ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಕ್ರಮೆಂಟೊದಲ್ಲಿ ಗುಂಡಿನ ದಾಳಿ, 6 ಮಂದಿ ದುರ್ಮರಣ

|
Google Oneindia Kannada News

ಸ್ಯಾಕ್ರಮೆಂಟೊ, ಏಪ್ರಿಲ್ 03: ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಡೌನ್‌ಟೌನ್‌ನಲ್ಲಿ ಗುಂಡಿನ ದಾಳಿಯ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಭಾನುವಾರ ತಿಳಿಸಿದ್ದಾರೆ.

"ಕನಿಷ್ಠ 15 ಮಂದಿ ಗುಂಡಿನ ದಾಳಿಗೆ ಸಿಲುಕಿದ್ದಾರೆ" ಎಂದು ಸ್ಯಾಕ್ರಮೆಂಟೊ ಪೊಲೀಸರು ಹೇಳಿದ್ದಾರೆ, ಈ ಪೈಕಿ ಆರು ಮಂದಿ ಮೃತಪಟ್ಟಿದ್ದು, ಮಿಕ್ಕವರಿಗೆ ಗಾಯಗಳಾಗಿವೆ.

ಹಿಂಸಾಚಾರ ಸಂಭವಿಸಿದ ಪ್ರದೇಶವನ್ನು ತಪ್ಪಿಸುವಂತೆ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ಗುಂಡಿನ ದಾಳಿ ನಿಂತಿದ್ದು, ದಾಳಿಕೋರರ ಬಗ್ಗೆ ವಿವರ ತಿಳಿಯಬೇಕಿದೆ.

Provided by Deutsche Welle

"ಪೊಲೀಸ್ ತುಕಡಿ ನಿಯೋಜನೆ ಇರಲಿದ್ದು, ಮತ್ತು ಪ್ರದೇಶವನ್ನು ಸಕ್ರಿಯವಾಗಿ ನಿಗಾದಲ್ಲಿರಿಸಲಾಗಿದೆ" ಎಂದು ಪೊಲೀಸರು ಹೇಳಿದ್ದು, ಹೆಚ್ಚಿನ ವಿವರಗಳನ್ನು ನೀಡಿಲ್ಲ.

ವಿವರ ನೀಡಿದ ಪೊಲೀಸರು:
ಕ್ಯಾಲಿಫೋರ್ನಿಯಾದ ಪೊಲೀಸರು ಡೌನ್‌ಟೌನ್ ಸ್ಯಾಕ್ರಮೆಂಟೊದಲ್ಲಿ ಭಾನುವಾರ ಮುಂಜಾನೆ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕನಿಷ್ಠ ಒಬ್ಬ ಶಂಕಿತನನ್ನು ಹುಡುಕುತ್ತಿದ್ದಾರೆ, ಈ ದುರ್ಘಟನೆ ಆರು ಜೀವಗಳ ಸಾವಿಗೆ ಕಾರಣವಾಗಿದು, 10 ಜನರನ್ನು ಗಾಯಗೊಳಿಸಿದೆ.

''ಮಧ್ಯರಾತ್ರಿ 2 ಗಂಟೆಗೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಗುಂಡಿನ ಸದ್ದು ಕೇಳಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗ, ಬೀದಿಯಲ್ಲಿ ದೊಡ್ಡ ಜನಸಮೂಹ ಜಮಾಯಿಸಿರುವುದನ್ನು ಮತ್ತು ಆರು ಜನರು ಸತ್ತಿರುವುದನ್ನು ಅವರು ಕಂಡುಕೊಂಡರು. ಇನ್ನೂ ಗಾಯಗೊಂಡಿದ್ದ 10 ಮಂದಿಯನ್ನು ಆಸ್ಪತ್ರೆಗಳಿಗೆ ಸಾಗಿಸಿದರು. ಗಾಯಗೊಂಡವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ,'' ಎಂದು ಸ್ಯಾಕ್ರಮೆಂಟೊ ಪೊಲೀಸ್ ಮುಖ್ಯಸ್ಥ ಕ್ಯಾಥಿ ಲೆಸ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಬ್ಬ ಅಥವಾ ಹೆಚ್ಚಿನ ಶಂಕಿತರು ಭಾಗಿಯಾಗಿದ್ದಾರೆಯೇ ಎಂದು ಅಧಿಕಾರಿಗಳಿಗೆ ತಿಳಿದಿಲ್ಲ ಮತ್ತು ಯಾರು ಹೊಣೆಗಾರರನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೇಳುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ಗನ್ ಪ್ರಕಾರದ ಬಗ್ಗೆ ನಿರ್ದಿಷ್ಟತೆಯನ್ನು ನೀಡಲಿಲ್ಲ.

ಗುಂಡಿನ ದಾಳಿಯ ಸ್ವಲ್ಪ ಸಮಯದ ನಂತರ, ಟ್ವಿಟ್ಟರ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಜನರು ಕ್ಷಿಪ್ರ ಗುಂಡಿನ ಸದ್ದಿನ ನಡುವೆ ರಸ್ತೆಯ ಮೂಲಕ ಓಡುತ್ತಿರುವುದನ್ನು ತೋರಿಸುತ್ತದೆ. ದೃಶ್ಯದಲ್ಲಿ ಅನೇಕ ಆಂಬ್ಯುಲೆನ್ಸ್‌ಗಳನ್ನು ವಿಡಿಯೋ ತೋರಿಸಿದೆ.

ಸ್ಯಾಕ್ರಮೆಂಟೊ ಮೇಯರ್ ಡ್ಯಾರೆಲ್ ಸ್ಟೈನ್‌ಬರ್ಗ್ ಟ್ವೀಟ್ ಮಾಡಿ, ''ಈ ಬೆಳಗ್ ಘಟನೆ ಬಗ್ಗೆ ಆಘಾತವಾಗಿದ್ದು, ನನ್ನ ದುಃಖವನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಸತ್ತವರ ಮತ್ತು ಗಾಯಗೊಂಡವರ ಸಂಖ್ಯೆಯನ್ನು ಗ್ರಹಿಸುವುದು ಕಷ್ಟ. ಈ ದುರಂತ ಘಟನೆಯಲ್ಲಿ ನಿಖರವಾಗಿ ಏನಾಯಿತು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ನಿರೀಕ್ಷಿಸುತ್ತೇವೆ.'' ಎಂದಿದ್ದಾರೆ. (Reuters, AP)

English summary
Police have closed off parts of Sacramento, California following a deadly shooting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X