ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಆರ್ಥಿಕತೆ ಪುನರಾರಂಭದಿಂದ ಮತ್ತಷ್ಟು ಜೀವಗಳಿಗೆ ಕುತ್ತು: ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 6: ಒಂದೊಮ್ಮೆ ಅಮೆರಿಕದಲ್ಲಿ ಆರ್ಥಿಕತೆ ಪುನರಾರಂಭವಾದರೆ ಇನ್ನಷ್ಟು ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆರ್ಥಿಕತೆ ಪುನರಾರಂಭವಾದರೆ ಮೃತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿದ ಅವರೇ ತರಾತುರಿಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಸಿದ್ಧರಾಗಿದ್ದಾರೆ.ಮಾಸ್ಕ್ ತಯಾರಿಕಾ ಕಾರ್ಖಾನೆಯೊಂದಕ್ಕೆ ಅವರು ಭೇಟಿ ನೀಡಿದ್ದು ಆ ಸಂದರ್ಭದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಆರ್ಥಿಕತೆ ಆರಂಭಿಸಿದರೆ ಸಾವಿನ ಸಂಖ್ಯೆ ಹೆಚ್ಚುತ್ತದೆ ಅಲ್ಲವೇ ಎಂದು ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ 'ಹೌದು ಆ ಸಾಧ್ಯತೆ ಇದೆ, ಸ್ವಲ್ಪ ಮಂದಿ ಮೃತಪಡಬಹುದು' ಎಂದು ಹೇಳಿದ್ದಾರೆ.

US Reopening Will Cost More Lives Says Donald Trump

ಆದರೆ ಜನರನ್ನು ತುಂಬಾ ದಿನಗಳ ಕಾಲ ಅಪಾರ್ಟ್‌ಮೆಂಟ್, ಮನೆಗಳಲ್ಲಿ ಬಂಧಿಸಿಡಲು ಸಾಧ್ಯವಿಲ್ಲ. ಆರ್ಥಿಕತೆ ಪುನರಾರಂಭಿಸುವುದರಿಂದ ಕೆಲವು ಮಂದಿಗೆ ತೊಂದರೆಯಾಗಲಿದೆ ಎಂದು ತಿಳಿದಿದೆ ಆದರೆ ಇದು ಅನಿವಾರ್ಯ ಎಂದಿದ್ದಾರೆ.

ಕೊರೊನಾ ವೈರಸ್‌ನಿಂದ ಇದುವರೆಗೆ ಅಮೆರಿಕದಲ್ಲಿ 70 ಸಾವಿರ ಮಂದಿ ಮೃತಪಟ್ಟಿದ್ದಾರೆ. ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

English summary
US President Donald Trump conceded Tuesday that more Americans will die in reopening the US economy but underlined his insistence on a dwindling coronavirus threat by refusing to wear a mask, even as he toured a mask-making factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X