ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಒಂದೇ ದಿನ 52 ಸಾವಿರ ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ವಾಷಿಂಗ್ಟನ್, ಜುಲೈ 2: ಅಮೆರಿಕದಲ್ಲಿ ಒಂದೇ ದಿನ 52 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಎಚ್ಚರಿಕೆ ಸಂದೇಶ ರವಾನಿಸಿದೆ. ಕ್ಯಾಲಿಫೋರ್ನಿಯಾದಿಂದ ಫ್ಲೋರಿಡಾದ ವರೆಗೆ ರೆಸ್ಟೋರೆಂಟ್ , ಬಾರ್‌ಗಳು ಹಾಗೂ ಬೀಚ್‌ಗಳನ್ನು ಬಂದ್ ಮಾಡಲಾಗಿದೆ.

ವಿಶ್ವದಾದ್ಯಂತ ಪ್ರತಿ ನಿತ್ಯ 1,60,000 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಅಮೆರಿಕವು ತಮ್ಮ ದೇಶಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್ ವಿಧಿಸುತ್ತಿದೆ.

ಮಾಸ್ಕ್ ಧರಿಸಲು ಯಾವುದೇ ತೊಂದರೆ ಇಲ್ಲ, ಆದರೆ...: ಡೊನಾಲ್ಡ್ ಟ್ರಂಪ್ಮಾಸ್ಕ್ ಧರಿಸಲು ಯಾವುದೇ ತೊಂದರೆ ಇಲ್ಲ, ಆದರೆ...: ಡೊನಾಲ್ಡ್ ಟ್ರಂಪ್

ಕ್ಯಾಲಿಫೋರ್ನಿಯಾದಲ್ಲಿ ಡೈನಿಂಗ್ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಯ ನೀಡಿದ್ದು, ಆದಷ್ಟು ಬೇಗ ಕೊರೊನಾ ವೈರಸ್ ಕಣ್ಮರೆಯಾಗಲಿದೆ ಎಂದು ಹೇಳಿದ್ದು, ಮಾಸ್ಕ್ ಧರಿಸಲು ಯಾವುದೇ ತೊಂದರೆಯಿಲ್ಲ. ಆದರೆ ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.

US Records Over 52,000 Coronavirus Cases In Single Day

ಯುರೋಪಿಯನ್ ಯೂನಿಯನ್ 15 ದೇಶಗಳಿಂದ ಬರುವವರಿಗೆ ಅನುಮತಿ ನೀಡಿದೆ.ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿಗೆ ತುತ್ತಾಗಿರುವ ಅಮೆರಿಕದಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಆತಂಕ ಎದುರಾಗಿದೆ.

ಅಮರಿಕದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ನಿಮಯಗಳನ್ನು ಪಾಲಿಸದಿದ್ದರೆ ಶೀಘ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದುಪ್ಪಟ್ಟಾಗಬಹುದು. ದೇಶದಲ್ಲಿ ಪ್ರತಿದಿನ 2ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದರಿಂದ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆರೋಗ್ಯ ತಜ್ಞ ಆಂಥೋನಿ ಫಾಸಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.ಈಗಾಗಲೇ ಅಮೆರಿಕದಲ್ಲಿ 1 ಲಕ್ಷದ 26 ಸಾವಿರ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

English summary
New daily coronavirus cases in the United States soared past 50,000 for the first time Wednesday, as the World Health Organization delivered a grave warning that the global pandemic is accelerating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X