ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಸಾವಿರ ಸೈನಿಕರನ್ನು ವಾಷಿಂಗ್ಟನ್ ನಲ್ಲಿ ನಿಯೋಜಿಸಲು ಬಯಸಿದ್ದರಂತೆ ಟ್ರಂಪ್.!

|
Google Oneindia Kannada News

ವಾಷಿಂಗ್ಟನ್, ಜೂನ್ 8: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ವಾಷಿಂಗ್ಟನ್ ನಲ್ಲಿ 10 ಸಾವಿರ ಸೈನಿಕರನ್ನು ನಿಯೋಜಿಸುವಂತೆ ತಮ್ಮ ಸಲಹೆಗಾರರಿಗೆ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

Recommended Video

ಗೆಳೆಯನ ಅಗಲಿಕೆಗೆ ಕಣ್ಣೀರಿಟ್ಟ ಸೃಜನ್ ಲೋಕೇಶ್ | Srujan Lokesh | Chiranjeevi Sarja | Oneindia Kannada

ಆದರೆ, ಸೈನಿಕರ ನಿಯೋಜನೆಗೆ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ಜನರಲ್ ಮಾರ್ಕ್ ಮಿಲ್ಲೆ ಮತ್ತು ಅಟಾರ್ನಿ ಜನರಲ್ ವಿಲಿಯಂ ಬಾರ್ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಳಿಕ ಪೆಂಟಗನ್ ಶಿಫಾರಸ್ಸು ಮಾಡಿದಂತೆ ಶಾಂತಿ ಕಾಪಾಡಲು ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸಲಾಗಿತ್ತು.

ಬೈಬಲ್ ಜೊತೆ ಟ್ರಂಪ್ ಫೋಟೋ: ಆಕ್ರೋಶಗೊಂಡ ಅಮೇರಿಕಾದ ಧಾರ್ಮಿಕ ಮುಖಂಡರು.!ಬೈಬಲ್ ಜೊತೆ ಟ್ರಂಪ್ ಫೋಟೋ: ಆಕ್ರೋಶಗೊಂಡ ಅಮೇರಿಕಾದ ಧಾರ್ಮಿಕ ಮುಖಂಡರು.!

ಪ್ರತಿಭಟನೆಯನ್ನು ಹತ್ತಿಕ್ಕಲು ಮಿಲಿಟರಿ ನಿಯೋಜಿಸುವುದಾಗಿ ಹೇಳಿದ್ದ ಡೊನಾಲ್ಡ್ ಟ್ರಂಪ್ ವಿರುದ್ದ ಮಿಲಿಟರಿ ಅಧಿಕಾರಿಗಳೂ ಸೇರಿದಂತೆ ಹಲವರು ಖಂಡಿಸಿದ್ದರು.

ಬಹಿರಂಗ ಖಂಡನೆ

ಬಹಿರಂಗ ಖಂಡನೆ

ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಟ್ರಂಪ್ ರವರ ಮಿಲಿಟರಿ ನಿಯೋಜನೆಯ ನಿರ್ಧಾರದ ಕುರಿತು ಸಾರ್ವಜನಿಕವಾಗಿ ಖಂಡಿಸಿದ್ದರು. ಇದಾದ ಬಳಿಕ ಮಾರ್ಕ್ ಎಸ್ಪರ್ ಮೇಲೆ ಡೊನಾಲ್ಡ್ ಟ್ರಂಪ್ ಕೆಂಡಕಾರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಕ್ ಎಸ್ಪರ್ ಮೇಲೆ ಡೊನಾಲ್ಡ್ ಟ್ರಂಪ್ ಕುಪಿತಗೊಂಡಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಬಹುದು ಎಂದು ಊಹಿಸಲಾಗಿತ್ತು. ಆದ್ರೆ, ''ಮಾರ್ಕ್ ಎಸ್ಪರ್ ಮೇಲೆ ಟ್ರಂಪ್ ಗೆ ನಂಬಿಕೆ ಇದೆ'' ಎಂದು ವೈಟ್ ಹೌಸ್ ವಕ್ತಾರ ತಿಳಿಸಿದ್ದಾರೆ.

ನ್ಯಾಷನಲ್ ಗಾರ್ಡ್ ಗಳಿಗೆ ಟ್ರಂಪ್ ಆದೇಶ

ನ್ಯಾಷನಲ್ ಗಾರ್ಡ್ ಗಳಿಗೆ ಟ್ರಂಪ್ ಆದೇಶ

ಮಿಲಿಟರಿ ನಿಯೋಜನೆ ಕುರಿತು ಒಂದು ವಾರದಿಂದ ಸತತ ಟೀಕೆಗೊಳಗಾದ ನಂತರ ವಾಷಿಂಗ್ಟನ್ ನಿಂದ ಹಿಂದೆ ಸರಿಯುವಂತೆ ನ್ಯಾಷನಲ್ ಗಾರ್ಡ್ ಪಡೆಗಳಿಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಆದೇಶಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?

''ಪ್ರತಿಭಟನೆ ಇದೀಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ'' ಎಂದು ನ್ಯಾಷನಲ್ ಗಾರ್ಡ್ಸ್ ಹೇಳಿದ್ಮೇಲೆ, ಡೊನಾಲ್ಡ್ ಟ್ರಂಪ್ ಈ ನಿರ್ಧಾರ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್

''ವಾಷಿಂಗ್ಟನ್ ಡಿ.ಸಿ ಯಿಂದ ಹಿಂದೆ ಸರಿಯುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನ್ಯಾಷನಲ್ ಗಾರ್ಡ್ ಗೆ ನಾನು ಆದೇಶಿಸಿದ್ದೇನೆ. ಈಗ ಎಲ್ಲವೂ ನಿಯಂತ್ರಣದಲ್ಲಿದೆ. ಅವರು ಮನೆಗೆ ಹೋಗುತ್ತಾರೆ. ಆದರೆ, ಅಗತ್ಯವಿದ್ದರೆ ಬೇಗನೆ ಮರಳಬಹುದು'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು.

ಜಾರ್ಜ್ ಫ್ಲಾಯ್ಡ್ ವಿರುದ್ಧ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇತರೆ ಮೂರು ಪೊಲೀಸರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ.

English summary
US President Donald Trump wanted to deploy 10,000 troops in Washington DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X