ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ,ರಷ್ಯಾದ ಕೊರೊನಾ ಲಸಿಕೆ ಬಳಸುವುದಿಲ್ಲ ಎಂದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 01: ಚೀನಾ ಹಾಗೂ ರಷ್ಯಾದ ಕೊರೊನಾ ಲಸಿಕೆಯನ್ನು ಬಳಸುವುದಿಲ್ಲ ಎಂದು ಅಮೆರಿಕ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸೋಂಕು ದಶಕಗಳ ಕಾಲ ಹೋಗುವುದಿಲ್ಲ ಎಂದು ಎಚ್ಚರಿಕೆ ಕೊಟ್ಟ ಬಳಿಕ ಅಮೆರಿಕ ತಜ್ಞ ಆಂಥೊನಿ ಫಾಸಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಕೊರೊನಾ ವೈರಸ್ ಪ್ರಭಾವ ದಶಕಗಳವರೆಗೂ ಇರಲಿದೆ:WHOಕೊರೊನಾ ವೈರಸ್ ಪ್ರಭಾವ ದಶಕಗಳವರೆಗೂ ಇರಲಿದೆ:WHO

ಕೊರೊನಾ ಸೋಂಕು ಆರಂಭವಾಗಿ ಆರು ತಿಂಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಕೊರೊನಾ ಸೋಂಕು 679,000 ಮಂದಿಯ ಸಾವಿಗೆ ಕಾರಣವಾಗಿದೆ.

US Says It Is Unlikely To Use China, Russia Coronavirus Vaccines

ಯುರೋಪ್‌ನಲ್ಲಿ ಹೊಸತಾಗಿ ಲಾಕ್‌ಡೌನ್ ಘೋಷಣೆಯಾಗಿದೆ. ಸಾಕಷ್ಟು ಚೀನಾ ಕಂಪನಿಗಳು ಲಸಿಕೆ ಕಂಡು ಹಿಡಿಯಲು ತುದಿಗಾಲಿನಲ್ಲಿ ನಿಂತಿವೆ.

ಆದರೆ ನಮಗೆ ಚೀನಾ, ರಷ್ಯಾದಲ್ಲಿ ತಯಾರಿಸುವ ಲಸಿಕೆ ಬೇಡ, ಬೇರೆ ದೇಶಕ್ಕೆ ಲಸಿಕೆ ನೀಡುವ ಮುನ್ನ ಅವರ ದೇಶದ ಜನರ ಮೇಲೆ ಪ್ರಯೋಗ ನಡೆಸಲಿ, ಅಲ್ಲಿ ಉತ್ತಮ ಫಲಿತಾಂಶ ಬಂದರೆ ಬೇರೆಯವರಿಗೆ ನೀಡಲಿ ಎಂದು ಹೇಳಿದೆ.

ಕೊರೊನಾ ಸೋಂಕಿನ ಪರಿಣಾಮ ದಶಕಗಳವರೆಗೂ ಇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಾಂಕ್ರಾಮಿಕವು ಒಂದು-ಶತಮಾನದ ಆರೋಗ್ಯ ಬಿಕ್ಕಟ್ಟಾಗಿದೆ, ಇದರ ಪರಿಣಾಮಗಳು ಮುಂದಿನ ದಶಕಗಳವರೆಗೂ ಅನುಭವಿಸಬೇಕಾಗುತ್ತದೆ ಎಂದು ಟೆಡ್ರೊಸ್ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಮಿತಿಯ ಸಭೆಯಲ್ಲಿ ಹೇಳಿದರು.

ಸಾಂಕ್ರಾಮಿಕ ರೋಗದ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ದೇಶದ ಪ್ರಭಾವಕ್ಕೆ ಒಳಗಾಗಿದೆ ಎಂದು ಅಮೆರಿಕಾ ಆರೋಪಿಸಿದೆ.ಈ ಹಿನ್ನಲೆಯಲ್ಲಿ ಅದು ಇತ್ತೀಚೆಗಷ್ಟೇ ವಿಶ್ವಸಂಸ್ಥೆಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿತ್ತು.

English summary
America's top infectious diseases official has raised concerns over the safety of COVID-19 vaccines being developed by China and Russia as the world scrambles for answers to a pandemic the WHO warned will be felt for decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X