ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಮೇಲೆ ಇನ್ನಷ್ಟು ನಿರ್ಬಂಧ ಹೇರಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಮೇ 9: ಅಮೆರಿಕಾ ಹಾಗೂ ಇರಾನ್ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು ಇರಾನ್ ಮೇಲೆ ಇನ್ನಷ್ಟು ನಿರ್ಬಂಧ ಹೇರಲು ಅಮೆರಿಕ ನಿರ್ಧರಿಸಿದೆ.

ಉಕ್ಕು ಹಾಗೂ ಗಣಿ ಉದ್ಯಮದ ಮೇಲೆ ನಿರ್ಬಂಧವನ್ನು ಹೇರಿ ಅಮೆರಿಕ ಆದೇಶ ಹೊರಡಿಸಿದೆ.
ಇದರಿಂದ ಇರಾನಿನ ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ ಹಾಗೂ ತಾಮ್ರ ಉದ್ಯಮದ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಲಿದೆ.

ಇರಾನ್‌ಗೆ ಇನ್ನಷ್ಟು ಆದಾಯ ಕೊರತೆಯಾಗುವ ಸಾಧ್ಯತೆ ಇದೆ. ಈ ಉದ್ಯಮಗಳಿಂದ ಬರುತ್ತಿದ್ದ ಹಣವನ್ನು ಭಯೋತ್ಪಾದಕ ಸಂಘಟನೆಗಳಿಗೆ ನೆರವು, ಮಿಲಿಟರಿ ವಿಸ್ತರಣೆಗೆ ಇರಾನ್ ಬಳಸುವ ಸಾಧ್ಯತೆ ಇತ್ತು.

US slaps new sanction on Iran

ಒಟ್ಟಾರೆ ಇರಾನ್‌ನ ಅಣ್ವಸ್ತ್ರ ಹಾಗೂ ಕ್ಷಿಪಣಿ ಪರೀಕ್ಷೆ ಮಧ್ಯಪ್ರಾಚ್ಯದಲ್ಲಿ ಇರಾನ್ ನ ಪ್ರಭಾವ ಕುಗ್ಗಿಸುವುದು ನಿರ್ಬಂಧನ ಮುಂದುವರೆದ ಆದೇಶದ ಉದ್ದೇಶವಾಗಿದೆ.

ಇರಾನ್ ಮೇಲೆ ನಿರ್ಬಂಧ ಆರಂಭಿಸಿ ಸರಿಯಾಗಿ ಒಂದು ವರ್ಷವಾದ ಬಳಿಕ ಈ ಹೊಸ ಆದೇಶದ ಮೇಲೆ ಇದರಿಂದ ಗಣಿ ಉದ್ಯಮದಲ್ಲಿ ಇರಾನ್ ಜೊತೆ ವ್ಯವಹಾರ ಹೊಂದಿರುವ ಕೆಲ ದೇಶಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ಈ ನಿರ್ಬಂಧದ ಆದೇಶದ ನಡುವೆಯೂ ಇರಾನ್ ಸರ್ಕಾರದೊಂದಿಗೆ ಮಾತುಕತೆಗೆ ಅಮೆರಿಕ ಬದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

English summary
The US on Wednesday imposed fresh sanction on Iran targetting its steel and mining industries, amid rising tensions between the two nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X