ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಜೊ ಬೈಡನ್‌ರ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ನೇಮಕ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 24: ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಸರ್ಜನ್ ಜನರಲ್ ಆಗಿ ಡಾ. ವಿವೇಕ್ ಮೂರ್ತಿ ನೇಮಕಗೊಂಡಿದ್ದು, ಅಮೆರಿಕ ಸೆನೆಟ್ ದೃಢಪಡಿಸಿದೆ.

ಅಮೆರಿಕವನ್ನು ಕೋವಿಡ್-19 ಸೋಂಕು ಇನ್ನಿಲ್ಲದಂತೆ ಕಾಡಿದ್ದು ಈ ಸಂದರ್ಭದಲ್ಲಿ ವಿವೇಕ್ ಮೂರ್ತಿಯವರಿಗೆ ಸರ್ಕಾರ ಬಹಳ ಮುಖ್ಯ ಜವಾಬ್ದಾರಿ ನೀಡಿದೆ. 43 ವರ್ಷದ ಡಾ ಮೂರ್ತಿಯವರು ಎರಡನೇ ಬಾರಿಗೆ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕಗೊಳ್ಳುತ್ತಿದ್ದಾರೆ. 57-43ರ ಮತಗಳೊಂದಿಗೆ ವಿವೇಕ್ ಮೂರ್ತಿಯವರ ನೇಮಕವಾಗಿದೆ.

ಕನ್ನಡಿಗ ವಿವೇಕ್ ಮೂರ್ತಿಗೆ ಅಮೆರಿಕ ಸರ್ಜನ್ ಜನರಲ್ ಹುದ್ದೆಕನ್ನಡಿಗ ವಿವೇಕ್ ಮೂರ್ತಿಗೆ ಅಮೆರಿಕ ಸರ್ಜನ್ ಜನರಲ್ ಹುದ್ದೆ

2013ರಲ್ಲಿ ಡಾ ವಿವೇಕ್ ಮೂರ್ತಿ ಅವರನ್ನು ಬರಾಕ್ ಒಬಾಮಾ ಸರ್ಜನ್ ಜನರಲ್ ಆಗಿ ನೇಮಕ ಮಾಡಿಕೊಂಡಿದ್ದರು. ಇದೀಗ ಎರಡನೇ ಬಾರಿ ಅದೃಷ್ಟ ಒಲಿದುಬಂದಿದೆ.

US Senate Confirms Indian-American Physician Vivek Murthy As Surgeon General

2011 ರಲ್ಲಿ, ಅಂದಿನ ಅಧ್ಯಕ್ಷ ಬರಾಕ್ ಅವರು, ಆರೋಗ್ಯ ಪ್ರಚಾರ ಮತ್ತು ಸಮಗ್ರ ಮತ್ತು ಸಾರ್ವಜನಿಕ ಆರೋಗ್ಯದ ಸಲಹಾ ಗುಂಪಿನಲ್ಲಿ ಸೇವೆ ಸಲ್ಲಿಸಲು ವಿವೇಕ್ ಮೂರ್ತಿಯವರನ್ನು ನೇಮಕ ಮಾಡಿದ್ದರು.

ಅಮೆರಿಕ ಅಧ್ಯಕ್ಷರ ಸರ್ಜನ್ ಜನರಲ್ ಆಗಿ ಮತ್ತೊಮ್ಮೆ ಸೇವೆ ಸಲ್ಲಿಸಲು ಸೆನೆಟ್ ಅವಕಾಶ ನೀಡಿದ್ದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ.

ಕಳೆದ ವರ್ಷ ನಾವು ರಾಷ್ಟ್ರದಲ್ಲಿ ಬಹಳ ಕಷ್ಟಗಳನ್ನು ಸಹಿಸಿಕೊಂಡಿದ್ದೇವೆ, ರಾಷ್ಟ್ರವನ್ನು ಕೊರೊನಾ ಮುಕ್ತ ಮಾಡಲು ಮತ್ತು ಭವಿಷ್ಯದಲ್ಲಿ ಉತ್ತಮ ಆರೋಗ್ಯಕರ ಮಕ್ಕಳನ್ನು ಸೃಷ್ಟಿಸಲು ಸಹಾಯ ಮಾಡಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ ಎಂದು ಡಾ ವಿವೇಕ್ ಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

English summary
Indian-American physician Vivek Murthy has been confirmed by the Senate as President Joe Biden's surgeon general, a role in which his top priority would be responding to the coronavirus pandemic that has severely hit the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X