ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

USA ಅಧ್ಯಕ್ಷೀಯ ಚುನಾವಣೆ: ಸಾಗರೋತ್ತರ ಸ್ನೇಹಿತರಿಗೆ ಬಿಜೆಪಿ ಸಂದೇಶ

|
Google Oneindia Kannada News

ವಾಶಿಂಗ್ಟನ್, ಸಪ್ಟೆಂಬರ್.11: ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಣ ರಂಗೇರುತ್ತಿದೆ. ಭಾರತೀಯ ಜನತಾ ಪಕ್ಷದ ಸಾಗರೋತ್ತರ ಸ್ನೇಹಿತರು(OFBJP) ಸಂಘಟನೆಯ ಚಿಹ್ನೆ ಮತ್ತು ಹೆಸರನ್ನು ಚುನಾವಣಾ ಪ್ರಚಾರದಲ್ಲಿ ಬಳಸದಂತೆ ಸೂಚನೆ ನೀಡಲಾಗಿದೆ.

ಬಿಜೆಪಿ ಸಾಗರೋತ್ತರ ಸ್ನೇಹಿತರ ಸಂಘಟನೆಯ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವಹಿಸಿರುವ ವಿಜಯ್ ಚೌತೈವಾಲಾ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿಯ ಸಾಗರೋತ್ತರ ಸ್ನೇಹಿತರು ಸಂಘಟನೆಯ ಸದಸ್ಯರು ಭಾಗವಹಿಸಬಹುದು.

ಅಮೆರಿಕದಲ್ಲಿ ಹಬ್ಬಿರುವ ಅಂಧಕಾರ ಕೊನೆಗೊಳ್ಳಲಿ: ಬಿಡೆನ್ಅಮೆರಿಕದಲ್ಲಿ ಹಬ್ಬಿರುವ ಅಂಧಕಾರ ಕೊನೆಗೊಳ್ಳಲಿ: ಬಿಡೆನ್

ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿ ಸಾಗರೋತ್ತರ ಸ್ನೇಹಿತರು ಸದಸ್ಯರು ವೈಯಕ್ತಿಕ ಸಾಮರ್ಥ್ಯ ಬಳಸಿಕೊಂಡು ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಪ್ರಚಾರ ಮಾಡಬಹುದು. ಆದರೆ OFBJP ಅಥವಾ BJP ಚಿಹ್ನೆ ಮತ್ತು ಹೆಸರನ್ನು ಬಳಸಿಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ರಿಪಬ್ಲಿಕ್ ಬಿಡುಗಡೆಗೊಳಿಸಿದ ವಿಡಿಯೋದಿಂದ ವಿವಾದ

ರಿಪಬ್ಲಿಕ್ ಬಿಡುಗಡೆಗೊಳಿಸಿದ ವಿಡಿಯೋದಿಂದ ವಿವಾದ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ 'Four More Years' ಶೀರ್ಷಿಕೆ ಅಡಿಯಲ್ಲಿ ರಿಪಬ್ಲಿಕ್ ಪಕ್ಷವು ವಿಡಿಯೋವೊಂದರನ್ನು ಬಿಡುಗಡೆ ಮಾಡಿದ್ದು ವಿವಾದಕ್ಕೆ ಕಾರಣವಾಯಿತು. ಈ ವಿಡಿಯೋದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ 'Namaste Trump' ಮತ್ತು ಅಮೆರಿಕಾದಲ್ಲಿ ನಡೆದ 'Howdy Modi' ಕಾರ್ಯಕ್ರಮದ ದೃಶ್ಯವನ್ನು ಬಳಸಿಕೊಳ್ಳಲಾಗಿತ್ತು. ನವೆಂಬರ್,03ರಂದು ನಡೆಯುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯರನ್ನು ಸೆಳೆಯುವುದಕ್ಕೆ ಈ ವಿಡಿಯೋ ಬಿಡುಗಡೆ ಮಾಡಿದ್ದರು.

ರಿಪಬ್ಲಿಕ್ ಪಕ್ಷ ರಿಲೀಸ್ ಮಾಡಿದ ವಿಡಿಯೋದಲ್ಲೇನಿತ್ತು?

ರಿಪಬ್ಲಿಕ್ ಪಕ್ಷ ರಿಲೀಸ್ ಮಾಡಿದ ವಿಡಿಯೋದಲ್ಲೇನಿತ್ತು?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷವು ಬಿಡುಗಡೆಗೊಳಿಸಿದ ವಿಡಿಯೋದಲ್ಲಿ ಭಾರತೀಯರನ್ನು ಸೆಳೆಯುವ ಪ್ರಯತ್ನ ಮಾಡಲಾಗಿತ್ತು. "Four More Years" ವಿಡಿಯೋದಲ್ಲಿ "ಭಾರತವು ನಮ್ಮ ಬೆಂಬಲಕ್ಕಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದಲೂ ನಮಗೆ ವ್ಯಾಪಕವಾಗಿ ಬೆಂಬಲಿಸುತ್ತಿದ್ದಾರೆ. ಅಮೆರಿಕಾದಲ್ಲಿರುವ ಭಾರತೀಯರು ಕೂಡಾ ನಮಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಲಾಗಿತ್ತು.

ಟ್ರಂಪ್ 'ಕ್ರೂರಿ, ಸುಳ್ಳುಗಾರ': ಟ್ರಂಪ್ ಅಕ್ಕನ ಆರೋಪಟ್ರಂಪ್ 'ಕ್ರೂರಿ, ಸುಳ್ಳುಗಾರ': ಟ್ರಂಪ್ ಅಕ್ಕನ ಆರೋಪ

OFBJP ಕಾರ್ಯದ ಬಗ್ಗೆ ನ್ಯಾಯಾಂಗ ತನಿಖೆ

OFBJP ಕಾರ್ಯದ ಬಗ್ಗೆ ನ್ಯಾಯಾಂಗ ತನಿಖೆ

ಭಾರತೀಯ ಜನತಾ ಪಕ್ಷದ ಸಾಗರೋತ್ತರ ಸ್ನೇಹಿತರು(OFBJP) ಸಂಘಟನೆಯ ಕಾರ್ಯವೈಖರಿ ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ತುಳಸಿ ಗಬ್ಬಾರ್ಡ್ ನಡುವಿನ ಸಂಪರ್ಕದ ಬಗ್ಗೆ ಅಮೆರಿಕಾ ಮೂಲದ ದಕ್ಷಿಣ ಏಷ್ಯಾ ಪರಿಣಿತ ಸಂಶೋಧಕ ಪೀಟರ್ ಫ್ರೆಂಡ್ರಿಚ್ ಪತ್ತೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಸಂದೇಶವನ್ನು ಮಾಡಿದ್ದಾರೆ. ಈ ಹಿನ್ನೆಲೆ OFBJP ವಿರುದ್ಧ ತನಿಖೆ ನಡೆಸಲಾಗುತ್ತಿದ್ದು, ಸಂಘಟನೆಯ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

ಅಮೆರಿಕಾ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಪಾತ್ರವಿಲ್ಲ

ಅಮೆರಿಕಾ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಪಾತ್ರವಿಲ್ಲ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಎರಡನೇ ಉನ್ನತ ಹುದ್ದೆಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸ್ಪರ್ಧಿಸಿದ್ದಾರೆ ಎಂದರೆ ಸಹಜವಾಗಿಯೇ ನಾವು ಸಂತೋಷಪಡುತ್ತೇವೆ. ಆದರೆ ಅಮೆರಿಕಾದ ದೇಶೀಯ ಚುನಾವಣಾ ಪ್ರಕ್ರಿಯೆಯಲ್ಲಿ ಭಾರತೀಯ ಜನತಾ ಪಕ್ಷದ ಪಾತ್ರ ಇರುವುದಿಲ್ಲ ಎಂದು ಬಿಜೆಪಿ ಸಾಗರೋತ್ತರ ಸಂಘಟನೆಯ ವಿದೇಶಾಂಗ ವ್ಯವಹಾರಗಳ ಇಲಾಖೆಯ ಉಸ್ತುವಾರಿ ವಹಿಸಿರುವ ವಿಜಯ್ ಚೌತೈವಾಲಾ ತಿಳಿಸಿದ್ದಾರೆ.

ಅಮೆರಿಕಾ-ಭಾರತದ ರಾಜತಾಂತ್ರಿಕ ಸಂಬಂಧ ವೃದ್ಧಿ

ಅಮೆರಿಕಾ-ಭಾರತದ ರಾಜತಾಂತ್ರಿಕ ಸಂಬಂಧ ವೃದ್ಧಿ

"ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ನಡುವೆ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧ ವೃದ್ಧಿ ಮತ್ತು ಉಭಯ ರಾಷ್ಟ್ರಗಳ ಪರಸ್ಪರ ಸ್ನೇಹ ಸಹಕಾರಕ್ಕೆ ಎರಡೂ ರಾಷ್ಟ್ರಗಳ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಸ್ನೇಹ ಸಂಬಂಧವು ಮತ್ತಷ್ಟು ಹೆಚ್ಚಾಗುವ ವಿಶ್ವಾಸವಿದೆ ಎಂದು ವಿಜಯ್ ಚೌತೈವಾಲಾ ತಿಳಿಸಿದ್ದಾರೆ.

ಇಂಥದ್ದೇ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ನಿಯಮವಿಲ್ಲ

ಇಂಥದ್ದೇ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ನಿಯಮವಿಲ್ಲ

ಭಾರತೀಯ ಜನತಾ ಪಕ್ಷದ ಸಾಗರೋತ್ತರ ಸ್ನೇಹಿತರು(OFBJP) ಸಂಘಟನೆಯ ಸದಸ್ಯರು ಮತ್ತು ಅಮೆರಿಕಾದ ಪ್ರಜೆಗಳು ಯಾವುದೇ ಅಧ್ಯಕ್ಷೀಯ ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕೆ ಸರ್ವಸ್ವತಂತ್ರರಾಗಿದ್ದಾರೆ. ಈ ವಿಚಾರದಲ್ಲಿ ಸಂಘಟನೆಯು ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ. ಆದರೆ OFBJP ಸಂಘಟನೆಯ ಸದಸ್ಯರೇ ಆಗಿದ್ದರೂ ಕೂಡಾ ತಾವು ಮಾಡುವ ಪ್ರಚಾರದ ಸಂದರ್ಭದಲ್ಲಿ ಸಂಘಟನೆ ಅಥವಾ ಬಿಜೆಪಿಯ ಚಿಹ್ನೆ ಮತ್ತು ಹೆಸರನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.

ಅಮೆರಿಕಾದಲ್ಲಿ OFBJP ಸಂಘಟನೆಯ ಕಾರ್ಯ ನಿಂತಿಲ್ಲ

ಅಮೆರಿಕಾದಲ್ಲಿ OFBJP ಸಂಘಟನೆಯ ಕಾರ್ಯ ನಿಂತಿಲ್ಲ

ಇದಕ್ಕೂ ಮುನ್ನ ದಿನವಷ್ಟೇ "OFBJP-USA ಸಹ FARA ಅಡಿಯಲ್ಲಿ DOJ ನೊಂದಿಗೆ ಸ್ವಯಂಪ್ರೇರಣೆಯಿಂದ ನೋಂದಾಯಿಸಿಕೊಂಡಿದೆ" ಎಂದು ಟ್ವೀಟ್ ಮಾಡಲಾಗಿತ್ತು. ಸಂಘಟನೆ ಅಧ್ಯಕ್ಷ ಕೃಷ್ಣ ರೆಡ್ಡಿ ಎನ್ ‌ಜೆ ಅವರು ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಡಪ ಪ್ರಸಾದ್ ಅವರು ಕಾರ್ಯನಿರತ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. OFBJP-USA ಸಂಪೂರ್ಣ ಕ್ರಿಯಾತ್ಮಕವಾಗಿದ್ದು, ಯಾವುದೇ ತನಿಖೆಯಲ್ಲಿಲ್ಲ" ಎಂದು ಟ್ವೀಟ್ ಮಾಡಲಾಗಿತ್ತು.

English summary
US Presidential Election: BJP Asks Overseas Members To Refrain From Taking Party's Logo During Campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X