ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾನ್ಸಿ ಪೆಲೊಸಿ ತೈವಾನ್‌ ಭೇಟಿ ನೀಡುವುದು ಒಳ್ಳೆಯ ಆಲೋಚನೆಯಲ್ಲ: ಜೋ ಬೈಡೆನ್‌

|
Google Oneindia Kannada News

ವಾಷಿಂಗ್ಟನ್, ಜುಲೈ21: ಯುಎಸ್‌ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ತೈವಾನ್ ಭೇಟಿ ಸುದ್ದಿ ಈಗ ಅಮೆರಿಕ, ಚೀನಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಆಗಸ್ಟ್‌ನಲ್ಲಿ ಪೆಲೋಸಿ ತೈವಾನ್‌ಗೆ ಭೇಟಿ ನೀಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಚೀನಾ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪೆಲೊಸಿ ತೈವಾನ್ ಭೇಟಿ ಬಗ್ಗೆ ಹೇಳಿಕೆ ನೀಡಿದ್ದು, "ಸದ್ಯಕ್ಕೆ ಪೆಲೊಸಿ ತೈವಾನ್‌ಗೆ ಭೇಟಿ ನೀಡುವುದು ಒಳ್ಳೆಯ ಆಲೋಚನೆಯಲ್ಲ ಎಂದು ಮಿಲಟರಿ ಭಾವಿಸಿದೆ" ಎಂದು ತಿಳಿಸಿದ್ದಾರೆ.

ಆದರೆ, ಅದರ ಸ್ಥಿತಿ ಏನೆಂದು ನನಗೆ ತಿಳಿಸಿದಲ್ಲ ಎಂದು ಜೋ ಬೈಡೆನ್, ಮುಂದಿನ 10 ದಿನಗಳಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತನಾಡುವ ನಿರೀಕ್ಷೆ ಎಂದು ತಿಳಿಸಿದರು.

ಮೂಲಗಳ ಪ್ರಕಾರ ನ್ಯಾನ್ಸಿ ಪೆಲೊಸಿ ಆಗಸ್ಟ್‌ನಲ್ಲಿ ತೈವಾನ್‌ಗೆ ಭೇಟಿ ನೀಡಲು ಯೋಜಿಸಿದ್ದರು. ಒಂದು ವೇಳೆ ಪೆಲೊಸಿ ತೈವಾನ್‌ಗೆ ಭೇಟಿ ನೀಡಿದರೆ ನ್ಯೂಟ್ ಗಿಂಗ್ರಿಚ್ ನಂತರ 25 ವರ್ಷಗಳ ಬಳಿಕ ತೈವಾನ್‌ಗೆ ಭೇಟಿ ನೀಡುವ ಮೊದಲ ಅಮೆರಿಕ ಶಾಸಕಾಂಗ ಸಭೆಯ ಸ್ಪೀಕರ್ ಎನಿಸಿಕೊಳ್ಳಲಿದ್ದಾರೆ. ಜೊ ಬೈಡೆನ್‌ ಹೇಳಿಕೆಯ ನಂತರ ಪೆಲೊಸಿ ತನ್ನ ಪ್ರವಾಸವನ್ನು ರದ್ದುಗೊಳಿಸಲು ಅಥವಾ ಪ್ರಯಾಣದ ವೇಳೆಯನ್ನು ಬದಲಾಯಿಸುತ್ತಾರೆಯೇ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

US President Joe Biden Replied over Nancy Pelosi Taiwan Trip

ಅಮೆರಿಕ-ಚೀನಾ ನಡುವೆ ಉದ್ವಿಗ್ನತೆ ಸೃಷ್ಟಿ

ಪೆಲೊಸಿ ತೈವಾನ್ ಪ್ರವಾಸದಿಂದ ಅಮೆರಿಕ ಮತ್ತು ಚೀನಾ ನಡುವೆ ಉದ್ವಿಗ್ನತೆ ಸೃಷ್ಟಿಯಾಗುವ ಸಾಧ್ಯತೆ ಇದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ವಾರಗಳ ಹಿಂದೆ ಅಮೆರಿಕದ ವಿಮಾನಕ್ಕೆ ಚೀನಾ ಯುದ್ಧ ವಿಮಾನ ಎದುರಾದ ನಂತರ ಎರಡೂ ದೇಶಗಳ ನಡುವೆ ಕಂದಕ ಇನ್ನಷ್ಟು ಹೆಚ್ಚಾಗಿದೆ.

"ಅಮೆರಿಕವು ತಪ್ಪು ಹಾದಿಯಲ್ಲಿ ಸಾಗಿದರೆ, ಚೀನಾ ಖಂಡಿತವಾಗಿಯೂ ತನ್ನ ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು ದೃಢವಾದ ಮತ್ತು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದರು. "ಇದರಿಂದ ಉಂಟಾದ ಎಲ್ಲಾ ಪರಿಣಾಮಗಳಿಗೆ ಯುನೈಟೆಡ್ ಸ್ಟೇಟ್ಸ್ ಸಂಪೂರ್ಣ ಜವಾಬ್ದಾರನಾಗಿರಬೇಕು." ಎಂದು ಎಚ್ಚರಿಕೆ ನೀಡಿದ್ದರು.

US President Joe Biden Replied over Nancy Pelosi Taiwan Trip

1949 ರಲ್ಲಿ ಮಾವೋ ಝೆಡಾಂಗ್ ಚೀನಾದಲ್ಲಿ ಕಮ್ಯುನಿಸ್ಟ್ ರಾಜ್ಯವನ್ನು ಸ್ಥಾಪಿಸಿದಾಗಿನಿಂದ ತೈವಾನ್ ಅನ್ನು ತನ್ನ ದೇಶದ ಭಾಗವೆಂದು ಪರಿಗಣಿಸಿದೆ. 1949ರ ಗಲಭೆಯಲ್ಲಿ ಚಿಯಾಂಗ್ ಕೈ-ಶೇಕ್ ನೇತೃತ್ವದ ಚೀನಾ ರಾಷ್ಟ್ರೀಯವಾದಿಗಳು ತೈವಾನ್‌ಗೆ ಓಡಿಹೋದರು. ಅಮೇರಿಕನ್ ಸರ್ಕಾರಗಳು ತೈವಾನ್‌ನೊಂದಿಗೆ ವಿಶಿಷ್ಟವಾದ, ಪರೋಕ್ಷ ಸಂಬಂಧವನ್ನು ಹೊಂದಿದೆ. ಇದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ.

ಒಂದು ವೇಳೆ ಪೆಲೊಸಿ ತೈವಾನ್‌ಗೆ ಭೇಟಿ ನೀಡಿದರೆ ಚೀನಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ನೋಡಬೇಕಿದೆ. ಚೀನಾದ ಭದ್ರತೆ ದೃಷ್ಟಿಯಿಂದ ತೈವಾನ್ ಪ್ರಮುಖ ಸ್ಥಾನ ಪಡೆದಿದೆ. ಭದ್ರತೆ ಮಾತ್ರವಲ್ಲದೆ ಆರ್ಥಿಕ ಕಾರಣಗಳಿಗಾಗಿ ತೈವಾನ್ ಮೇಲೆ ಹಿಡಿತ ಸಾಧಿಸಲು ಚೀನಾ ಹವಣಿಸುತ್ತಿದೆ. ಅಮೆರಿಕ ತೈವಾನ್‌ಗೆ ಬೆಂಬಲವಾಗಿ ನಿಂತಿದೆ.

English summary
US President Joe Biden Replied about House Speaker Nancy Pelosi Taiwan Trip, "The military thinks it’s not a good idea right now," "But I don’t know what the status of it is," He added. Biden also said he expects to talk to Chinese President Xi Jinping in the next 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X