ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ದೊಡ್ಡಣ್ಣ.. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋಗಿ ಹೋಗಿ ಹೀಗೆ ಮಾಡೋದಾ?

|
Google Oneindia Kannada News

ವಾಷಿಂಗ್ಟನ್, ಜೂನ್ 1: ''ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಡೆಮಾಕ್ರೆಟಿಕ್ ಪಕ್ಷದ ನಾಯಕ.. ಅಮೇರಿಕಾದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹಾಜರ್ ಇದ್ದರೆ, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಕರ್ ನಲ್ಲಿ ಅಡಗಿ ಕುಳಿತಿದ್ದರು'' - ಈ ಮಾತು ಸದ್ಯ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ತುಂಬೆಲ್ಲಾ ಕೇಳಿಬರುತ್ತಿದೆ.

Recommended Video

Train services start today , Dos and Don'ts during the journey | Railways Resumed | Oneindia Kannada

ವೈಟ್ ಹೌಸ್ ಮುಂದೆ ಪ್ರತಿಭಟನೆ ನಡೆದಾಗ ಹತ್ತತ್ರ ಒಂದು ಗಂಟೆ ಕಾಲ ಬಂಕರ್ ನಲ್ಲಿ ಅಡಗಿ ಕುಳಿತ ಕಾರಣಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲೂ ಡೊನಾಲ್ಡ್ ಟ್ರಂಪ್ ಟ್ರೋಲ್ ಆಗುತ್ತಿದ್ದಾರೆ.

ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!

ಬಿಳಿ ಪೊಲೀಸರ ಮೃಗೀಯ ವರ್ತನೆಯಿಂದ 46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೃತ ಪಟ್ಟ ಬಳಿಕ ಅಮೇರಿಕಾದ ಹಲವು ನಗರದಲ್ಲಿ ಪ್ರತಿಭಟನೆ ಆರಂಭವಾಯಿತು. ಮೊದಲು ಶಾಂತವಾಗಿ ಆರಂಭವಾದ ಪ್ರತಿಭಟನೆ, ಬಳಿಕ ಹಿಂಸಾತ್ಮಕ ರೂಪ ಪಡೆದುಕೊಂಡಿತು.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

ವೈಟ್ ಹೌಸ್ ಮುಂದೆಯೂ ಹಿಂಸಾತ್ಮಕ ಪ್ರತಿಭಟನೆ ನಡೆದ ಪರಿಣಾಮ, ಕೆಲಕಾಲ ಅಂಡರ್ ಗ್ರೌಂಡ್ ಬಂಕರ್ ನಲ್ಲಿ ಡೊನಾಲ್ಡ್ ಟ್ರಂಪ್ ನೆಲೆಸಿದ್ದರು.

ಬಂಕರ್ ನಲ್ಲಿ ಅಡಗಿ ಕೂತ ಡೊನಾಲ್ಡ್ ಟ್ರಂಪ್

ಬಂಕರ್ ನಲ್ಲಿ ಅಡಗಿ ಕೂತ ಡೊನಾಲ್ಡ್ ಟ್ರಂಪ್

ವೈಟ್ ಹೌಸ್ ಮುಂದೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ, ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನ ಅಂಡರ್ ಗ್ರೌಂಡ್ ಬಂಕರ್ ಗೆ ಕರೆದೊಯ್ದರು.

ಬಂಕರ್ ನಲ್ಲೇ ಸುಮಾರು ಒಂದು ಗಂಟೆ ಕಾಲ ಡೊನಾಲ್ಡ್ ಟ್ರಂಪ್ ಅಡಗಿ ಕುಳಿತಿದ್ದರು.

ಅಸಲಿಗೆ, ಭಯೋತ್ಪಾದಕ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ವೈಟ್ ಹೌಸ್ ಅಂಡರ್ ಗ್ರೌಂಡ್ ನಲ್ಲಿ ಬಂಕರ್ ವಿನ್ಯಾಸಗೊಳಿಸಲಾಗಿದೆ.

ಸುರಕ್ಷತೆ ಬಗ್ಗೆ ಟ್ರಂಪ್ ಗೆ ಆತಂಕ.?

ಸುರಕ್ಷತೆ ಬಗ್ಗೆ ಟ್ರಂಪ್ ಗೆ ಆತಂಕ.?

ಪೊಲೀಸ್ ಬ್ಯಾರಿಕೇಡ್ ಗಳನ್ನು ಬೀಳಿಸಿ, ಕಲ್ಲು ತೂರಾಟ ನಡೆಸುತ್ತಿದ್ದಾಗ.. ಪ್ರತಿಭಟನಾಕಾರರ ಸಮೂಹವನ್ನು ಕಂಡ ಡೊನಾಲ್ಡ್ ಟ್ರಂಪ್ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!

ಹಿಂಸಾತ್ಮಕ ಪ್ರತಿಭಟನೆಯಿಂದ ಹಲವು ನಗರಗಳು ಹೊತ್ತಿಯುರಿದರೂ, ಡೊನಾಲ್ಡ್ ಟ್ರಂಪ್ ಮಾತ್ರ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಪ್ರತಿಭಟನೆ ಕುರಿತು ಕೆಲ ಟ್ವೀಟ್ ಗಳನ್ನು ಮಾಡಿದ್ದರು.

ಟ್ರೋಲ್ ಆದ ಟ್ರಂಪ್

ಟ್ರೋಲ್ ಆದ ಟ್ರಂಪ್

''ಸ್ಟ್ರಾಂಗ್ ಮ್ಯಾನ್ ಅಂತ ಪ್ರದರ್ಶಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಬಂಕರ್ ನಲ್ಲಿ ಅಡಗಿ ಕುಳಿತರೇ.?'', ''ಡೊನಾಲ್ಡ್ ಟ್ರಂಪ್ ನಿಜಕ್ಕೂ ಬಲಿಷ್ಠ ವ್ಯಕ್ತಿಯೇ.?'', ''ಅಮೇರಿಕಾದ ಇತಿಹಾಸದಲ್ಲಿ ಇಂಥ 'ಸ್ಟ್ರಾಂಗ್ ಮ್ಯಾನ್'ನ ನಾವು ನೋಡೇ ಇಲ್ಲ'' ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಡೊನಾಲ್ಡ್ ಟ್ರಂಪ್ ರನ್ನು 'ಬಂಕರ್ ಬಾಯ್' ಎಂದು ವ್ಯಂಗ್ಯವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ

ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ

ಕಳೆದ ಆರು ದಿನಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದ ಈವರೆಗೂ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಪೊಲೀಸ್ ಕಾರುಗಳು ಬೆಂಕಿಗೆ ಆಹುತಿ ಆಗಿವೆ. ನೂರಾರು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರತಿಭಟನೆ ಸಂಬಂಧ ಈವರೆಗೂ ಅಮೇರಿಕಾದಲ್ಲಿ 1400ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. 40 ಕ್ಕೂ ಹೆಚ್ಚು ಸಿಟಿಗಳಲ್ಲಿ ಕರ್ಫ್ಯೂ ಮುಂದುವರೆದಿದೆ. ವಾಷಿಂಗ್ಟನ್ ಡಿ.ಸಿ ಸೇರಿದಂತೆ 15 ಸ್ಟೇಟ್ ಗಳಲ್ಲಿ ಶಾಂತಿ ಸ್ಥಾಪಿಸಲು ಐದು ಸಾವಿರ ನ್ಯಾಷನಲ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜಾರ್ಜ್ ಫ್ಲಾಯ್ ಸಾವು ಸಂಭವಿಸಿದ್ದು ಹೇಗೆ.?

ಜಾರ್ಜ್ ಫ್ಲಾಯ್ ಸಾವು ಸಂಭವಿಸಿದ್ದು ಹೇಗೆ.?

ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣರಾದ ಅಮಾನವೀಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಬುಕ್ ಮಾಡಿ ಬಂಧಿಸಲಾಗಿದೆ. ಜೊತೆಗೆ ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ.

English summary
US President Donald Trump trolled for hiding in White House bunker during Protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X