ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಹೋಗುವುದು ಬೇಡ: ನಾಗರಿಕರಿಗೆ ಅಮೆರಿಕ ಸೂಚನೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 10: ಅಮೆರಿಕವು ತನ್ನ 'ಪ್ರಯಾಣಕ್ಕೆ ಅರ್ಹವಲ್ಲದ' ದೇಶಗಳ ಪಟ್ಟಿಯನ್ನು ಬುಧವಾರ ಪರಿಷ್ಕರಣೆ ಮಾಡಿದೆ. ಈ ಪಟ್ಟಿಯಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ವಿನಾಯಿತಿ ನೀಡಿದೆ. ಆದರೆ ಭಾರತವನ್ನು ಇದರಲ್ಲಿ ಉಳಿಸಿಕೊಂಡಿದೆ.

ಕೋವಿಡ್-19 ವ್ಯಾಪಕವಾಗಿದ್ದರಿಂದ ಅಮೆರಿಕ ಜಗತ್ತಿನ ಯಾವ ದೇಶಕ್ಕೂ ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ನಿರ್ಬಂಧ ವಿಧಿಸಿತ್ತು. ಅದನ್ನು ಆಗಸ್ಟ್‌ನಲ್ಲಿ ತೆರವುಗೊಳಿಸಿತ್ತು. ಬಳಿಕ ನಿರ್ದಿಷ್ಟ ದೇಶಗಳಿಗೆ ಪ್ರಯಾಣ ಬೆಳೆಸದಂತೆ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರದ (ಸಿ.ಡಿ.ಸಿ) ಸಹಯೋಗದಲ್ಲಿ ಹೊಸ ಪಟ್ಟಿ ತಯಾರಿಸಿತ್ತು. ಇದರಲ್ಲಿ ಹೆಚ್ಚಿನ ದೇಶಗಳನ್ನು ನಾಲ್ಕನೆಯ ಹಂತದಲ್ಲಿ ಇರಿಸಿದ್ದು, ಈ ದೇಶಗಳಿಗೆ ಪ್ರಯಾಣಿಸಲೇಬಾರದು ಎಂಬ ನಿರ್ಬಂಧ ವಿಧಿಸಿತ್ತು.

ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!

ವಿವಿಧ ದೇಶಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿರುವುದರಿಂದ ಮತ್ತು ಪ್ರಕರಣಗಳ ಸಂಖ್ಯೆ ತಗ್ಗಿರುವುದರಿಂದ ಈ ಪಟ್ಟಿಯನ್ನು ಅಮೆರಿಕ ಪರಿಷ್ಕರಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಒಳಗೊಂಡಂತೆ ಆರು ದೇಶಗಳ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿ ಅವುಗಳನ್ನು ಮೂರನೇ ಹಂತಕ್ಕೆ ಬದಲಿಸಿದೆ. ಬೆನಿನ್, ಕುವೈತ್, ಮೆಕ್ಸಿಕೋ ಹಾಗೂ ಸೇಂಟ್ ವಿನ್ಸೆಂಟ್ ಮತ್ತು ದಿ ಗ್ರೆನಡೈನ್ಸ್ ಈ ಪಟ್ಟಿಯಲ್ಲಿನ ಇತರೆ ನಾಲ್ಕು ದೇಶಗಳು.

US Revises Its Travel Advisory: India Continues To Be In The Do Not Travel List

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

ಭಾರತವನ್ನು ನಾಲ್ಕನೆಯ ಹಂತದಲ್ಲಿಯೇ ಉಳಿಸಿಕೊಂಡಿದ್ದು, ಇದರ ಅರ್ಥ ಅಮೆರಿಕದ ಪ್ರಜೆಗಳು ಭಾರತಕ್ಕೆ ಪ್ರಯಾಣಿಸುವಂತಿಲ್ಲ. ಕೋವಿಡ್-19ರ ಕಾರಣದಿಂದ ಭಾರತಕ್ಕೆ ಪ್ರಯಾಣಿಸಬೇಡಿ. ಅಪರಾಧ ಮತ್ತು ಭಯೋತ್ಪಾದನೆ ಸಲುವಾಗಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ. ಭಾರತದಲ್ಲಿ ಕೋವಿಡ್ ಅಪಾಯ ಅತ್ಯಂತ ದೊಡ್ಡ ಮಟ್ಟದಲ್ಲಿದೆ. ಅಲ್ಲಿ ನೀವು ಅನಾರೋಗ್ಯಕ್ಕೆ ತುತ್ತಾದರೆ ನಿಮಗೆ ಬೇಕಾದ ವೈದ್ಯಕೀಯ ಸೌಲಭ್ಯ ಹಾಗೂ ಸಂಪನ್ಮೂಲಗಳು ಸೀಮಿತವಾಗಿವೆ ಎಂದು ಸಿ.ಡಿ.ಸಿ ಅಮೆರಿಕದ ಪ್ರಜೆಗಳಿಗೆ ತಿಳಿಸಿದೆ.

English summary
America has revised its travel advisory and placed Pakistan at level 3, India continues to be in the Do Not Travel list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X