ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ ಹೇಳಿಕೆಗೆ ಬೆಚ್ಚಿ ಬಿದ್ದ ಅಮೆರಿಕದ ನಾಗರಿಕರು..!

|
Google Oneindia Kannada News

ವಾಷಿಂಗ್ಟನ್, ಏಪ್ರೀಲ್ 1: ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಇದೀಗ ಕೊರೊನಾ ಎಂಬ ಕಣ್ಣಿಗೆ ಕಾಣದ ಜೀವಿಯ ಮುಂದೆ ಚಿಕ್ಕಣ್ಣ ಎನಿಸಿಕೊಂಡಿದೆ. ಕಳೆದ ಒಂದು ವಾರದಿಂದ ಕೊರೊನಾ ಮಹಾಮಾರಿ ಅಮೆರಿಕದಲ್ಲಿ ರುದ್ರನರ್ತನ ತೋರಿಸುತ್ತಿದೆ.

ಇದುವರಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಅಮೆರಿಕದಲ್ಲಿ 4028 ಜನ ಮರಣ ಹೊದಿದ್ದಾರೆ. 2 ಲಕ್ಷ ಜನರಿಗೆ ಸೋಂಕು ತಗುಲಿದೆ. ಇದರಿಂದ ಕಂಗಾಲಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರು ಅಮೆರಿಕ ಜನರ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ.

ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!

ಮುಂದಿನ ಎರಡು ವಾರ ಅಮೆರಿಕದ ಪಾಲಿಗೆ ಭೀಕರವಾಗಿರಲಿವೆ. 1.50 ರಿಂದ 2.50 ಲಕ್ಷ ಜನ ಕೊರೊನಾ ವೈರಸ್‌ಗೆ ಬಲಿಯಾಗಬಹುದು. ಎಚ್ಚರಿಕೆಯಿಂದ ಇರಿ ಎಂದು ಟ್ರಂಪ್ ಭಾವುಕರಾಗಿ ಅಮೆರಿಕದ ನಾಗರಿಕರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ...

ಎರಡು ವಾರ ಮಹಾ ಆತಂಕ

ಎರಡು ವಾರ ಮಹಾ ಆತಂಕ

ಮಂಗಳವಾರ ಶ್ವೇತಭವನದಲ್ಲಿ ಕೊರೊನಾ ಸಂಕಷ್ಟದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗದ್ಗದಿತಾರಾಗಿ ಮಾತನಾಡಿರುವ ಟ್ರಂಪ್, "ಪ್ರತಿಯೊಬ್ಬ ಅಮೆರಿಕನ್ನರು ಮುಂದೆ ಬರಬೇಕಾದ ಕಠಿಣ ದಿನಗಳಿಗೆ ಸಿದ್ಧರಾಗಬೇಕೆಂದು ನಾನು ಬಯಸುತ್ತೇನೆ. ನಾವು ಎರಡು ವಾರಗಳ ಕಠಿಣ ಸಮಯವನ್ನು ಎದುರಿಸಲಿದ್ದೇವೆ. ಮುಂದಿನ ಎರಡು ವಾರ ಬಹಳ ನೋವಿನಿಂದ ಕೂಡಿದೆ'' ಎಂದು ಹೇಳಿರುವುದು ಅಮೆರಿಕದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಆರ್ಥಿಕತೆ ಸಂಕಷ್ಟ

ಆರ್ಥಿಕತೆ ಸಂಕಷ್ಟ

ಕೊರೊನಾ ವೈರಸ್ ಸೋಂಕು ಹರಡದಂತೆ ತಾವು ಕೈಗೊಂಡಿರುವ ಕ್ರಮಗಳನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಕೊರೊನಾದಿಂದ ಅಮೆರಿಕದ ಆರ್ಥಿಕತೆ ನಷ್ಟವುಂಟಾಗಿದೆ. ಆದರೆ, ನಾಗರಿಕರ ಹಿತದೃಷ್ಟಿಯಿಂದ ಆರ್ಥಿಕತೆಯ ಹೆಚ್ಚಿನ ಭಾಗವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಟ್ರಂಪ್ ವಿರುದ್ಧ ಟೀಕೆಗಳ ಸುರಿಮಳೆ

ಟ್ರಂಪ್ ವಿರುದ್ಧ ಟೀಕೆಗಳ ಸುರಿಮಳೆ

ಅಮೆರಿಕದಲ್ಲಿ ಕೊರೊನಾ ತನ್ನ ಅಟ್ಟಹಾಸ ತೋರಿಸಲು ಟ್ರಂಪ್ ಅವರೇ ಕಾರಣ ಎಂದು ಹವಲು ಆರೋಪಗಳು ಕೇಳಿ ಬರುತ್ತಿವೆ. ಟ್ರಂಪ್ ಅವರ ನಿರ್ಲಕ್ಷ್ಯತನದಿಂದ ಇವತ್ತು ಅಮರಿಕ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಎಂದು ತೀವ್ರ ಟೀಕೆಗಳು ಕೇಳಿ ಬರುತ್ತಿವೆ.

ಅಮೆರಿಕದಲ್ಲಿ ಲಾಕ್‌ಡೌನ್ ವಿಸ್ತರಣೆ

ಅಮೆರಿಕದಲ್ಲಿ ಲಾಕ್‌ಡೌನ್ ವಿಸ್ತರಣೆ

ಕೊರೊನಾ ತಡೆಗಟ್ಟಲು ಸಾಮಾಜಿಕ ಅಂತರ ಹಾಗೂ ಲಾಕ್‌ಡೌನ್‌ ಒಂದೇ ಪರಿಹಾರ ಎಂದು ಟ್ರಂಪ್ ಹೇಳಿ, ಏಪ್ರೀಲ್ 30ರವರೆಗೆ ಅಮೆರಿಕಾದ್ಯಂತ ಲಾಕ್‌ಡೌನ್‌ನ್ನು ವಿಸ್ತರಿಸಿದ್ದಾರೆ. ಇದುವರೆಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಅಮೆರಿಕದಲ್ಲಿ 3700 ಜನ ಮರಣ ಹೊದಿದ್ದಾರೆ. 2 ಲಕ್ಷ ಜನರಿಗೆ ಸೋಂಕು ತಗುಲಿದೆ. ಕೇವಲ 7136 ಜನ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಇದ್ದರೂ ಕೊರೊನಾದಿಂದ ಅಮೆರಿಕ ಮಂಡೆಯೂರಿದೆ.

English summary
US President Donald Trump Prediction On Coronavirus People Will Die More Than 2 lakh. Lackdown Extended Up To April 30th in america.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X