ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬ್ಲೇಕ್' ಬೆಂಕಿ ಹೊತ್ತಿರುವ ನಗರಕ್ಕೆ ಟ್ರಂಪ್ ಭೇಟಿ ನಿಗದಿ

|
Google Oneindia Kannada News

ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಕೆನೋಶಾ ನಗರದಲ್ಲಿ ಪೊಲೀಸರು ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾಕೋಬ್ ಬ್ಲೇಕ್ ಮೇಲೆ ಗುಂಡುಹಾರಿಸಿದ ಬಳಿಕ ಅಮೆರಿಕ ಉದ್ವಿಗ್ನಗೊಂಡಿದೆ. ಇಂತಹ ಹೊತ್ತಲ್ಲೇ ಟ್ರಂಪ್ ಕೆನೋಶಾ ನಗರಕ್ಕೆ ವಿಸಿಟ್ ಕೊಡಲು ಸಿದ್ಧತೆ ನಡೆಸಿದ್ದಾರೆ. ಶ್ವೇತಭವನದ ಮಾಹಿತಿ ಪ್ರಕಾರ ಟ್ರಂಪ್ ಮಂಗಳವಾರ ಕೆನೋಶಾ ನಗರಕ್ಕೆ ತೆರಳಲು ತಯಾರಿ ನಡೆದಿದೆ. ಈ ಮೂಲಕ ಅಧ್ಯಕ್ಷೀಯ ಚುನಾವಣೆ ಹೊತ್ತಲ್ಲಿ ಮತದಾರರ ಮನ ಗೆಲ್ಲಲು ಟ್ರಂಪ್ ಸರ್ಕಸ್ ಮಾಡುತ್ತಿದ್ದಾರೆ.

ಈ ಹಿಂದೆ ಜಾರ್ಜ್ ಫ್ಲಾಯ್ಡ್ ಹತ್ಯೆಯಾಗಿದ್ದಾಗ ಟ್ರಂಪ್ ಉಸಿರು ತೆಗೆದಿರಲಿಲ್ಲ. ಅಮೆರಿಕ ಧಗಧಗಿಸುವ ಸಂದರ್ಭದಲ್ಲಿ ಸುಖಾಸುಮ್ಮನೆ ಬೆಂಕಿಗೆ ತುಪ್ಪ ಸುರಿಯುವಂತೆ ಮಾತನಾಡಿದ್ದರು. ತಮ್ಮ ಸರಣಿ ಟ್ವೀಟ್ ಮೂಲಕ ಪ್ರತಿಭಟನೆ ಬಿರುಗಾಳಿ ಮತ್ತಷ್ಟು ಹೆಚ್ಚುವಂತೆ ಮಾಡಿದ್ದರು. ಟ್ರಂಪ್ ಟ್ವೀಟ್ ನೋಡಿದ್ದ ಪ್ರತಿಭಟನಾಕಾರರು ಮತ್ತಷ್ಟು ರೊಚ್ಚಿಗೆದ್ದಿದ್ದರು.

ಅಮೆರಿಕದಲ್ಲಿ ಮತ್ತೆ ಹೊತ್ತಿದ ಜನಾಂಗೀಯ ಜ್ವಾಲೆಅಮೆರಿಕದಲ್ಲಿ ಮತ್ತೆ ಹೊತ್ತಿದ ಜನಾಂಗೀಯ ಜ್ವಾಲೆ

ಆದರೆ ಜಾಕೋಬ್ ಬ್ಲೇಕ್ ವಿಚಾರದಲ್ಲಿ ಸಾಫ್ಟ್ ಗೇಮ್ ಮೊರೆ ಹೋಗಿರುವ ಡೊನಾಲ್ಡ್ ಟ್ರಂಪ್, ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಹೀಗಾಗಿಯೇ ಟ್ರಂಪ್ ಕೆನೋಶಾ ನಗರಕ್ಕೆ ಭೇಟಿ ಕೊಡಲು ಮುಂದಾಗಿದ್ದಾರೆ. ಆದರೆ ಪ್ರತಿಭಟನೆಯ ಕಿಚ್ಚು ಹಿಡಿತಕ್ಕೆ ಸಿಗದಷ್ಟು ಹಬ್ಬಿರುವಾಗಲೇ ಅಧ್ಯಕ್ಷರ ಭೇಟಿ ಸುರಕ್ಷಿತವಲ್ಲ ಎಂಬ ಮಾತು ಕೂಡ ಕೇಳಿಬಂದಿದ್ದು. ಟ್ರಂಪ್ ಪ್ರಚಾರಕ್ಕಾಗಿ ಹೀಗೆ ಮಾಡ್ತಿದ್ದಾರೆ ಎಂಬುದು ವಿರೋಧಿಗಳ ಆರೋಪ.

ಘಟನೆ ಹಿನ್ನೆಲೆ ಏನು..?

ಘಟನೆ ಹಿನ್ನೆಲೆ ಏನು..?

ಆಗಸ್ಟ್ 23ರಂದು ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ಕೆನೋಶಾ ನಗರದ ಪೊಲೀಸರು ಆಫ್ರಿಕನ್-ಅಮೆರಿಕನ್ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದರು. ಮಕ್ಕಳ ಜೊತೆ ಹೊರ ಹೋಗಿದ್ದ ಜಾಕೋಬ್ ಬ್ಲೇಕ್ ಎಂಬಾತ ಕಾರಲ್ಲಿ ಮರಳುವಾಗ ಇಬ್ಬರು ಮಹಿಳೆಯರು ಜಗಳವಾಡುತ್ತಿದ್ದರಂತೆ. ಈ ವೇಳೆ ವಾಹನದಿಂದ ಕೆಳಗಿಳಿದಿದ್ದ ಬ್ಲೇಕ್ ಆ ಜಗಳ ಬಿಡಿಸಿದ್ದಾನೆ. ಅಷ್ಟರಲ್ಲೇ ಅಲ್ಲಿಗೆ ಬಂದ ಪೊಲೀಸರು ಸತ್ಯ ಅರಿಯುವ ತಾಳ್ಮೆ ತೋರಿಸದೆ ಬ್ಲೇಕ್‌ನನ್ನು ಎಳೆದಾಡಿದ್ದರು. ಬ್ಲೇಕ್‌ನನ್ನು ಆತನ ಕಾರಿನ ಬಳಿ ಕರೆತಂದು, ಡೋರ್ ತೆಗೆಸಿ ಬೆನ್ನಿನ ಮೇಲಿಂದ 8 ಸುತ್ತು ಗುಂಡು ಹಾರಿಸಿದ್ದರು. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಬ್ಲೇಕ್ ಪಾರ್ಶ್ವವಾಯುಗೆ ತುತ್ತಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹಾಗೆ ಬ್ಲೇಕ್ ಮೇಲೆ ಗುಂಡು ಹಾರಿಸಿದ ಸುದ್ದಿ ಅಮೆರಿಕದಲ್ಲಿ ಮಿಂಚಿನ ಸಂಚಲನಸೃಷ್ಟಿಸಿತ್ತು. ತಕ್ಷಣ ಹಿಂಸಾಚಾರ ಭುಗಿಲೆದ್ದು ಅಮೆರಿಕದಾದ್ಯಂತ ಹೋರಾಟಗಳು ಆರಂಭವಾಗಿದ್ದವು.

ವೈರಲ್ ವೀಡಿಯೋ ನೋಡಿ ಬೆಚ್ಚಿಬಿದ್ದ ಅಪ್ಪ

ವೈರಲ್ ವೀಡಿಯೋ ನೋಡಿ ಬೆಚ್ಚಿಬಿದ್ದ ಅಪ್ಪ

ಜಾಕೋಬ್ ಬ್ಲೇಕ್ ಮೇಲೆ ಅಟ್ಯಾಕ್ ಆಗಿರುವ ಸುದ್ದಿ ಆತನ ತಂದೆಗೆ ತಿಳಿದಿದ್ದು 15 ನಿಮಿಷಗಳ ನಂತರ. ಆದರೆ ಸಣ್ಣ ಪ್ರಮಾಣದ ಗಾಯ ಅಂತಾ ಭಾವಿಸಿದ್ದ ಸೀನಿಯರ್ ಬ್ಲೇಕ್ ಗೆ, ತನ್ನ ಮಗನ ಮೇಲೆ ಆಗಿರುವುದು ಗಂಭೀರ ದಾಳಿ ಎಂಬ ಕಠೋರ ಸತ್ಯ ಅರಿವಾಗಿದ್ದು ವೈರಲ್ ವೀಡಿಯೋ ನೋಡಿದ ಮೇಲೆ. ಬ್ಲೇಕ್ ಮೇಲೆ ಪೊಲೀಸರು ಮನಸ್ಸಿಗೆ ಬಂದಂತೆ ಗುಂಡು ಹಾರಿಸುವ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ನೋಡಿದ್ದ ಬ್ಲೇಕ್ ಅಪ್ಪ ಅಲ್ಲೇ ಕುಸಿದು ಬಿದ್ದಿದ್ದರಂತೆ. ಮಗನ ಪರಿಸ್ಥಿತಿ ಕಂಡು ಮಗುವಿನಂತೆ ಬಿಕ್ಕಳಿಸಿ ಅತ್ತಿದ್ದರು ಬ್ಲೇಕ್ ತಂದೆ.

ಅವನೊಬ್ಬ ಸೌಮ್ಯ ಸ್ವಭಾವದ ವ್ಯಕ್ತಿ

ಅವನೊಬ್ಬ ಸೌಮ್ಯ ಸ್ವಭಾವದ ವ್ಯಕ್ತಿ

ತನ್ನ ಮಗನ ಬಗ್ಗೆ ಮಾತನಾಡಿದ್ದ ಬ್ಲೇಕ್ ತಂದೆ, ಬ್ಲೇಕ್ನ ಸೌಮ್ಯ ಸ್ವಭಾವ ನೆನೆದು ಕಣ್ಣೀರು ಹಾಕಿದ್ದರು. ಅವನೊಬ್ಬ ಸೌಮ್ಯ ಸ್ವಭಾವದ ವ್ಯಕ್ತಿ, ಬ್ಲೇಕ್ ಬಳಿ ಚಾಕು ಇತ್ತು ಅಂತಾ ಪೊಲೀಸರು ಹೇಳುತ್ತಿರುವುದನ್ನು ನಂಬಲಾಗುತ್ತಿಲ್ಲ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದಿದ್ದರು. ಮತ್ತೊಂದ್ಕಡೆ ವಿಸ್ಕಾನ್ಸಿನ್ ಸ್ಟೇಟ್ ಗವರ್ನರ್ ಕೂಡ ಇದೇ ಮಾತು ಹೇಳಿದ್ದು, ಬ್ಲೇಕ್ ಬಳಿ ಚಾಕು ಎಂಬುದಕ್ಕೆ ಪುರಾವೆ ಸಿಕ್ಕಿಲ್ಲ, ಆದರೆ ತನಿಖೆ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದರು. ಆದರೆ ಈವರೆಗೂ ಎಲ್ಲಾ ಅಸ್ಪಷ್ಟವಾಗಿದ್ದು, ತನಿಖೆ ಚುರುಕುಗೊಂಡಿದೆ.

ಟ್ರಂಪ್ ಹೋದರೆ ಮತ್ತಷ್ಟು ಬೆಂಕಿ..?

ಟ್ರಂಪ್ ಹೋದರೆ ಮತ್ತಷ್ಟು ಬೆಂಕಿ..?

ಕೆನೋಶಾ ಸೇರಿದಂತೆ ಇಡೀ ವಿಸ್ಕಾನ್ಸಿನ್ ರಾಜ್ಯ ಹೊತ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ಟ್ರಂಪ್ ಅಲ್ಲಿಗೆ ವಿಸಿಟ್ ಕೊಟ್ಟರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಟ್ರಂಪ್ಗೆ ಕೆನೋಶಾಗೆ ತೆರಳದಂತೆ ಸಲಹೆ ನೀಡಲಾಗಿದೆ. ಆದರೆ ಇದನ್ನ ಟ್ರಂಪ್ ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.

ಮುಂದುವರಿದ ಜನಾಂಗೀಯ ದೌರ್ಜನ್ಯ: ದೊಡ್ಡಣ್ಣನ ನಾಡು ಧಗಧಗಮುಂದುವರಿದ ಜನಾಂಗೀಯ ದೌರ್ಜನ್ಯ: ದೊಡ್ಡಣ್ಣನ ನಾಡು ಧಗಧಗ

English summary
US President Donald Trump will travel to Kenosha, Wisconsin, on Tuesday. The president will meet with law enforcement officers and assess the damage from the recent protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X