ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷರಾಗಿ ಜೋ ಬೈಡನ್ ಮೊದಲ ಭಾಷಣದ ಮುಖ್ಯಾಂಶಗಳು

|
Google Oneindia Kannada News

ವಾಷಿಂಗ್ಟನ್, ಜನವರಿ 20: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಬುಧವಾರ ಅಧಿಕಾರ ಸ್ವೀಕರಿಸಿದರು. ಅವರೊಂದಿಗೆ ಮೊದಲ ಮಹಿಳಾ ಹಾಗೂ ಕಪ್ಪು ವರ್ಣೀಯ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡುವ ಮೂಲಕ ಭಾರತ ಮೂಲದ ಕಮಲಾ ದೇವಿ ಹ್ಯಾರಿಸ್ ಅವರು ಇತಿಹಾಸ ಬರೆದರು.

ಅಮೆರಿಕದ ಸಂಸತ್‌ನಲ್ಲಿ ನಡೆದ ವೈಭವಯುತ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ಬೈಡನ್ ಬರೆದ ದಾಖಲೆ ಏನು?ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ಬೈಡನ್ ಬರೆದ ದಾಖಲೆ ಏನು?

ಬಳಿಕ ಮಾತನಾಡಿದ ಬೈಡನ್, 'ಇದು ಅಮೆರಿಕದ ದಿನ. ಪ್ರಜಾಪ್ರಭುತ್ವದ ದಿನ. ಇದು ಅತ್ಯದ್ಭುತ ದೇಶ. ನಾವೆಲ್ಲ ಒಳ್ಳೆಯ ಜನರು. ಅಮೆರಿಕದ ಪಾಲಿಗೆ ಇದು ಐತಿಹಾಸಿಕ ಮತ್ತು ಹೊಸ ಭರವಸೆಯ ದಿನ. ಇಂದು ಈ ದಿಗ್ವಿಜಯವನ್ನು ಅಭ್ಯರ್ಥಿಯಾಗಿ ಅಲ್ಲ, ಆದರೆ ಪ್ರಜಾಪ್ರಭುತ್ವವಾಗಿ ಸಂಭ್ರಮಿಸುತ್ತಿದ್ದೇವೆ. ಈ ಸಮಯದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ' ಎಂದು ಹೇಳಿದರು.

ಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನ

'ಈ ಚಳಿಗಾಲದ ಗಂಡಾಂತರವನ್ನು ಎದುರಿಸಲು ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಬೇಕಿದೆ. ಅಮೆರಿಕವನ್ನು ಜತೆಗೂಡಿಸುವುದು ಮತ್ತು ದೇಶವನ್ನಾಗಿ ಏಕತೆ ಸಾಧಿಸುವುದು ನಮ್ಮ ಮೂಲ ಬಯಕೆಯಾಗಿದೆ. ಈ ಕಾರಣಕ್ಕಾಗಿ ನನ್ನ ಜತೆಗೂಡುವಂತೆ ಪ್ರತಿ ಅಮೆರಿಕನ್ನರಿಗೂ ಕೋರುತ್ತೇನೆ ಎಂದರು.

ಒಡೆಯುವಿಕೆಗೆ ಕಾರಣವಾಗಬಾರದು

ಒಡೆಯುವಿಕೆಗೆ ಕಾರಣವಾಗಬಾರದು

ನಮಗೆ ಬೆಂಬಲ ನೀಡದವರಿಗೂ ಕೇಳಿಕೊಳ್ಳುತ್ತೇನೆ, ಕೇಳಿಸಿಕೊಳ್ಳಿ. ನೀವು ಈಗಲೂ ಒಪ್ಪದೆ ಹೋದರೂ ಪರವಾಗಿಲ್ಲ. ಇದೇ ಪ್ರಜಾಪ್ರಭುತ್ವ. ಆದರೆ ಅಸಮ್ಮತಿ ಎನ್ನುವುದು ಬೇರ್ಪಡುವಿಕೆಗೆ ಕಾರಣವಾಗಬಾರದು ಎಂದು ಬೈಡನ್ ಕಿವಿಮಾತು ಹೇಳಿದ್ದಾರೆ.

ಮೈತ್ರಿಗಳ ದುರಸ್ತಿ

ಮೈತ್ರಿಗಳ ದುರಸ್ತಿ

ಅಮೆರಿಕ ಪರೀಕ್ಷೆಗೆ ಒಳಪಟ್ಟಿದೆ ಮತ್ತು ನಾವು ದೃಢವಾಗಿ ಬಂದಿದ್ದೇವೆ. ನಮ್ಮ ಮೈತ್ರಿಕೂಟಗಳನ್ನು ದುರಸ್ತಿಪಡಿಸುತ್ತೇವೆ. ನಮ್ಮ ಉದಾಹರಣೆಗಳ ಶಕ್ತಿಯಿಂದ ಮುನ್ನಡೆಯಲಿದ್ದೇವೆ ಎಂದು ತಮ್ಮ ವಿದೇಶಿ ಮಿತ್ರರಿಗೆ ಬೈಡನ್ ಸಂದೇಶ ರವಾನಿಸಿದ್ದಾರೆ.

ಮೃತರಿಗೆ ಶ್ರದ್ಧಾಂಜಲಿ

ಅಧ್ಯಕ್ಷನಾಗಿ ನನ್ನ ಮೊದಲ ನಡೆಯೇನೆಂದರೆ ಈ ಪಿಡುಗಿನ ಕಾರಣದಿಂದ ಜೀವ ಕಳೆದುಕೊಂಡ ಜನರಿಗಾಗಿ ಒಂದು ಕ್ಷಣ ಮೌನಾಚರಣೆಯ ಗೌರವ ಸಲ್ಲಿಸುವಲ್ಲಿ ನನ್ನೊಂದಿಗೆ ಸೇರಿಕೊಳ್ಳುವಂತೆ ಕೋರುವುದಾಗಿದೆ ಎಂದು ಬೈಡನ್, ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ಲಕ್ಷಾಂತರ ಜನರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ವಿಭಜನೆಯ ಶಕ್ತಿಗಳ ಅರಿವಿದೆ

ವಿಭಜನೆಯ ಶಕ್ತಿಗಳ ಅರಿವಿದೆ

ನಮ್ಮನ್ನು ವಿಭಜಿಸುವ ಶಕ್ತಿಗಳು ಪ್ರಬಲವಾಗಿವೆ ಮತ್ತು ಅವು ವಾಸ್ತವ ಎನ್ನುವುದು ನನಗೆ ಗೊತ್ತು. ಆದರೆ ಅವು ಹೊಸದಲ್ಲ ಎಂದೂ ನನಗೆ ತಿಳಿದಿದೆ. ಜನಾಂಗೀಯ ನಿಂದನೆ, ಸ್ಥಳೀಯತೆ, ಭಯ, ಅಪನಗದೀಕರಣದಂತಹ ಸಮಾನ ಮತ್ತು ಕೆಟ್ಟ ವಾಸ್ತವಗಳು ನಮ್ಮನ್ನು ಹರಿದು ಹಂಚಿಹಾಕಿವೆ. ಇದರ ನಡುವೆ ಅಮೆರಿಕದ ಇತಿಹಾಸ ಸತತವಾಗಿ ಹೆಣಗಾಡಿದೆ ಎಂದರು.

ಉಗ್ರವಾದ, ತೀವ್ರಗಾಮಿತನಕ್ಕೆ ಸೋಲು

ಉಗ್ರವಾದ, ತೀವ್ರಗಾಮಿತನಕ್ಕೆ ಸೋಲು

ರಾಜಕೀಯ ತೀವ್ರಗಾಮಿತನ ಮತ್ತು ಆಂತರಿಕ ಉಗ್ರವಾದವನ್ನು ಸೋಲಿಸುವುದಾಗಿ ಬೈಡನ್ ಪ್ರತಿಜ್ಞೆ ಮಾಡಿದರು. ಅಮೆರಿಕದ ಜನತೆ ರಾಜಕೀಯ ತೀವ್ರಗಾಮಿತನ, ಬಿಳಿವರ್ಣದ ಶ್ರೇಷ್ಠತೆಯ ವ್ಯಸನ, ಆಂತರಿಕ ಭಯೋತ್ಪಾದನೆಗಳ ಹೆಚ್ಚಳವನ್ನು ಎದುರಿಸುತ್ತಿದ್ದಾರೆ. ಅದನ್ನು ನಾವು ಎದುರಿಸಬೇಕು. ನಾವು ಸೋಲಿಸುತ್ತೇವೆ ಎಂದರು.

English summary
Joe Biden has sworn in as 46th president of America, made his inaugural speech. Here is the highlights of his speech in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X