ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್ ಲಸಿಕೆಯ ಬೂಸ್ಟರ್ ಡೋಸ್ ಪಡೆದ ಯುಎಸ್ ಅಧ್ಯಕ್ಷ ಜೋ ಬೈಡೆನ್

|
Google Oneindia Kannada News

ವಾಶಿಂಗ್ಟನ್, ಸೆಪ್ಟೆಂಬರ್ 28: ಯುಎಸ್ ಅಧ್ಯಕ್ಷ ಜೋ ಬೈಡೆನ್ ಸೋಮವಾರ ಕೊರೊನಾವೈರಸ್ ಸೋಂಕಿನಿಂದ ರಕ್ಷಿಸುವ ಬೂಸ್ಟರ್ ಡೋಸ್ ಪಡೆದಿದ್ದಾರೆ. ಕೊವಿಡ್-19 ಲಸಿಕೆ ಪಡೆದುಕೊಳ್ಳಲು ಇಂದಿಗೂ ಹಿಂದೇಟು ಹಾಕುತ್ತಿರುವ ಜನರಿಂದ ದೇಶಕ್ಕೆ ಹಾನಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಶ್ವೇತ ಭವನದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ತಮ್ಮ ಎಡ ತೋಳಿಗೆ ಫೈಜರ್ ಲಸಿಕೆಯನ್ನು ಪಡೆದುಕೊಂಡರು. ಸೆಪ್ಟೆಂಬರ್ 22ರಂದು ಹೊರಡಿಸಿದ ಆರೋಗ್ಯ ಮಾರ್ಗಸೂಚಿಯಲ್ಲಿ ಕೊರೊನಾವೈರಸ್ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿರುವ ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆಯ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ನೀಡುವುದಕ್ಕೆ ಯುಎಸ್ ಸರ್ಕಾರ ಅನುಮೋದನೆ ನೀಡಿತ್ತು.

ಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆಭಾರತದಲ್ಲಿ ಬೂಸ್ಟರ್ ಡೋಸ್ ಅಲ್ಲ, ಎರಡು ಡೋಸ್ ಲಸಿಕೆಗೆ ಮೊದಲ ಆದ್ಯತೆ

ಕೊರೊನಾವೈರಸ್ ಸೋಂಕಿನ ಬೂಸ್ಟರ್ ಲಸಿಕೆಯನ್ನು ಪಡೆದುಕೊಂಡ ಬಳಿಕ ಮಾತನಾಡಿದ ಅವರು, "ಹಾಗೆ ಕಾಣುತ್ತಿಲ್ಲ ನಿಜ, ಆದರೆ ನನ್ನ ವಯಸ್ಸು 65 ದಾಟಿದೆ," ಎಂದು ಲಸಿಕೆ ಪಡೆದುಕೊಂಡ 78 ವರ್ಷದ ಜೋ ಬೈಡೆನ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಶೇ.77ರಷ್ಟು ಜನರು ಲಸಿಕೆ ಹಾಕಿಸಿಕೊಂಡರೆ ಸಾಕಾಗಲ್ಲ

ಶೇ.77ರಷ್ಟು ಜನರು ಲಸಿಕೆ ಹಾಕಿಸಿಕೊಂಡರೆ ಸಾಕಾಗಲ್ಲ

ಫೈಜರ್ ಕಂಪನಿಯ ಬೂಸ್ಟರ್ ಡೋಸ್ ಪಡೆದುಕೊಂಡ ನಂತರ ಮಾತನಾಡಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಜನರಿಂದ ದೇಶಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಅಮೆರಿಕಾದಲ್ಲಿ ಶೇ.77ರಷ್ಟು ಜನರು ಕೊವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇಂದಿಗೂ ಅದೆಷ್ಟೋ ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಳ್ಳುವುದುಕ್ಕೂ ನಿರಾಕರಿಸುತ್ತಿದ್ದಾರೆ. ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡುವುದಕ್ಕೆ ಲಸಿಕೆ ಪಡೆದುಕೊಳ್ಳುವುದು ತೀರಾ ಅತ್ಯಗತ್ಯವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

1 ಕೋಟಿ ಜನರನ್ನು ಲಕ್ಷ್ಯದಲ್ಲಿಟ್ಟುಕೊಂಡು ಘೋಷಣೆ

1 ಕೋಟಿ ಜನರನ್ನು ಲಕ್ಷ್ಯದಲ್ಲಿಟ್ಟುಕೊಂಡು ಘೋಷಣೆ

ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿನಿಂದ ಅಪಾಯ ಎದುರಿಸುತ್ತಿರುವ ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆಯ ಮೂರನೇ ಡೋಸ್ ಪಡೆಯಲು ಅವಕಾಶ ನೀಡಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡ 1 ಕೋಟಿಗೂ ಅಧಿಕ ಮಂದಿಯು ಈ ಘೋಷಣೆ ಹಿಂದಿನ ಪ್ರಮುಖ ಭಾಗವಾಗಿದ್ದಾರೆ. 2ನೇ ಡೋಸ್ ಪಡೆದ ಆರು ತಿಂಗಳ ಕಳೆದಿರುವ ಹಿನ್ನೆಲೆ ಅಂಥವರಿಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ಸರ್ಕಾರ ಈ ಘೋಷಣೆ ಹೊರಡಿಸಿದೆ. "ಈ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ವಿಜ್ಞಾನ ಮತ್ತು ಪ್ರಸ್ತುತ ಲಭ್ಯವಿರುವ ದತ್ತಾಂಶವು ಕೋವಿಡ್ -19 ಲಸಿಕೆಗಳಿಗಾಗಿ ಎಫ್‌ಡಿಎ ನಿರ್ಧಾರ ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ ಎಂಬುದನ್ನು ಇಂದಿನ ಕ್ರಮ ತೋರಿಸುತ್ತದೆ" ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ನ ಹಂಗಾಮಿ ಮುಖ್ಯಸ್ಥ ಜಾನೆಟ್ ವುಡ್‌ಕಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

16 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವುದಿಲ್ಲ

16 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವುದಿಲ್ಲ

ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರದ ಸಮಿತಿಯು ಶ್ವೇತಭವನದ ಆರಂಭಿಕ ಯೋಜನೆಯನ್ನು ನಿರಾಕರಿಸಿತ್ತು. 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಫೈಜರ್ ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅನುಮೋದಿಸಲಾಗಿತ್ತು. ಆದರೆ ಅಧ್ಯಕ್ಷ ಜೋ ಬೈಡೆನ್ ಆಡಳಿತದ ವೈಖರಿಯು ಸಮಿತಿಯು ಖಂಡನೆಗೆ ಕಾರಣವಾಗಿತ್ತು. ಲಸಿಕೆ ತಜ್ಞರು, ಸಾಂಕ್ರಾಮಿಕ ರೋಗ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಗುಂಪು ಯುವಜನರಿಗೆ, ವಿಶೇಷವಾಗಿ ಮಯೋಕಾರ್ಡಿಟಿಸ್‌ಗೆ ಹೆಚ್ಚು ಒಳಗಾಗುವ ಯುವ ಪುರುಷರಿಗೆ ಅಪಾಯವು ಭಿನ್ನವಾಗಿರುತ್ತದೆ ಎಂದು ತೀರ್ಮಾನಿಸಿತ್ತು.

ನಿರ್ದಿಷ್ಟ ರೀತಿಯಲ್ಲಿ ಬೂಸ್ಟರ್ ಡೋಸ್ ಕುರಿತು ಶಿಫಾರಸ್ಸು

ನಿರ್ದಿಷ್ಟ ರೀತಿಯಲ್ಲಿ ಬೂಸ್ಟರ್ ಡೋಸ್ ಕುರಿತು ಶಿಫಾರಸ್ಸು

ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತ ನಿರ್ವಹಣೆ ಕೇಂದ್ರದ(ಸಿ.ಡಿ.ಸಿ) ತಜ್ಞರ ತಂಡವು ಫೈಜರ್ ಕೊರೊನಾವೈರಸ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ ಕುರಿತು ಚರ್ಚೆ ನಡೆಸುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳುವವರ ಬಗ್ಗೆ ಇನ್ನೂ ಕೆಲವು ನಿರ್ದಿಷ್ಟ ಶಿಫಾರಸ್ಸುಗಳನ್ನು ಮಾಡುವ ಸಾಧ್ಯತೆಗಳಿವೆ. ಉದಾಹರಣೆಗೆ, ತೆಳುವಾದ ಮೈಕಟ್ಟನ್ನು ಹೊಂದಿರುವ ವ್ಯಕ್ತಿಯು "ಕೋವಿಡ್‌ನಿಂದ ಹೆಚ್ಚಿನ ಅಪಾಯ" ಎದುರಿಸಲಿದ್ದಾರೆ ಎಂದು ಪರಿಗಣಿಸಿದರೆ, ಇಂಥ ವ್ಯಾಖ್ಯಾನವು ಯುಎಸ್ ಜನಸಂಖ್ಯೆಯಲ್ಲಿ ಶೇ.42ರಷ್ಟಿರುವ 20 ವರ್ಷಕ್ಕಿಂತ ಮೇಲ್ಪಟ್ಟವರನ್ನು ಒಳಗೊಂಡಿರುತ್ತದೆ.

ಅಮೆರಿಕಾದಲ್ಲಿ ಯಾವ ಕೆಲಸದ ಸ್ಥಳಗಳು, ಸಂಸ್ಥೆಗಳು ಹಾಗೂ ಔದ್ಯೋಗಿಕ ವಲಯಗಳು ಆಗಾಗ ಕೊವಿಡ್-19 ಸೋಂಕಿನ ಭೀತಿ ಎದುರಿಸುತ್ತವೆ ಎಂಬುದನ್ನು ಮುಖ್ಯವಾಗಿ ಇಲ್ಲಿ ಸಿ.ಡಿ.ಸಿ ಗಮನದಲ್ಲಿ ಇಟ್ಟುಕೊಳ್ಳಬಹುದು. ಆದ್ದರಿಂದಲೇ "ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಮತ್ತು ಡೇ ಕೇರ್ ಸಿಬ್ಬಂದಿ, ಕಿರಾಣಿ ಅಂಗಡಿ ಕೆಲಸಗಾರರು ಮತ್ತು ಮನೆಯಿಲ್ಲದ ನಿರಾಶ್ರಿತರು ಅಥವಾ ಕಾರಾಗೃಹಗಳಲ್ಲಿ ಇರುವ ಇತರರನ್ನು ಒಳಗೊಳ್ಳುತ್ತದೆ" ಎಂದು ಎಫ್‌ಡಿಎ ಸೂಚಿಸುತ್ತದೆ. ಎಫ್‌ಡಿಎಯ ತುರ್ತು ಬಳಕೆಯ ಅಧಿಕಾರ (ಇಯುಎ) 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತೀವ್ರ ಅನಾರೋಗ್ಯ ಮತ್ತು ಹೆಚ್ಚಿನ ಮಾನ್ಯತೆ ವರ್ಗಗಳ ಹೆಚ್ಚಿನ ಅಪಾಯಕ್ಕೆ ಅನ್ವಯಿಸುತ್ತದೆ. ಇದು ಫೈಜರ್ ಲಸಿಕೆಗೆ ಮಾತ್ರ ಅನ್ವಯಿಸುತ್ತದೆ.

ಯಾರಲ್ಲಿ ಮೂರನೇ ಡೋಸ್ ಲಸಿಕೆಯ ನಿರೀಕ್ಷೆ?

ಯಾರಲ್ಲಿ ಮೂರನೇ ಡೋಸ್ ಲಸಿಕೆಯ ನಿರೀಕ್ಷೆ?

ಫೈಜರ್ ಲಸಿಕೆಯ ಎರಡು ಡೋಸ್ ಪಡೆದ ವ್ಯಕ್ತಿಗಳಿಗೆ ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಅನುಮೋದನೆ ಸಿಕ್ಕಿದೆ. ಆದರೆ ಇದುರ ಇತರೆ ಲಸಿಕೆಗಳಿಗೆ ಅನ್ವಯವಾಗುವುದಿಲ್ಲ. ಈ ಹಿನ್ನೆಲೆ ಮಾಡರ್ನಾ, ಜಾನ್ಸನ್ ಆಂಡ್ ಜಾನ್ಸನ್ ಸೇರಿದಂತೆ ಇತರೆ ಕಂಪನಿ ಲಸಿಕೆಯನ್ನು ಪಡೆದುಕೊಂಡಿರುವ ಮೂರನೇ ಡೋಸ್ ಪಡೆದುಕೊಳ್ಳಲು ಅನುಮತಿಗಾಗಿ ಎದುರು ನೋಡುತ್ತಿದ್ದಾರೆ. ಫೈಜರ್ ಅಥವಾ ಮಾಡರ್ನಾದ ಎರಡು ಡೋಸ್ ಲಸಿಕೆ ಅಥವಾ ಜಾನ್ಸನ್ ಆಂಡ್ ಜಾನ್ಸನ್ ಒಂದು ಡೋಸ್ ಲಸಿಕೆಯು ಅತಿಹೆಚ್ಚು ಸುರಕ್ಷತೆಯನ್ನು ಒದಗಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ ಈ ಪರಿಣಾಮವು ವಯಸ್ಸಾದವರಲ್ಲಿ ಸ್ವಲ್ಪ ಕಡಿಮೆಯಾಗಿರುತ್ತದೆ.

ಬೂಸ್ಟರ್ ಡೋಸ್ ಎಂದರೇನು?

ಬೂಸ್ಟರ್ ಡೋಸ್ ಎಂದರೇನು?

ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಎರಡು ಡೋಸ್ ನೀಡುವುದಕ್ಕೆ ಜಾಗತಿಕ ಮಟ್ಟದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಹೊರತಾಗಿ ಎರಡು ಡೋಸ್ ಪಡೆದ ನಂತರದಲ್ಲಿ ಮೂರನೇ ಡೋಸ್ ಲಸಿಕೆಯನ್ನು ನೀಡುವುದು. ಆ ಮೂಲಕ ಪ್ರತಿಕಾಯ ವ್ಯವಸ್ಥೆಯನ್ನು ವೃದ್ಧಿಸುವ ಮತ್ತು ಡೆಲ್ಟಾ ರೂಪಾಂತರ ತಳಿಯಂತಾ ಅಪಾಯಕಾರಿ ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವ ಉದ್ದೇಶವನ್ನು ಹೊಂದಲಾಗಿದೆ. ಈಗಾಗಲೇ ನಿಗದಿತಪಡಿಸಿರುವ ಎರಡು ಡೋಸ್ ಹೊರತಾಗಿ ನೀಡುವ ಮೂರನೇ ಡೋಸ್ ಲಸಿಕೆಯನ್ನು ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ.

English summary
US President Joe Biden Gets Coronavirus Vaccine Booster Dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X