ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪೂರ್ಣ ಕೊರೊನಾ ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ 11 ಪಟ್ಟು ಕಡಿಮೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 11:ಸಂಪೂರ್ಣ ಕೊರೊನಾ ಲಸಿಕೆ ಪಡೆದವರಿಗೆ ಒಂದೊಮ್ಮೆ ಕೊರೊನಾ ಸೋಂಕು ತಗುಲಿದರೆ ಸಾಯುವ ಪ್ರಮಾಣ 11 ಪಟ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನ ಹೇಳಿದೆ.

ಹಾಗೆಯೇ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಶೇ.10ರಷ್ಟು ಕಡಿಮೆ ಇರುತ್ತದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚು ಪ್ರಬಲವಾಗಿದೆ. ಮೊದಲ ಅಧ್ಯಯನವನ್ನು ಅಮೆರಿಕದ 13 ಪ್ರದೇಶಗಳಲ್ಲಿ ಏಪ್ರಿಲ್ 4ರಿಂದ ಜೂನ್ 19ರ ನಡುವೆ ನಡೆಸಲಾಯಿತು. ಇದು ಡೆಲ್ಟಾ ರೂಪಾಂತರಿ ಪ್ರಬಲಗೊಳ್ಳುವ ಮುನ್ನವೇ ನಡೆಸಿದ ಸಮೀಕ್ಷೆಯಾಗಿದೆ.

 ಡೆಲ್ಟಾ ರೂಪಾಂತರಿ ವೈರಸ್‌ನ ಗಂಭೀರ ಸ್ವರೂಪದ ಹೊಸ ಲಕ್ಷಣಗಳು ಪತ್ತೆ ಡೆಲ್ಟಾ ರೂಪಾಂತರಿ ವೈರಸ್‌ನ ಗಂಭೀರ ಸ್ವರೂಪದ ಹೊಸ ಲಕ್ಷಣಗಳು ಪತ್ತೆ

ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಸೋಂಕು ತಗುಲಿದರೆ ಮೃತಪಡುವ ಪ್ರಮಾಣ 11 ಪಟ್ಟು ಕಡಿಮೆ ಇದೆ. ಮೃತಪಟ್ಟವರಲ್ಲಿ ಯುವಕರಿಗಿಂತಲೂ 65 ವರ್ಷ ಮೇಲ್ಪಟ್ಟವರೇ ಹೆಚ್ಚಿದ್ದಾರೆ. ಮಾಡೆರ್ನಾ ಲಸಿಕೆ ಶೇ.95ರಷ್ಟು ಪರಿಣಾಮಕಾರಿ, ಫೈಜರ್ ಲಸಿಕೆ ಶೇ.80ರಷ್ಟು ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಶೇ.60ರಷ್ಟು ಪರಿಣಾಮಕಾರಿಯಾಗಿದೆ.

US Says Fully Vaccinated People 11 Times Less Likely To Die Of Covid

ದೇಶದಲ್ಲಿ ಕಾಣಿಸಿಕೊಂಡಿರುವ ಡೆಲ್ಟಾ ಸೋಂಕು ತೀವ್ರ ಸ್ವರೂಪವಾಗಿದ್ದು, ಲಸಿಕೆ ಹಾಕಿಸಿಕೊಂಡವರು, ಮತ್ತು ಲಸಿಕೆ ಹಾಕಿಸಿಕೊಳ್ಳದವರನ್ನೂ ಬಹಳ ವೇಗವಾಗಿ ಕಾಡಲಿದೆ ಎಂಬ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಬಹಿರಂಗ ಪಡಿಸಿದೆ.

ಚೆನ್ನೈನಲ್ಲಿ ನಡೆಸಿದ ಕೆಲ ಅಧ್ಯಯನಗಳಿಂದ ಡೆಲ್ಟಾ ಸೋಂಕು ತೀವ್ರವಾಗಿದೆ ಎಂದು ಮಂಡಳಿ ಹೇಳಿದೆ. ಆದರೆ ಮರಣ ಪ್ರಮಾಣ ಕಡಿಮೆಯಿರಲಿದೆ ಎಂದೂ ಅಧ್ಯಯನ ವರದಿ ಹೇಳಿರುವುದಾಗಿ ವೈದ್ಯಕೀಯ ಜರ್ನಲ್ ಆಫ್ ಇನ್ಫೆಕ್ಷನ್ ನಲ್ಲೂ ಪ್ರಕಟವಾಗಿದೆ.

ಅಧ್ಯಯನದ ಸಂಶೋಧನೆಗಳು ಡೆಲ್ಟಾ ರೂಪಾಂತರ ಅಥವಾ B.1.617.2 ನ ಹರಡುವಿಕೆಯು ಲಸಿಕೆ ಹಾಕದ ಗುಂಪುಗಳ ನಡುವೆ ಭಿನ್ನವಾಗಿರುವುದಿಲ್ಲ ಎಂಬುದು ಗೊತ್ತಾಗಿದೆ. ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಹರಡುತ್ತಿರುವ ಪ್ರಬಲವಾದ ತಳಿ ಎಂದೂ ಹೇಳಲಾಗಿದೆ.

ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೊನಾ ವೈರಸ್ ಡೆಲ್ಟಾ ರೂಪಾಂತರಿ ಆರ್ಭಟ ಇದೀಗ 96 ದೇಶಗಳಿಗೆ ವ್ಯಾಪಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೋವಿಡ್-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್‌ನಲ್ಲಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರಿ ಇದೀಗ ಜಗತ್ತಿನ 93 ದೇಶಗಳಿಗೆ ವ್ಯಾಪಿಸಿದ್ದು, ಕಳೆದೊಂದು ವಾರದ ಅವಧಿಯಲ್ಲಿ ಮತ್ತೆ 11 ದೇಶಗಳಿಗೆ ರೂಪಾಂತರಿ ಸೋಂಕು ವ್ಯಾಪಿಸಿದೆ.

ಡೆಲ್ಟಾ ರೂಪಾಂತರವನ್ನು "ಡಬಲ್ ರೂಪಾಂತರಿತ" ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಎರಡು ರೂಪಾಂತರಗಳನ್ನು ಹೊಂದಿದ್ದು, ಇದು ಆಲ್ಫಾ ರೂಪಾಂತರಕ್ಕಿಂತ ಶೇಕಡಾ 55 ರಷ್ಟು ಹೆಚ್ಚು ವೇಗವಾಗಿ ಹರಡಬಲ್ಲದು (ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಪತ್ತೆಯಾಗಿತ್ತು) ಮತ್ತು ಇದು ಜಾಗತಿಕವಾಗಿ ಕರೋನವೈರಸ್‌ನ ಪ್ರಬಲ ಮತ್ತು ಕಳವಳಕಾರಿ ರೂಪಾಂತರವಾಗಿದೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ ಪ್ರಸ್ತುತ ಈ ರೂಪಾಂತರಿ ಸೋಂಕು ಟ್ಯುನೀಶಿಯಾ, ಮೊಜಾಂಬಿಕ್, ಉಗಾಂಡಾ, ನೈಜೀರಿಯಾ ಮತ್ತು ಮಲಾವಿ ಸೇರಿದೆತಂ 11 ಆಫ್ರಿಕಾ ದೇಶಗಳಲ್ಲಿ ವರದಿಯಾಗಿದೆ. ಅಲ್ಲದೇ ಇದೇ ವೈರಸ್ ಕಾರಣದಿಂದಾಗಿ ಆಫ್ರಿಕಾದಲ್ಲಿ ದಿನಕಳೆದಂತೆ ಸೋಂಕು ಪೀಡಿತರ ಸಾವುನೋವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕ್ ರಿಹಾನ್ ಅವರು, 'ವಿಶ್ವದಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಕೊರೋನಾ ಸೋಂಕಿನ ವಿವಿಧ ಮಾದರಿಗಳಲ್ಲಿ ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಗುಣವನ್ನು ಹೊಂದಿದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ತೋರಬಾರದು ಮತ್ತು ತೀವ್ರ ಎಚ್ಚರಿಕೆ ವಹಿಸಬೇಕು. ವಿವಿಧ ದೇಶಗಳು ಅದರಲ್ಲೂ ಡೆಲ್ಟಾ ಮಾದರಿಯ ರೂಪಾಂತರ ಕಾಣಿಸಿಕೊಂಡಿರುವ ದೇಶಗಳು ತಮ್ಮ ದೇಶಗಳಲ್ಲಿ ಸೋಂಕು ಹೆಚ್ಚು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಕೂಡ ಸಲಹೆ ನೀಡಿದ್ದರು.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆಗೆ ಡೆಲ್ಟಾ ರೂಪಾಂತರಿ ಕೊರೋನಾ ವೈರಾಣುವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರೂಪಾಂತರಿ ವೈರಾಣುಗಳು ಸೃಷ್ಟಿಸಬಹುದಾದ ಅವಾಂತರದ ಬಗ್ಗೆ ನಿಗಾವಹಿಸಲು ಸತತವಾಗಿ ಜಿನೋಮಿಕ್‌ ಸೀಕ್ವೆನ್ಸ್‌ ಪರೀಕ್ಷೆ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಈವರೆಗೆ 725 ಡೆಲ್ಟಾ, ಎರಡು ಡೆಲ್ಟಾಪ್ಲಸ್‌ ಮಾದರಿಗಳು ಪತ್ತೆಯಾಗಿವೆ. ಉಳಿದಂತೆ ಅಲ್ಫಾ 14, ಬೀಟಾ 06, ಕಪ್ಪಾ 145 ಪ್ರಕರಣ ಪತ್ತೆಯಾಗಿವೆ. ಇವೆಲ್ಲವುಗಳ ಪೈಕಿ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3ಕ್ಕಿಂತ ಕಡಿಮೆಯಾಗಿದ್ದರೂ ಶುಕ್ರವಾರ ಒಂದೇ ದಿನ 407 ಡೆಲ್ಟಾ ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಬುಧವಾರದವರೆಗೆ 318ರಷ್ಟಿದ್ದ ಡೆಲ್ಟಾ ಪ್ರಕರಣಗಳು ಶುಕ್ರವಾರ 725ಕ್ಕೆ ಏರಿಕೆಯಾಗಿದೆ.

ದೇಶಾದ್ಯಂತ ಎರಡನೇ ಅಲೆ ವ್ಯಾಪಕವಾಗಿ ಹರಡಲು ಇದೇ ಡೆಲ್ಟಾ ರೂಪಾಂತರಿ ಕಾರಣ ಎಂದು ಈಗಾಗಲೇ ಡಬ್ಲ್ಯೂಎಚ್‌ಒ ಸ್ಪಷ್ಟಪಡಿಸಿದೆ. ರಾಜ್ಯದಲ್ಲೂ ಮೇ ಹಾಗೂ ಜೂನ್‌ ತಿಂಗಳು ಜಿನೋಮಿಕ್‌ ಸೀಕ್ವೆನ್ಸ್‌ಗಾಗಿ ಸಂಗ್ರಹಿಸಿದ್ದ ಮಾದರಿಗಳಲ್ಲಿ ಡೆಲ್ಟಾ ರೂಪಾಂತರಿಯೇ ಹೆಚ್ಚಾಗಿ ವರದಿಯಾಗಿದೆ. ಹೀಗಾಗಿ ಎರಡನೇ ಅಲೆ ತೀವ್ರತೆಯಲ್ಲಿ ಡೆಲ್ಟಾಪಾಲೇ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Fully vaccinated people were 11 times less likely to die of Covid and 10 times less likely to be hospitalized compared to the unvaccinated since highly contagious Delta became the most common variant, US health authorities said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X