• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ 19: ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ರವಾನೆ ಮಾಡಿದ ಅಮೆರಿಕ

|

ವಾಷಿಂಗ್ಟನ್, ಏಪ್ರಿಲ್ 30: ಕಾಡ್ಗಿಚ್ಚಿನ ವೇಗದಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯ ವಿರುದ್ಧ ಸೆಣಸುತ್ತಿರುವ ಭಾರತದ ನೆರವಿಗೆ ಅಮೆರಿಕ ಧಾವಿಸಿದೆ. ಇದಕ್ಕಾಗಿ ಭಾರತದ ನೆರವಿಗೆ ಅಡ್ಡಿಯಾಗುವ ಎಲ್ಲಾ ಅಂಶಗಳನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಆಡಳಿತ ತೆರವು ಮಾಡಿದೆ.

ಅಧ್ಯಕ್ಷ ಜೋ ಬೈಡೆನ್ 2021 ರ ಏಪ್ರಿಲ್ 26 ರಂದು ವಾಗ್ದಾನ ಮಾಡಿದಂತೆ, ಅಮೆರಿಕವು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮೂಲಕ, ಭಾರತೀಯರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲು, ಜೀವಗಳನ್ನು ಉಳಿಸಲು, COVID-19 ಹರಡುವುದನ್ನು ನಿಲ್ಲಿಸಲು ಸಹಾಯವನ್ನು ಕ್ಷಿಪ್ರವಾಗಿ ಕ್ರೋಢೀಕರಿಸುತ್ತಿದೆ.

ಅಮೆರಿಕ ಹಲವಾರು ತುರ್ತು COVID-19 ಪರಿಹಾರ ಸಾಮಗ್ರಿಗಳ ಮೊದಲನೆಯ ಕಂತನ್ನು ಭಾರತಕ್ಕೆ ರವಾನೆ ಮಾಡಿದೆ. ಟ್ರಾವಿಸ್ ವಾಯುನೆಲೆಯಿಂದ ವಿಶ್ವದ ಅತಿದೊಡ್ಡ ಸೇನಾ ವಿಮಾನದಲ್ಲಿ ನವದೆಹಲಿಗೆ ಆಗಮಿಸಲಿರುವ ಈ ಪರಿಹಾರ ಸಾಮಾಗ್ರಿಗಳಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳು ಮತ್ತು ನಿಯಂತ್ರಕಗಳು ಸೇರಿವೆ, ಇದನ್ನು ಕ್ಯಾಲಿಫೋರ್ನಿಯಾ ರಾಜ್ಯವು ಉದಾರ ದೇಣಿಗೆ ನೀಡಿದೆ.

ಇದಲ್ಲದೆ, ಈ ಮೊದಲ ಹಾರಾಟದಲ್ಲಿ, USAID 960,000 ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಕಿಟ್‌ಗಳೂ ಸೇರಿವೆ. ಇವು ಸೋಂಕುಗಳನ್ನು ಗುರುತಿಸಲು ಹಾಗೂ COVID-19 ನ ಸಮುದಾಯ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಸಾಂಕ್ರಾಮಿಕದಿಂದ ಭಾರತದ ಮುಂಚೂಣಿ ಆರೋಗ್ಯ ಹೋರಾಟಗಾರರನ್ನು ರಕ್ಷಿಸಲು 100,000 N95 ಮಾಸ್ಕ್‌ ಸೇರಿವೆ.

ಇಂದಿನ ಈ ಘೋಷಣೆಯು ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ತಗ್ಗಿಸಲು USAID ಯ ನಿರಂತರ ಪ್ರಯತ್ನಗಳನ್ನು ಎತ್ತಿ ತೋರುತ್ತದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ USAID 23 ಮಿಲಿಯನ್ ಡಾಲರ್ ಸಹಾಯವನ್ನು ನೀಡಿದೆ, ಇದು ನೇರವಾಗಿ ಸುಮಾರು 10 ಮಿಲಿಯನ್ ಭಾರತೀಯರನ್ನು ತಲುಪಿದೆ.

320 ಪ್ರಾಥಮಿಕ ಆರೋಗ್ಯ ಸೌಲಭ್ಯಗಳಲ್ಲಿ ಬಳಸಲಾಗುವ 1,000 ವೈದ್ಯಕೀಯ ಆಮ್ಲಜನಕ ಸಾಂದ್ರಕಗಳನ್ನು USAID ತ್ವರಿತವಾಗಿ ಕ್ರೋಢೀಕರಿಸುತ್ತಿದೆ. USAID ಕಾರ್ಯಕ್ರಮಗಳು ಜೀವ ಉಳಿಸಲು ಮತ್ತು COVID-19 ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿವೆ.

ಇದರ ಜೊತೆಗೆ COVID-19- ಸಂಬಂಧಿತ ಪೂರ್ವಾಗ್ರಹಗಳನ್ನು ಕಡಿಮೆ ಮಾಡುವುದು, ಪ್ರಕರಣಗಳ ಪತ್ತೆ ಮಾರ್ಗಗಳು ಹಾಗೂ ಕಣ್ಗಾವಲು ಬಲಪಡಿಸುವ ವಿಧಾನಗಳು; ತುರ್ತು ಸಿದ್ಧತೆ ಮತ್ತು ಸಾಂಕ್ರಾಮಿಕಕ್ಕೆ ಶಕ್ತ ಪ್ರತಿಕ್ರಿಯೆ ನೀಡುವಿಕೆಯನ್ನು ಹೆಚ್ಚಿಸಲು ನವ ಆರ್ಥಿಕ ಕಾರ್ಯವಿಧಾನಗಳನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತವೆ.

ಕಳೆದ ಹಲವಾರು ದಶಕಗಳಿಂದ USAID ಬಾಣಂತಿ ಹಾಗೂ ನವಜಾತ ಶಿಶು ಮರಣ, ಪೋಲಿಯೊ, ಎಚ್ಐವಿ ಮತ್ತು ಕ್ಷಯ ಸೇರಿದಂತೆ ದೇಶದ ಅತ್ಯಂತ ಕ್ಲಿಷ್ಟ ಆರೋಗ್ಯ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕೆಲಸ ಮಾಡಿದೆ.

ಅಮೆರಿಕ 70 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಜನರೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತಿದೆ. COVID-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಮೆರಿಕ ಭಾರತದೊಂದಿಗೆ ಒಟ್ಟಾಗಿ ಹೋರಾಡಲಿದೆ.

ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅಮೆರಿಕನ್ ಆಸ್ಪತ್ರೆಗಳು ತೊಂದರೆಗೊಳಗಾದಾಗ ಭಾರತವು ಅಮೆರಿಕಕ್ಕೆ ಸಹಾಯವನ್ನು ಕಳುಹಿಸಿದಂತೆಯೇ, ಅಮೆರಿಕವು ಈಗ ಭಾರತಕ್ಕೆ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡುತ್ತಿದೆ.

ಭಾರತ ಮತ್ತು ವಿಶ್ವದಾದ್ಯಂತದ ಪರಿಹಾರ ಕಾರ್ಯಗಳಿಗೆ ದೇಣಿಗೆ ನೀಡಲು ಆಸಕ್ತಿ ಹೊಂದಿರುವವರು ಅಂತರರಾಷ್ಟ್ರೀಯ ವಿಪತ್ತು (https://www.cidi.org/disaster-responses/coronavirus/)ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಬಹುದು.

English summary
U.S. was rushing a whole series of help to India, including remdesivir and other life-saving drugs, to help the country combat the massive surge in COVID-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X