ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

AUKUS ಒಕ್ಕೂಟಕ್ಕೆ ಭಾರತ ಸೇರ್ಪಡೆಗೆ ಅಮೆರಿಕ ನಕಾರ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 23: 'AUKUS' ಒಕ್ಕೂಟಕ್ಕೆ ಭಾರತವನ್ನು ಸೇರ್ಪಡೆಗೊಳಿಸಲು ಅಮೆರಿಕ ನಿರಾಕರಿಸಿದೆ.

ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್‌ನ್ನು ಸೇರಿಸಿಕೊಳ್ಳುವುದನ್ನು ಅಮೆರಿಕ ತಳ್ಳಿಹಾಕಿದೆ.

ಯುಎಸ್ ಪ್ರವಾಸದ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ: 10 ಪ್ರಮುಖ ಅಂಶಗಳನ್ನು ಓದಿ ಯುಎಸ್ ಪ್ರವಾಸದ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ: 10 ಪ್ರಮುಖ ಅಂಶಗಳನ್ನು ಓದಿ

ಸೆ.15 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜಂಟಿಯಾಗಿ ತ್ರಿಪಕ್ಷೀಯ ಭದ್ರತಾ ಮೈತ್ರಿ ಎಯುಕೆಯುಎಸ್ ರಚನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಅಣ್ವಸ್ತ್ರ ಸಾಮರ್ಥ್ಯದ ಸಬ್ ಮರೀನ್ ಗಳು ಲಭ್ಯವಾಗಲಿದೆ.

US Rules Out Adding India Or Japan To Security Alliance With Australia And UK

ಇಂಡೋ-ಪೆಸಿಫಿಕ್ ಪ್ರದೇಶದ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಆಸ್ಟ್ರೇಲಿಯಾ-ಬ್ರಿಟನ್-ಅಮೆರಿಕಾ ಒಳಗೊಂಡ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯನ್ನು ರಚಿಸಲಾಗಿದೆ.

ಕ್ವಾಡ್ ಶೃಂಗಸಭೆಗಾಗಿ ಜಪಾನ್-ಭಾರತದ ನಾಯಕರು ವಾಷಿಂಗ್ ನಲ್ಲಿದ್ದು ಅವರನ್ನೂ ಹೊಸ ಭದ್ರತಾ ಮೈತ್ರಿಕೂಟದ ಭಾಗವಾಗಿಸುತ್ತೀರಾ? ಎಂಬ ಪ್ರಶ್ನೆಗೆ ಜೆನ್ ಸಾಕಿ ಉತ್ತರಿಸುತ್ತಿದ್ದರು.

ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಕ್ವಾಡ್ ನ ಸದಸ್ಯ ರಾಷ್ಟ್ರಗಳಾಗಿವೆ. ಸೆ.24 ರಂದು ಜೋ ಬೈಡನ್ ಆಯೋಜಿಸಿರುವ ಕ್ವಾಡ್ ಸಭೆಯಲ್ಲಿ ಮೊದಲ ಬಾರಿಗೆ ದೇಶಗಳ ನಾಯಕರು ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ.

ಈ ಮಧ್ಯೆ, ಇಂದು ದೈನಂದಿನ ಪತ್ರಿಕಾಗೋಷ್ಠಿ ನಡೆಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರಿಗೆ ಪತ್ರಕರ್ತರೊಬ್ಬರು, 'ಶುಕ್ರವಾರ.. ನೀವು ಆಸ್ಟ್ರೇಲಿಯಾ ಒಳಗೊಂಡ ಕ್ವಾಡ್ ಶೃಂಗಸಭೆ ನಡೆಸುತ್ತಿದ್ದೀರಿ.

ಅದರಲ್ಲಿ ಭಾರತ ಮತ್ತು ಜಪಾನ್ ಸಹ ಇವೆ. ಅದೇ ರೀತಿ ಇಂಡೋ-ಪೆಸಿಫಿಕ್ ಭದ್ರತಾ ಪಾಲುದಾರಿಕೆ ಉದ್ದೇಶಕ್ಕೆ ಇತ್ತೀಚೆಗೆ ರಚಿಸಲಾದ 'ಆಕಸ್' ಒಪ್ಪಂದದಲ್ಲೂ ಆಸ್ಟ್ರೇಲಿಯಾದ ಇದೆ. ಅದಕ್ಕೆ ಭಾರತ, ಜಪಾನ್ ದೇಶಗಳನ್ನು ಸೇರಿಸುತ್ತೀರಾ ಎಂದು ಪ್ರಶ್ನೆ ಎತ್ತಿದರು.

ಕಳೆದ ವಾರ ಆಕಸ್‌ನ ಘೋಷಣೆ ಸೂಚನೆಯಾಗಿರಬೇಕೆಂದಿಲ್ಲ ಹಾಗೂ ಇಂಡೋ-ಪೆಸಿಫಿಕ್ ನ ಭದ್ರತೆಯ ವಿಷಯವಾಗಿ ಬೇರೆ ಯಾರೂ ಭಾಗಿಯಾಗಬಾರದು ಎಂಬ ಸಂದೇಶವನ್ನು ಫ್ರೆಂಚ್ ನ ಅಧ್ಯಕ್ಷರಿಗೂ ಅಮೆರಿಕ ಅಧ್ಯಕ್ಷರು ಕಳಿಸಿದ್ದಾರೆ ಎಂದು ಶ್ವೇತ ಭವನದ ಕಾರ್ಯದರ್ಶಿ ಜೆನ್ ಸಾಕಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ನಿಯಂತ್ರಿಸುವುದಕ್ಕೆ ಆಕಸ್ ಮೈತ್ರಿಕೂಟವನ್ನು ರಚನೆ ಮಾಡಿಕೊಳ್ಳಲಾಗಿದೆ. ಚೀನಾ ಆಕಸ್ ಮೈತ್ರಿಕೂಟವನ್ನು ತೀವ್ರ ಟೀಕೆ ಮಾಡಿದ್ದು ಈ ಗುಂಪಿಗೆ ದೀರ್ಘಾವಧಿ ಭವಿಷ್ಯವಿಲ್ಲ ಎಂದಿದೆ.

ಇದೇ ವೇಳೆ, ಫ್ರಾನ್ಸ್ ದೇಶವನ್ನೂ ಈ ಒಪ್ಪಂದದಿಂದ ಹೊರಗಿಡಲಾಗಿದೆ. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಎಲ್ಲರೂ ಒಂದೇ ರೀತಿಯ ಭದ್ರತಾ ಸವಾಲು ಎದುರಿಸುತ್ತಿರುವಾಗ ತಮ್ಮನ್ನು ಹೊರಗಿಟ್ಟ ಬಗ್ಗೆ ಫ್ರಾನ್ಸ್ ಆಕ್ಷೇಪ ಎತ್ತಿದೆ.

ಇದಕ್ಕೆ ಉತ್ತರಿಸಿದ ಅವರು, 'ಕಳೆದ ವಾರ ಘೋಷಣೆಯಾದ ಆಕಸ್‌ಗೆ ಅವರನ್ನು ಸೇರಿಸುವ ಯಾವುದೇ ಸೂಚನೆ ಕೊಟ್ಟಿರಲಿಲ್ಲ. ಅದು ಮ್ಯಾಕ್ರನ್‌ಗೆ ಕಳುಹಿಸಿದ ಸಂದೇಶ ಎಂದು ನಾನು ಭಾವಿಸುತ್ತೇನೆ. ಭಾರತವು ಸೇರಿದಂತೆ ಬೇರೆ ಯಾವುದೇ ದೇಶವನ್ನು ಇದರಲ್ಲಿ ಸೇರಿಸಿಕೊಳ್ಳುವುದಿಲ್ಲ'ಎಂದು ಅವರು ಹೇಳಿದ್ದಾರೆ.

ತ್ರಿಪಕ್ಷೀಯ ಭದ್ರತಾ ಮೈತ್ರಿಯು ಇಂಡೋ-ಪೆಸಿಫಿಕ್‌ನಲ್ಲಿ ಚೀನಾವನ್ನು ಎದುರಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಇದು ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಮೊದಲ ಬಾರಿಗೆ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಆಸ್ಟ್ರೇಲಿಯಾಕ್ಕೆ ನೀಡಲು ಅನುವು ಮಾಡಿಕೊಡುತ್ತದೆ.

English summary
The US has ruled out adding India or Japan to the new trilateral security partnership with Australia and Britain to meet the challenges of the 21st century in the strategic Indo-Pacific region.'AUKUS'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X