜನ ವಿಪರೀತ ಚಳಿಗೆ ಬಲಿಯಾಗಿ ಹೋಗಿದ್ದಾರೆ. ಇದೇ ಸಮಯದಲ್ಲಿ ಕರೆಂಟ್ ಕೂಡ ಕೈಕೊಟ್ಟಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಪವರ್ ಇದ್ದರೂ ಬಳಕೆ ಮಾಡಿಕೊಂಡವರು ಬಿಲ್ ನೋಡಿ ಶಾಕ್ ಆಗಿದ್ದಾರೆ. ಏಕೆಂದರೆ ಈ ತಿಂಗಳು ಟೆಕ್ಸಾಸ್‌ನ ಹಲವು ಮನೆಗಳಿಗೆ ಲಕ್ಷಾಂತರ ರೂಪಾಯಿ ಕರೆಂಟ್ ಬಿಲ್ ಬಂದಿದೆ.

‘ಸರ್ ನಂದು 10 ಲಕ್ಷ, ನಂದು 1 ಲಕ್ಷ’

‘ಸರ್ ನಂದು 10 ಲಕ್ಷ, ನಂದು 1 ಲಕ್ಷ’

ಟೆಕ್ಸಾಸ್‌ ರಾಜ್ಯದ ಹಲವು ನಗರ, ಟೌನ್‌ಗಳಲ್ಲಿ ವಾಸವಿರುವ ಜನರದ್ದು ಒಂದೊಂದು ರೀತಿಯ ಕರುಣಾಜನಕ ಕಥೆ. ಇವರ ಬದುಕನ್ನು ಚಳಿ ಬೀದಿಪಾಲು ಮಾಡಿದೆ. ಶ್ರೀಮಂತ ರಾಷ್ಟ್ರ ಎಂದು ಕರೆಸಿಕೊಳ್ಳುವ ಅಮೆರಿಕ ತನ್ನ ದೊಡ್ಡಸ್ಥಿಕೆ ಇಲ್ಲಿ ತೋರಿಸಲು ಆಗಿಲ್ಲ. ಚಳಿಯ ಹೊಡೆತಕ್ಕೆ ಜನಸಾಮಾನ್ಯರು ಸಿಲುಕಿ ನರಳುತ್ತಿದ್ದರೂ ಅವರನ್ನ ರಕ್ಷಿಸಲು ಆಗುತ್ತಿಲ್ಲ. ಟೆಕ್ಸಾಸ್‌ನಲ್ಲಿ 30 ವರ್ಷಗಳಲ್ಲೇ ಕಂಡು ಕೇಳರಿಯದ ಚಳಿ ಈಗ ವಕ್ಕರಿಸಿದೆ. ತಾಪಮಾನ -18 ಡಿಗ್ರಿಗೆ ಕುಸಿತ ಕಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ 70ಕ್ಕೂ ಹೆಚ್ಚು ಅಮೆರಿಕನ್ನರು ದಕ್ಷಿಣದ ರಾಜ್ಯಗಳಲ್ಲೇ ಬಲಿಯಾಗಿದ್ದಾರೆ. ಹೀಗೆ ಜನ ನರಳುವಾಗಲೇ ಲಕ್ಷ ಲಕ್ಷ ಮೊತ್ತದ ಕರೆಂಟ್ ಬಿಲ್ ಬಂದು ಜನರನ್ನು ಮತ್ತಷ್ಟು ನರಳುವಂತೆ ಮಾಡಿದೆ.

ಟೆಕ್ಸಾಸ್: ಭಾರಿ ಚಳಿಯಿಂದ 21 ಸಾವು, ವಿದ್ಯುತ್ ಪೂರೈಕೆ ಸ್ಥಗಿತಟೆಕ್ಸಾಸ್: ಭಾರಿ ಚಳಿಯಿಂದ 21 ಸಾವು, ವಿದ್ಯುತ್ ಪೂರೈಕೆ ಸ್ಥಗಿತ

 10 ಲಕ್ಷ ಜನರಿಗೆ ವಿದ್ಯುತ್ ಇಲ್ಲ

10 ಲಕ್ಷ ಜನರಿಗೆ ವಿದ್ಯುತ್ ಇಲ್ಲ

ಒಂದು ಗಂಟೆ ಕರೆಂಟ್ ಇಲ್ಲ ಅಂದ್ರೆ ಸಾಕು, ಜನರು ಚಡಪಡಿಸುತ್ತಾರೆ. ಹೀಗಿರುವಾಗ ಸುಮಾರು 4-5 ದಿನ ಟೆಕ್ಸಾಸ್ ಜನರು ವಿದ್ಯುತ್ ಕಂಡಿಲ್ಲ. ಹೀಗೆ ಹಿಮ ಬಿರುಗಾಳಿ ಪರಿಣಾಮ 10 ಲಕ್ಷಕ್ಕೂ ಹೆಚ್ಚು ಜನ ಈಗಲೂ ವಿದ್ಯುತ್ ಸಿಗದೆ ಪರದಾಡುತ್ತಿದ್ದಾರೆ. ಬೈಡನ್ ಸರ್ಕಾರ ವಿದ್ಯುತ್ ಲೈನ್‌ಗಳನ್ನ ಸರಿಪಡಿಸಲು ಟೆಕ್ಸಾಸ್ ಮತ್ತು ದಕ್ಷಿಣದ ಇತರ ರಾಜ್ಯಗಳಿಗೆ ಬೆಂಬಲ ನೀಡುತ್ತಿದೆ. ಆದರೆ ಟೆಕ್ಸಾಸ್ ಗವರ್ನರ್ ರಿಪಬ್ಲಿಕನ್ ಗ್ರೆಗ್ ಅಬಾಟ್ ಮತ್ತು ಬೈಡನ್ ತಂಡದ ನಡುವೆ ದೊಡ್ಡ ಭಿನ್ನಾಭಿಪ್ರಾಯ ತಲೆದೂರಿ, ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿದೆ. ಆದರೆ ಕರೆಂಟ್ ಸೌಲಭ್ಯ ಇರುವ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್ ಬಂದಿದೆ.

ಹವಾಮಾನ ಬದಲಾವಣೆ ಎಫೆಕ್ಟ್..?

ಹವಾಮಾನ ಬದಲಾವಣೆ ಎಫೆಕ್ಟ್..?

ಹೌದು, ಖುದ್ದು ಅಮೆರಿಕ ಸರ್ಕಾರವೇ ಈ ಹೇಳಿಕೆ ನೀಡಿದೆ. ಅಮೆರಿಕದ ದಕ್ಷಿಣ ರಾಜ್ಯಗಳ ಮೇಲೆ ಅತ್ಯಂತ ಭೀಕರವಾಗಿ ಶೀತ ಮಾರುತಗಳು ದಾಳಿ ಮಾಡಿರುವುದರ ಹಿಂದೆ ಹವಾಮಾನ ಬದಲಾವಣೆ ಪರಿಣಾಮವಿದೆ. ಹೀಗಾಗಿ ನಾವು ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಬೈಡನ್ ನೇತೃತ್ವದ ಸರ್ಕಾರ ಎಚ್ಚರಿಕೆ ರವಾನಿಸಿದೆ. ಈ ಪರಿಸ್ಥಿತಿಯಲ್ಲಿ ಜನರಿಗೆ ಕನಿಷ್ಠ ವಿದ್ಯುತ್ ಪೂರೈಕೆ ಮಾಡುವುದಕ್ಕೂ ಪರದಾಡುತ್ತಿದೆ ಜಗತ್ತಿನ ದೊಡ್ಡಣ್ಣ. ಜನ ಕುಡಿವ ನೀರಿಗೂ ಪರದಾಡುತ್ತಿದ್ದಾರೆ. ಊಟ ಸಿಗದೆ ನರಳುತ್ತಿದ್ದಾರೆ. ಈ ನಡುವೆ ರಿಪಬ್ಲಿಕನ್ ಪಕ್ಷದ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಹಾಗೂ ಶ್ವೇತಭವನದ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ.

ಭೂಮಿ ಮೇಲೆ ಮತ್ತೆ ಹಿಮಯುಗ..? ಕೊತ ಕೊತ ನೀರು ಕೂಡ ಮಂಜುಗಡ್ಡೆ..!ಭೂಮಿ ಮೇಲೆ ಮತ್ತೆ ಹಿಮಯುಗ..? ಕೊತ ಕೊತ ನೀರು ಕೂಡ ಮಂಜುಗಡ್ಡೆ..!

ಟೆಕ್ಸಾಸ್‌ನ ರಸ್ತೆಗಳು ಜಾರುತ್ತಿವೆ..!

ಟೆಕ್ಸಾಸ್‌ನ ರಸ್ತೆಗಳು ಜಾರುತ್ತಿವೆ..!

ಸ್ವಲ್ಪ ಮಳೆ ಬಿದ್ದರೆ ಸಾಕು, ಗಾಡಿ ಓಡಿಸುವವರ ಜೀವ ಕೈಗೆ ಬಂದಿರುತ್ತೆ. ಹೀಗಿರುವಾಗ ಅಮೆರಿಕದ ಹಿಮ ಬಿರುಗಾಳಿಯಿಂದ ಟೆಕ್ಸಾಸ್‌ನ ರಸ್ತೆಗಳ ಮೇಲೆ ಭಾರಿ ಪ್ರಮಾಣದ ಮಂಜುಗಡ್ಡೆ ಕೂತಿದೆ. ಹೀಗಾಗಿ ವಾಹನ ಚಾಲನೆ ಕೂಡ ಕಷ್ಟಕರವಾಗಿದೆ. ಕಾಲಿಟ್ಟರೆ ಸಾಕು ಜಾರುಬಂಡಿಯಂತೆ ರಸ್ತೆಗಳು ತಳ್ಳುತ್ತಿವೆ. ಹೀಗಾಗಿ ಜನ ಗಾಡಿ ಒಡಿಸಲು ಧೈರ್ಯ ಮಾಡುತ್ತಿಲ್ಲ. ಮೇಲಾಗಿ ಎಷ್ಟೋ ಕಾರ್‌ಗಳ ಡೋರ್ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರ್‌ಗಳ ಡೋರ್ ಪೂರ್ತಿ ಮಂಜುಗಡ್ಡೆಯಿಂದ ಕಟ್ಟಿಕೊಂಡಿರುತ್ತದೆ ಅಥವಾ ಶೀತಗಾಳಿಗೆ ಇಂಜಿನ್ ಸೀಜ್ ಆಗಿರುವ ಉದಾಹರಣೆಗಳು ಕೇಳಿಬಂದಿವೆ. ಇನ್ನು ಕೆಲ ದಿನಗಳ ಕಾಲ ಇದೇ ಪರಿಸ್ಥಿತಿ ಅಮೆರಿಕದ ದಕ್ಷಿಣದ ರಾಜ್ಯಗಳನ್ನು ಕಾಡುವುದು ಪಕ್ಕಾ.

English summary
US southern state peoples shocked by their electricity bill, some peoples got more than 10 lakh rupees bill for a single month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X