ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸೇನೆ ವಿರುದ್ಧ ತೊಡೆತಟ್ಟಲು ಸಜ್ಜಾಗುತ್ತಿರುವ ಅಮೆರಿಕ ಸೇನೆ

|
Google Oneindia Kannada News

ವಾಷಿಂಗ್ಟನ್, ಜೂನ್ 26: ಗಡಿ ರಾಷ್ಟ್ರಗಳೊಂದಿಗೆ ಕಾಲ್ಕೆರೆದುಕೊಂಡು ಕಚ್ಚಾಟಕ್ಕೆ ಹೋಗುತ್ತಿರುವ, ಚೀನಾ ವಿರುದ್ಧ ತೊಡೆತಟ್ಟಲು ಅಮೆರಿಕ ಸಜ್ಜಾಗುತ್ತಿದೆ.

ಯುರೋಪಿಯನ್ ರಾಷ್ಟ್ರಗಳಲ್ಲಿನ ತನ್ನ ಸೇನೆಯ ಸಂಖ್ಯೆಯನ್ನು ಕಡಿಮೆಗೊಳಿಸಿ ಚೀನಾ ಸುತ್ತಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಯನ್ನು ನಿಯೋಜಿಸಲು ಸಜ್ಜಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.

ಗಲ್ವಾನ್ ಗಡಿ ಸಂಘರ್ಷ: ಭಾರತದ ಹುತಾತ್ಮ ಯೋಧರಿಗೆ ಅಮೆರಿಕ ಕಂಬನಿಗಲ್ವಾನ್ ಗಡಿ ಸಂಘರ್ಷ: ಭಾರತದ ಹುತಾತ್ಮ ಯೋಧರಿಗೆ ಅಮೆರಿಕ ಕಂಬನಿ

ಚೀನಾದ ಕಮ್ಯುನಿಸ್ಟ್ ಪಕ್ಷದ ನಡೆಗಳಿಂದ ಭಾರತಕ್ಕೆ, ವಿಯೆಟ್ನಾಮ್ ಗೆ ಮಲೇಷ್ಯಾ, ಇಂಡೋನೇಷ್ಯಾ ಹಾಗೂ ದಕ್ಷಿಣ ಚೀನಾ ಸಮುದ್ರಕ್ಕೆ ಅಪಾಯ ಎದುರಾಗುತ್ತಿದೆ. ಈ ಅಪಾಯಗಳನ್ನು ಎದುರಿಸಲು ಅಮೆರಿಕಾ ಸೇನೆಯನ್ನು ಬಳಕೆ ಮಾಡಿಕೊಳ್ಳುವುದರತ್ತ ಗಮನ ಹರಿಸಿದ್ದೇವೆ ಎಂದು ಪೋಂಪಿಯೊ ಹೇಳಿದ್ದಾರೆ.

US Shifting Military To Face Chinese Threat To India And Southeast Asia

ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಮುಂದಾಗಿ, ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣಗೊಳಿಸಿದ್ದಕ್ಕೆ ಚೀನಾವನ್ನು ದುರಳ ನಡೆ ಹೊಂದಿರುವ ರಾಷ್ಟ್ರ ಎಂದು ಪಾಂಪಿಯೋ ಜರಿದಿದ್ದರು.

ನ್ಯಾಟೋ ಸೇರಿದಂತೆ ಹಲವು ಸಾಂಸ್ಥಿಕ ರಚನೆಯ ಮೂಲಕ ಮುಕ್ತ ಪ್ರಪಂಚ ಮಾಡಿರುವ ಎಲ್ಲಾ ಅಭಿವೃದ್ಧಿಗಳನ್ನೂ ಚೀನಾದ ಕಮ್ಯುನಿಸ್ಟ್ ಪಕ್ಷ ಹಾಳುಗೆಡವಲು ಯತ್ನಿಸುತ್ತಿದ್ದು, ತನಗೆ ಸಹಕಾರಿಯಾಗಬಲ್ಲ ನಿಯಮಗಳನ್ನು ರೂಪಿಸುತ್ತಿದೆ ಎಂದು ಪೊಂಪೊಯೋ ಆರೋಪ ಮಾಡಿದ್ದಾರೆ.

ಜರ್ಮನಿಯಲ್ಲೇಕೆ ಅಮೆರಿಕ ಸೇನಾ ಸಿಬ್ಬಂದಿಗಳ ಇರುವಿಕೆಯನ್ನು ಕಡಿಮೆಗೊಳಿಸಿದೆ ಎಂಬ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

ಅಮೆರಿಕ ಯುರೋಪ್ ನಿಂದ ತನ್ನ ಸೇನಾ ಸಿಬ್ಬಂದಿಗಳನ್ನು ಕಡಿತಗೊಳಿಸುತ್ತಿದೆಯೆಂದರೆ, ಅದಕ್ಕೆ ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರಗಳಲ್ಲಿ ಚೀನಾದಿಂದ ಎದುರಾಗಿರುವ ಅಪಾಯಗಳೂ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಿದ್ದು, ಯುರೋಪ್ ನಿಂದ ಅಮೆರಿಕಾ ಸೇನೆಗಳನ್ನು ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದಿಂದ ಉಂಟಾಗಿರುವ ಅಪಾಯವನ್ನು ಎದುರಿಸಲು ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

English summary
JThe Chinese threat to India and Southeast Asia is one of the reasons the United States is reducing its troop presence in Europe, US Secretary of State Mike Pompeo said on Thursday in response to a question at the Brussels Forum virtual conference .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X