ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ ಟ್ರಂಪ್

|
Google Oneindia Kannada News

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಚಲಾಯಿಸಿದ್ದಾರೆ. ಟ್ರಂಪ್ ಫ್ಲೋರಿಡಾ ರಾಜ್ಯದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಾಮ್ ಬೀಚ್‌ನಲ್ಲಿ ಅವಧಿಪೂರ್ವ ಮತ ಚಲಾವಣೆ ಮಾಡಿದ ಟ್ರಂಪ್, ನಾನು ಟ್ರಂಪ್ ಎಂಬ ಹೆಸರಿನ ವ್ಯಕ್ತಿಗೆ ಮತ ಹಾಕಿದೆ ಎಂದು ನಸುನಗೆ ಬೀರಿ ಹೊರ ನಡೆದಿದ್ದಾರೆ.

ಅಮೆರಿಕದಲ್ಲಿ ನವೆಂಬರ್ 3ರಂದು ಅಧಿಕೃತವಾಗಿ ಸಾರ್ವತ್ರಿಕ ಮತದಾನ ನಡೆಯಲಿದ್ದು, ವೋಟ್ ಮಾಡಲು ಅಂದು ಕಡೆಯ ದಿನ. ಆದರೆ ಕೊರೊನಾ ಕಾರಣ ಅವಧಿಪೂರ್ವ ಮತದಾನ ಈಗಾಗಲೇ ಆರಂಭವಾಗಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಈಗಾಗಲೇ ವೋಟ್ ಮಾಡಿದ್ದಾರೆ. ಅವರ ಸಾಲಿಗೆ ಈಗ ಟ್ರಂಪ್ ಕೂಡ ಸೇರ್ಪಡೆಗೊಂಡಿದ್ದಾರೆ.

ಶನಿವಾರ ದಿಢೀರ್ ಪಾಮ್ ಬೀಚ್‌ಗೆ ಆಗಮಿಸಿದ ಟ್ರಂಪ್ ಅಂಚೆ ಮತಪತ್ರದ ಮೂಲಕ ವೋಟ್ ಮಾಡಿದರು. ಆದರೆ ಹಲವು ದಿನಗಳಿಂದಲೂ ಟ್ರಂಪ್ ಅಂಚೆ ಮತದಾನದ ವಿರುದ್ಧವೇ ಹೇಳಿಕೆ ನೀಡುತ್ತಿದ್ದರು. ಇದೀಗ ತಾವೇ ಅಂಚೆ ಮತದಾನ ಮಾಡಿದ್ದಾರೆ. ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, ಟ್ರಂಪ್ ವೋಟ್ ಮಾಡುವ ಸಂದರ್ಭದಲ್ಲಿ ಮಾಸ್ಕ್ ತೊಟ್ಟಿದ್ದರು.

US President Trump Cast Early Vote In Florida

ಆದರೆ ಅಂಚೆ ಮತದಾನದ ರೀತಿ ಟ್ರಂಪ್ ಮಾಸ್ಕ್ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾ ಬಂದವರು. ಅಮೆರಿಕನ್ನರಿಗೆ ಮಾಸ್ಕ್ ತೊಡುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದವರು. ಆದರೀಗ ದಿಢೀರ್ ಎಂದು ಮಾಸ್ಕ್ ಹಾಕಿ ಟ್ರಂಪ್ ಅಂಚೆ ಮತದಾನ ಮಾಡಿದ್ದು, ಬೆಂಬಲಿಗರಿಗೆ ಡಬಲ್ ಸರ್ಪ್ರೈಸ್ ಕೊಟ್ಟಿದ್ದಾರೆ.

ಅಂಚೆ ಮತದಾನಕ್ಕೆ ಭಾರಿ ವಿರೋಧ
ಕಳೆದ ತಿಂಗಳು ಅಂಚೆ ಮತದಾನದ ವಿರುದ್ಧ ಗುಡುಗಿದ್ದ ಡೊನಾಲ್ಡ್ ಟ್ರಂಪ್, ಈ ಬಾರಿಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನ ಬಹುದೊಡ್ಡ ಬೆದರಿಕೆಯಾಗಿದೆ ಎಂದಿದ್ದರು. ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡುವುದರಿಂದ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತೆ ಎಂದು ಟ್ರಂಪ್ ಆರೋಪಿಸಿದ್ದರು. ಯಾರದ್ದೋ ಮತ ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರ ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಟ್ರಂಪ್‌ ಹೇಳಿಕೆಗೆ ಬೆಂಬಲವಾಗಿ ಅಮೆರಿಕದ ವಿವಿಧ ಕೋರ್ಟ್‌ಗಳಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಈಗ ಸ್ವತಃ ಟ್ರಂಪ್ ಅದೇ ಅಂಚೆ ಮತದಾನ ಪದ್ಧತಿ ಆಧಾರದಲ್ಲಿ ವೋಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Recommended Video

ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada

ಖುರ್ಚಿ ಬಿಡಲ್ಲ ಎಂದಿದ್ದರು ಟ್ರಂಪ್..!
ಟ್ರಂಪ್ ಬರೀ ಮತದಾನ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ, ಬದಲಾಗಿ ಈ ಬಾರಿ ನಾನು ಸೋತರೆ ಸುಮ್ಮನೆ ಖುರ್ಚಿ ಬಿಟ್ಟು ಹೋಗಲ್ಲ ಎಂದು ಸವಾಲು ಹಾಕಿದ್ದರು. ಈ ಮೂಲಕ ಅಂಚೆ ಮತದಾನದ ವಿರುದ್ಧ ಗುಡುಗಿದ್ದರು. ಆದರೆ ಟ್ರಂಪ್ ಹೇಳಿಕೆಗೆ ಅವರದ್ದೇ ಪಕ್ಷದಲ್ಲಿ ಅಪಸ್ವರ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಎಲ್ಲಾ ಘಟನೆಗಳ ಬೆನ್ನಲ್ಲೇ ಅಮೆರಿಕದ ಮತದಾರರು ಕೂಡ ಅಂಚೆ ಮತದಾನದ ವಿರುದ್ಧವೇ ದಾವೆ ಹೂಡುತ್ತಿದ್ದಾರೆ. ಈಗಾಗಲೇ ಅವಧಿ ಪೂರ್ವ ಮತದಾನ ಕೂಡ ಆರಂಭವಾಗಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ಅಮೆರಿಕನ್ ವೋಟರ್ಸ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆ ಬಗ್ಗೆಯೇ ಅನುಮಾನ ಮೂಡಿರುವುದು, ಅಮೆರಿಕದ ಮತದಾರ ಪ್ರಭುಗಳಲ್ಲಿ ಗೊಂದಲದ ವಾತಾವರಣ ಮೂಡಿಸಿದೆ. ಈ ಮಧ್ಯೆ ಸ್ವತಃ ಟ್ರಂಪ್ ಅಂಚೆ ಮತದಾನ ಮಾಡಿರುವುದು ಟ್ರಂಪ್ ಬೆಂಬಲಿಗರಿಗೆ ಶಾಕ್ ಕೊಟ್ಟಿದೆ.

English summary
US President Donald Trump has voted in the state of Florida. Trump, who previously opposed the postal vote, has now voted with the same postal vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X