ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಮೇಲೆ ಮತ್ತೆ ದಾಳಿ ನಡೆಯಬಹುದು, 7 ಸುತ್ತಿನ ಕೋಟೆಯಾಯ್ತು ‘ಕ್ಯಾಪಿಟಲ್ ಹಿಲ್‌’

|
Google Oneindia Kannada News

ಸಂಸತ್ ಕಟ್ಟಡಕ್ಕೆ ನುಗ್ಗಿ ಟ್ರಂಪ್ ಬೆಂಬಲಿಗರು ದಾಳಿ ನಡೆಸಿ 2 ತಿಂಗಳು ಕಳೆಯುವ ಮೊದಲೇ ಮತ್ತೊಮ್ಮೆ ಇದೇ ರೀತಿ ದಾಳಿ ನಡೆಯುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಈ ಬಗ್ಗೆ ಅಮೆರಿಕದ ಪೊಲೀಸ್ ಇಲಾಖೆ ಹಾಗೂ ಎಫ್‌ಬಿಐ ಸೇರಿದಂತೆ ಭದ್ರತಾ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಹೀಗಾಗಿ ಮತ್ತೊಮ್ಮೆ ಅಮೆರಿಕದ ಸಂಸತ್ ಕಟ್ಟಡ 'ಕ್ಯಾಪಿಟಲ್ ಹಿಲ್' 7 ಸುತ್ತಿನ ಕೋಟೆಯಾಗಿ ಮಾರ್ಪಟ್ಟಿದೆ.

ಅಂದಹಾಗೆ ಇತ್ತೀಚೆಗೆ ನಡೆದ 'ಕನ್ಸರ್ವೇಟಿವ್ ಪೊಲಿಟಿಕಲ್ ಕಾನ್ಫರೆನ್ಸ್'ನಲ್ಲಿ ಟ್ರಂಪ್ ಭಾಷಣದ ಬಳಿಕ ಈ ಬೆಳವಣಿಗೆ ನಡೆದಿದೆ. ಟ್ರಂಪ್ 2024ರ ಚುನಾವಣೆಗೂ ತಾನೇ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಎಂಬಂತೆ ಭಾಷಣ ಮಾಡಿದ್ದರು.

ಬರೀ ಸುಳ್ಳು, ಹಸಿ ಹಸಿ ಸುಳ್ಳು..! 2024ರ ಚುನಾವಣೆಗೆ ನಿಲ್ಲುವೆ ಎಂದ ಟ್ರಂಪ್..!ಬರೀ ಸುಳ್ಳು, ಹಸಿ ಹಸಿ ಸುಳ್ಳು..! 2024ರ ಚುನಾವಣೆಗೆ ನಿಲ್ಲುವೆ ಎಂದ ಟ್ರಂಪ್..!

ಬಳಿಕ ಟ್ರಂಪ್ ವಿರುದ್ಧ ಸ್ವಪಕ್ಷೀಯರೇ ಗರಂ ಆಗಿದ್ದರು. ಇಷ್ಟೆಲ್ಲಾ ಅವಾಂತರ ನಡೆದು ಒಂದೆರಡು ದಿನ ಕಳೆಯುವ ಮೊದಲೇ ಭಯಾನಕ ಸಂಗತಿಯೊಂದು ರಿವೀಲ್ ಆಗಿದೆ. 'ಕ್ಯಾಪಿಟಲ್ ಹಿಲ್' ಮೇಲೆ ಜ. 6ರಂದು ನಡೆದಿದ್ದ ಭೀಕರ ದಾಳಿ ರೀತಿಯಲ್ಲೇ ಮತ್ತೊಮ್ಮೆ ದಾಳಿ ನಡೆಯಲಿದೆ ಎಂಬ ಮುನ್ನೆಚ್ಚರಿಕೆ ಅಮೆರಿಕದ ಪ್ರಜೆಗಳನ್ನ ನಡುಗಿಸಿದೆ.

 ಸೇನೆ, ಭದ್ರತಾ ಸಿಬ್ಬಂದಿ ನಿಯೋಜನೆ

ಸೇನೆ, ಭದ್ರತಾ ಸಿಬ್ಬಂದಿ ನಿಯೋಜನೆ

ಜನವರಿ 6ರಂದು ನಡೆದಿದ್ದ ದಾಳಿ ಬಳಿಕ ಅಮೆರಿಕದ ಸಂಸತ್ ಕಟ್ಟಡ ಕ್ಯಾಪಿಟಲ್ ಹಿಲ್‌ಗೆ ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಈಗ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಕ್ಯಾಪಿಟಲ್ ಹಿಲ್‌ ಸುತ್ತಲೂ ಹದ್ದಿನ ಕಣ್ಣಿಡಲಾಗಿದೆ. ಪ್ರತಿಭಟನೆ, ಹೋರಾಟಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅನುಮಾನ ಬಂದರೆ ಅಂತಹ ವ್ಯಕ್ತಿಗಳನ್ನ ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಅಮೆರಿಕದ ಪೊಲೀಸರು. ಹಾಗೇ ಜನವರಿ 6ರ ದಾಳಿಯಲ್ಲಿ ಭಾಗಿಯಾಗಿ, ಎಸ್ಕೇಪ್ ಆಗಿರುವ ಹಲವು ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ.

ಎಲ್ಲೋ ಹೋದ್ರು ಅವರೆಲ್ಲಾ..?

ಎಲ್ಲೋ ಹೋದ್ರು ಅವರೆಲ್ಲಾ..?

ಬೈಡನ್ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಅಮೆರಿಕ ಪೊಲೀಸ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕ್ಯಾಪಿಟಲ್ ಹಿಲ್ ಗಲಭೆಕೋರರ ಹೆಡೆಮುರಿ ಕಟ್ಟಲು ಖೆಡ್ಡಾ ತೋಡಿದ್ದಾರೆ. ಹೀಗೆ ಎಲ್ಲೆಲ್ಲಿ ಹಿಂಸಾಚಾರ ನಡೆಸಿದ್ದವರು ಅಡಗಿದ್ದಾರೆ ಎಂಬುದನ್ನ ಹುಡುಕುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಕಿರಾತಕರು, ತಮ್ಮ ಮೊಬೈಲ್‌ಗಳನ್ನು ನಾಶ ಮಾಡುವ ಜೊತೆಗೆ ಸೋಷಿಯಲ್ ಮೀಡಿಯಾಗಳಿಂದ ಓಡಿ ಬಂದಿದ್ದಾರೆ. ಆ ದಿನ ಅಂದರೆ ಜನವರಿ 6ರಂದು ಹಿಂಸೆ ನಡೆಯುವಾಗ ಹಾಕಿದ್ದ ಪ್ರಚೋದನಕಾರಿ ಪೋಸ್ಟ್‌ಗಳನ್ನ ಕೂಡ ಸದ್ಯ ಡಿಲೀಟ್ ಮಾಡಿ ಬಿಸಾಕಿದ್ದಾರೆ. ಹೀಗಾಗಿ ಹಿಂಸೆ ನಡೆಸಿದ್ದ ಹಲವರು ಎಲ್ಲೋದರು ಅನ್ನೋದೇ ಗೊತ್ತಾಗುತ್ತಿಲ್ಲ.

'ಸಂಸತ್ ಬಳಿ ಪ್ರತಿಭಟನೆ ಅಲ್ಲ, ಭೀಕರ ಯುದ್ಧ ನಡೆಸಲು ಬಂದಿದ್ದರು..!''ಸಂಸತ್ ಬಳಿ ಪ್ರತಿಭಟನೆ ಅಲ್ಲ, ಭೀಕರ ಯುದ್ಧ ನಡೆಸಲು ಬಂದಿದ್ದರು..!'

200ಕ್ಕೂ ಹೆಚ್ಚು ಜನರಿಗೆ ಜೈಲೂಟ..!

200ಕ್ಕೂ ಹೆಚ್ಚು ಜನರಿಗೆ ಜೈಲೂಟ..!

ಈವರೆಗೂ ಅಮೆರಿಕದ ತನಿಖಾ ಸಂಸ್ಥೆಗಳು 200ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್ ದಾಖಲಿಸಿವೆ. ಕ್ಯಾಪಿಟಲ್ ಹಿಲ್ ಅಟ್ಯಾಕ್ ಸಂಬಂಧ ಇವರನ್ನೆಲ್ಲಾ ಬಂಧಿಸಲಾಗಿದೆ. ಸಂಸತ್‌ಗೆ ನುಗ್ಗಿ ಹುಚ್ಚರಂತೆ ವರ್ತಿಸಿದ್ದೂ ಅಲ್ಲದೆ ಹಿಂಸೆ ನಡೆಸಿದ್ದರಂತೆ ಇವರು. ಇದನ್ನೆಲ್ಲಾ ತೀರಾ ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕದ ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಟ್ರಂಪ್ ಮತ್ತು ಟ್ರಂಪ್ ಗ್ಯಾಂಗ್ ವಿರುದ್ಧ ತಿರುಗಿಬಿದ್ದರು. ಮತ್ತಷ್ಟು ಆರೋಪಿಗಳು ಸೆರೆಯಾಗುವ ಸಾಧ್ಯತೆ ಇದ್ದು, ಅವರಿಗಾಗಿ ಇಂಚಿಂಚು ಜಾಗವನ್ನೂ ತನಿಖಾಧಿಕಾರಿಗಳು ಬೆದಕುತ್ತಿದ್ದಾರೆ.

ಶಾಸಕರು ಕೂಡ ಅರೆಸ್ಟ್..!

ಶಾಸಕರು ಕೂಡ ಅರೆಸ್ಟ್..!

ಉನ್ನತ ಸ್ಥಾನದಲ್ಲಿದ್ದು ಜನತೆಗೆ ಒಳ್ಳೆಯದನ್ನೇ ಬಯಸಬೇಕಿದ್ದ ಕೆಲ ಶಾಸಕರು ಟ್ರಂಪ್ ಮಾತಿಗೆ ಮರುಳಾಗಿ, ಜನವರಿ 6ರಂದು ಹಿಂಸೆಗೆ ಪ್ರಚೋದನೆ ನೀಡಿದ್ದರು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರಂತೆ. ಇದೇ ಕಾರಣಕ್ಕೆ ಹಲವು ಶಾಸಕರು ಈಗಾಗಲೇ ಕಂಬಿ ಹಿಂದೆ ಬಿದ್ದಿದ್ದಾರೆ. ಇನ್ನಷ್ಟು ಶಾಸಕರಿಗೆ ಬಲೆ ಬೀಸಲಾಗಿದೆ. ಇದು ಅಮೆರಿಕದ ಇತಿಹಾಸವೇ ಮುಜುಗರ ಪಡುವಂತಹ ಘಟನೆಯಾಗಿದ್ದು, ಕಾನೂನು ರಚಿಸಿ ಸಮಾಜ ರಕ್ಷಿಸಬೇಕಿದ್ದ ಶಾಕಸರು ಕೂಡ ಅಶಾಂತಿ ಸೃಷ್ಟಿಸಿದ್ದು ವಿಪರ್ಯಾಸವಾಗಿದೆ. ಈ ವಿಚಾರದಲ್ಲಿ ಅಮೆರಿಕ ಈಗಾಗಲೇ ಜಗತ್ತಿನ ಮುಂದೆ ತಲೆತಗ್ಗಿಸಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

 ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

English summary
US security agencies are warned about strong chances of another Capitol Hill attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X