ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಕೊರೊನಾ: ಅತ್ತ ಸೋಂಕಿತರ ಸಾವು, ಇತ್ತ ಪ್ರಜಾಪ್ರಭುತ್ವಕ್ಕೆ ಕಂಟಕ..!

|
Google Oneindia Kannada News

ಅಮೆರಿಕದಲ್ಲಿ ಎಲ್ಲವೂ ಅಲ್ಲೋಲ-ಕಲ್ಲೋಲ. ಒಂದು ಕಡೆ ಪ್ರಜಾಪ್ರಭುತ್ವಕ್ಕೆ ಟ್ರಂಪ್ ಬೆಂಬಲಿಗರು ಇಟ್ಟ ಬಾಂಬ್ ಸ್ಫೋಟಗೊಂಡಿದೆ. ಮತ್ತೊಂದು ಕಡೆ ಟ್ರಂಪ್‌ಗೆ ಮನೆ ದಾರಿ ತೋರಿಸಲು ಅಮೆರಿಕ ಸಂಸದ ಪಡೆ ಶತಪ್ರಯತ್ನ ನಡೆಸುತ್ತಿದೆ. ಇಷ್ಟೆಲ್ಲದರ ಮಧ್ಯೆ ಸದ್ದೇ ಮಾಡದಂತೆ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದೆ. ನಿನ್ನೆ ಒಂದೇ ದಿನ ಅಂದರೆ ಜನವರಿ 13ರ ಗುರುವಾರ, ಸುಮಾರು 4 ಸಾವಿರಕ್ಕೂ ಹೆಚ್ಚು ಅಮೆರಿಕನ್ನರು 'ಕೊರೊನಾ' ಸೋಂಕಿಗೆ ಬಲಿಯಾಗಿದ್ದಾರೆ. ಹಾಗೇ 2 ಲಕ್ಷ 36 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಕೇಸ್‌ಗಳು ಕನ್ಫರ್ಮ್ ಆಗಿವೆ.

ಈ ಮೂಲಕ ಒಟ್ಟು ಸಾವಿನ ಸಂಖ್ಯೆ 4 ಲಕ್ಷದ ಸಮೀಪ ಬಂದು ನಿಂತಿದ್ದರೆ, ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ 35 ಲಕ್ಷದ ಗೆರೆ ದಾಟಿದೆ. ಹೀಗೆ ಅತ್ತ ಸೋಂಕಿತರ ಸಾವು, ಇತ್ತ ಪ್ರಜಾಪ್ರಭುತ್ವಕ್ಕೂ ಕಂಟಕ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾದ ವಿಶ್ವದ ಬಲಿಷ್ಠ ರಾಷ್ಟ್ರದ ನಾಯಕರು, ರಾಜಕೀಯ ಕಚ್ಚಾಟದಲ್ಲಿ ಮಗ್ನರಾಗುವಂತಹ ಸ್ಥಿತಿ ಎದುರಾಗಿದೆ.

ಟ್ರಂಪ್ ನೀನು ಕಾನೂನಿಗಿಂತ ದೊಡ್ಡವನಲ್ಲ..! ಪೆಲೋಸಿ ವಾರ್ನಿಂಗ್ ಹೆಂಗಿತ್ತು ಗೊತ್ತಾ..?ಟ್ರಂಪ್ ನೀನು ಕಾನೂನಿಗಿಂತ ದೊಡ್ಡವನಲ್ಲ..! ಪೆಲೋಸಿ ವಾರ್ನಿಂಗ್ ಹೆಂಗಿತ್ತು ಗೊತ್ತಾ..?

ಕೋಟಿಗೂ ಹೆಚ್ಚು ಸೋಂಕಿತರು

ಕೋಟಿಗೂ ಹೆಚ್ಚು ಸೋಂಕಿತರು

ಅಮೆರಿಕದಲ್ಲಿ ಈವರೆಗೂ 2 ಕೋಟಿ 35 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 3 ಲಕ್ಷ 93 ಸಾವಿರ ಅಮೆರಿಕನ್ನರು ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಅಮೆರಿಕನ್ನರಿಗೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾಗಿದ್ದರೂ, ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ.

ಹೊರ ಬರಲು ಜನರು ಭಯಪಡುತ್ತಿದ್ದಾರೆ

ಹೊರ ಬರಲು ಜನರು ಭಯಪಡುತ್ತಿದ್ದಾರೆ

ಹೊರ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು. ಇದರ ಮಧ್ಯೆ ರಾಜಕೀಯ ವಿಫ್ಲವ ಬೇರೆ ಎಕ್ಸ್‌ಟ್ರಾ ಇನ್ನಿಂಗ್ಸ್ ಶುರುಮಾಡಿದೆ.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಹಾಗೆ ನೋಡಿದರೆ ಕೊರೊನಾ ಸೋಂಕು ಕಂಟ್ರೋಲ್ ಮಾಡಿರುವ ವಿಚಾರದಲ್ಲಿ ಭಾರತವೇ ಅಮೆರಿಕ ನಾಯಕರಿಗೆ ಮಾದರಿ.

ಮುಂದಿನ ಕೆಲ ವಾರಗಳು ಹಾರಿಬಲ್..!

ಮುಂದಿನ ಕೆಲ ವಾರಗಳು ಹಾರಿಬಲ್..!

ಅಮೆರಿಕದ ನಾಯಕರಿಗೆ ತಜ್ಞರು ನೀಡಿರುವ ಎಚ್ಚರಿಕೆಯಂತೆ ಮುಂದಿನ ಕೆಲ ವಾರಗಳು ಭಾರಿ ಗಂಡಾಂತರ ಎದುರಾಗಲಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಚಳಿಗಾಲ. ಅಮೆರಿಕ ಭೂ ಮಧ್ಯೆ ರೇಖೆಯ ಉತ್ತರ ಭಾಗದಲ್ಲಿ ಹರಡಿಕೊಂಡಿದೆ. ಹೀಗಾಗಿ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲಿದೆ. ಚಳಿಗಾಲದ ಪರಿಣಾಮ ಜನವರಿ ಅಥವಾ ಫೆಬ್ರವರಿ ತಿಂಗಳವರೆಗೂ ಪರಿಸ್ಥಿತಿ ಇದೇ ರೀತಿ ಇರುವ ಸಾಧ್ಯತೆ ಇದೆ. ಸಾಮೂಹಿಕವಾಗಿ ವ್ಯಾಕ್ಸಿನ್ ನೀಡಿದ ಬಳಿಕ ಪರಿಸ್ಥಿತಿ ಹಿಡಿತಕ್ಕೆ ಬಂದರೆ ಬಚಾವ್, ಇಲ್ಲವಾದರೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚು.

English summary
US Registered 4,098 Corona Deaths In Single Day. 2,36,462 New cases found in US on Jan 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X