ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌-1ಬಿ ವೀಸಾ ಬಳಕೆದಾರರಿಗೆ ನಿಯಮ ಸಡಿಲಿಸಿದ ಟ್ರಂಪ್ ಸರ್ಕಾರ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 13: ಎಚ್‌-1ಬಿ ವೀಸಾ ಹೊಂದಿರುವ ವಿದೇಶಿಗರು ವೀಸಾ ನಿಷೇಧಕ್ಕೂ ಮುನ್ನ ಹೊಂದಿದ್ದ ಅದೇ ಉದ್ಯೋಗಕ್ಕೆ ಮರಳುವವರಿಗೆ ಕೆಲವು ನಿಯಮಾವಳಿಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸಡಿಲಗೊಳಿಸಿದೆ.

ಪ್ರಾಥಮಿಕ ವೀಸಾ ಬಳಕೆದಾರರ ಜತೆಗೆ ಅಮೆರಿಕಕ್ಕೆ ಪ್ರಯಾಣಿಸಲು ಅವರ ಅವಲಂಬಿತರಿಗೂ (ಹೆಂಡತಿ, ಮಕ್ಕಳು) ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.

ಸ್ಥಳೀಯರಿಗೆ ಉದ್ಯೋಗ, H1B ವೀಸಾದಾರರಿಗೆ ಇಲ್ಲ: ಟ್ರಂಪ್ಸ್ಥಳೀಯರಿಗೆ ಉದ್ಯೋಗ, H1B ವೀಸಾದಾರರಿಗೆ ಇಲ್ಲ: ಟ್ರಂಪ್

'ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಅದೇ ಕಂಪೆನಿಯ ಅದೇ ಸ್ಥಾನಕ್ಕೆ ಹಾಗೂ ವೀಸಾ ವರ್ಗೀಕರಣದಂತೆ ಹಳೆಯ ಉದ್ಯೋಗಕ್ಕೆ ವಾಪಸಾಗಲು ಬಯಸಿದ್ದರೆ ಅರ್ಜಿದಾರರ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ' ಎಂದು ಇಲಾಖೆ ತಿಳಿಸಿದೆ.

 US Relaxes Some Rules For H-1B Visa Holders

ಎಚ್‌-1ಬಿ ವೀಸಾ ಹೊಂದಿರುವ ತಾಂತ್ರಿಕ ಪರಿಣತರು, ಉನ್ನತ ಮಟ್ಟದ ಮ್ಯಾನೇಜರ್‌ಗಳು ಮತ್ತು ಇತರೆ ಕೆಲಸಗಾರರು ಸಹ, ಅವರ ಪ್ರಯಾಣ ಅವಶ್ಯಕವಾಗಿದ್ದರೆ ಕೂಡಲೇ ಪ್ರಯಾಣಿಸಬಹುದು ಎಂದು ಹೇಳಿದೆ. ಅಮೆರಿಕದ ಆರ್ಥಿಕ ಪುನಶ್ಚೇತನದ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗುತ್ತಿದೆ.

ಅಮೆರಿಕ ಆನ್‌ಲೈನ್ ಕ್ಲಾಸ್: ಹೊಸ ವಿದೇಶಿ ವಿದ್ಯಾರ್ಥಿಗಳಿಗೆ ಅನುಮತಿ ಇಲ್ಲಅಮೆರಿಕ ಆನ್‌ಲೈನ್ ಕ್ಲಾಸ್: ಹೊಸ ವಿದೇಶಿ ವಿದ್ಯಾರ್ಥಿಗಳಿಗೆ ಅನುಮತಿ ಇಲ್ಲ

ಸಾರ್ವಜನಿಕ ಆರೋಗ್ಯ ಅಥವಾ ಆರೋಗ್ಯ ಕಾರ್ಯಕರ್ತರಾಗಿ, ಕೊರೊನಾ ವೈರಸ್ ಸಂಬಂಧಿತ ಸಂಶೋಧನೆಗಳಲ್ಲಿ ಇರುವವರು, ಸಾರ್ವಜನಿಕ ಆರೋಗ್ಯ ಪ್ರಯೋಜನಕ್ಕೆ ಪೂರಕವಾದ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ವೀಸಾ ಬಳಕೆದಾರರ ಪ್ರಯಾಣಕ್ಕೂ ಟ್ರಂಪ್ ಆಡಳಿತ ಅನುಮತಿ ನೀಡಿದೆ.

English summary
Donald Trump administration has relaxed some rules for H-1B Visa holders to enter US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X