ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ಖಶೋಗ್ಗಿ ಹತ್ಯೆ ವರದಿ ಬಗ್ಗೆ ಬೈಡನ್-ಸೌದಿ ರಾಜ ಸಲ್ಮಾನ್ ಮಾತುಕತೆ ಸಾಧ್ಯತೆ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 24: ಪತ್ರಕರ್ತ ಜಮಾಲ್ ಖಶೋಗ್ಗಿ ಕಣ್ಮರೆ ಮತ್ತು ಹತ್ಯೆಯ ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಯೊಂದು ವಿವರವಾದ ವರದಿ ಬಿಡುಗಡೆ ಮಾಡುವ ಮುನ್ನ ಅಧ್ಯಕ್ಷ ಜೋ ಬೈಡನ್ ಅವರು ಸೌದಿ ಅರೇಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲಾಜಿಜ್ ಅಲ್-ಸೌದ್ ಅವರಿಗೆ ಕರೆ ಮಾಡುವ ನಿರೀಕ್ಷೆಯಿದೆ.

ಸೌದಿ ಅರಸರ ಮಗನ ಹಸ್ತಕ್ಷೇಪದ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಯು ಸ್ಫೋಟಕ ವರದಿಯನ್ನು ಹೊರಗೆಡವಲಿದೆ ಎಂದು ವೆಬ್‌ಸೈಟ್ ಒಂದು ಪ್ರಕಟಿಸಿದೆ. ಆದರೆ ಯಾವುದೇ ಹೆಸರನ್ನು ಅದು ಉಲ್ಲೇಖಿಸಿಲ್ಲ. ನಿಗದಿಯಂತೆ ನಡೆದರೆ ಇದೇ ಬೈಡನ್ ಮತ್ತು ರಾಜ ಸಲ್ಮಾನ್ ನಡುವೆ ನಡೆಯಲಿರುವ ಮೊದಲ ಮಾತುಕತೆ ಇದಾಗಲಿದೆ.

ಖಶೋಗಿ ಹತ್ಯೆ: ತನಿಖೆಗೆ ಆದೇಶ ನೀಡದ ವಿಶ್ವಸಂಸ್ಥೆ ಮುಖ್ಯಸ್ಥರ ಮೇಲೆ ಅಸಮಾಧಾನಖಶೋಗಿ ಹತ್ಯೆ: ತನಿಖೆಗೆ ಆದೇಶ ನೀಡದ ವಿಶ್ವಸಂಸ್ಥೆ ಮುಖ್ಯಸ್ಥರ ಮೇಲೆ ಅಸಮಾಧಾನ

ಬೈಡನ್ ಮತ್ತು ಸಲ್ಮಾನ್ ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಆದರೆ ತೀವ್ರ ವಿವಾದ ಕೆರಳಿಸಿದ್ದ ಖಶೋಗ್ಗಿ ಹತ್ಯೆ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಖಶೋಗ್ಗಿ ಅವರ ಕೊಲೆ ಹಾಗೂ ಅವರ ದೇಹವನ್ನು ನಾಶಗೊಳಿಸಿದ ಕೃತ್ಯದಲ್ಲಿ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ಭಾಗಿಯಾಗಿದ್ದಾರೆ ಎಂದು ಅಮೆರಿಕದ ಡೈರೆಕ್ಟರ್ ಆಫ್ ಇಂಟೆಲಿಜೆನ್ಸ್ (ಡಿಎನ್‌ಐ) ವರದಿಯಲ್ಲಿ ತಿಳಿಸಿದೆ ಎಂದು ಹೇಳಲಾಗಿದೆ.

US President Joe Biden To Call Saudi Arabias King Salman About Journalist Kashoggi Murder Report

ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರರಾಗಿದ್ದ ಖಶೋಗ್ಗಿ, ಸೌದಿ ಸರ್ಕಾರದ ನೀತಿಗಳ ಕಟು ಟೀಕಾಕಾರರಾಗಿದ್ದರು. ಅವರನ್ನು 2018ರ ಅಕ್ಟೋಬರ್‌ನಲ್ಲಿ ಇಸ್ತಾನ್‌ಬುಲ್‌ನ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ಸೌದಿ ಏಜೆಂಟರ ತಂಡವೊಂದು ಹತ್ಯೆ ಮಾಡಿತ್ತು. ತಮ್ಮ ಮದುವೆಗೆ ಅಗತ್ಯವಾದ ದಾಖಲೆಗಳನ್ನು ತರಲು ಆ ಕಟ್ಟಡಕ್ಕೆ ಹೋಗಿದ್ದಾಗ ಖಶೋಗ್ಗಿ ಅವರನ್ನು ಕೊಲೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಕ್ರೂರವಾಗಿ ಕತ್ತರಿಸಿ ಆಸಿಡ್‌ನಲ್ಲಿ ಕರಗಿಸಲಾಗಿತ್ತು.

English summary
US President Joe Biden likely to call Saudi Arabia's King Salman to discuss about journalist Jamal Kashoggi's murder report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X