ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ಸೋಂಕಿತರನ್ನು ಭೇಟಿ ಮಾಡಿದರೂ ಟ್ರಂಪ್ ನೆಗಟಿವ್ !

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೂಡಾ ಕೊರೊನಾವೈರಸ್ ಸೋಂಕು ತಪಾಸಣೆಗೊಳಪಡಿಸಲಾಗಿದೆ. ಅಧ್ಯಕ್ಷ ಟ್ರಂಪ್ ಅವರಿಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಶ್ವೇತಭವನದ ವೈದ್ಯಾಧಿಕಾರಿ ಸ್ಪಷ್ಪಪಡಿಸಿದ್ದಾರೆ.

ಇತ್ತೀಚಿಗೆ ಮೂವರು ಸೋಂಕಿತರೊಡನೆ ಸಭೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಅವರಿಗೂ ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ, ಟ್ರಂಪ್ ಅವರನ್ನು ಪರೀಕ್ಷೆಗೊಳಪಡಿಸಲಾಯಿತು.

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

ಬ್ರೆಜಿಲ್ ಅಧ್ಯಕ್ಷರ ನಿಯೋಗದೊಡನೆ ಬಂದಿದ್ದ ಮೂವರು ಪ್ರತಿನಿಧಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ನಿಯೋಗವನ್ನು ಟ್ರಂಪ್ ಭೇಟಿ ಮಾಡಿದ್ದರು. ಫ್ಲೋರಿಡಾದ ರೆಸಾರ್ಟ್ ನಲ್ಲಿ ಈ ಕಾರ್ಯಕ್ರಮ ನಡೆದಿತ್ತು.

US President Donald Trump tests negative for coronavirus: White House

"ಈ ಕಾರ್ಯಕ್ರಮ ನಡೆದು ಒಂದು ವಾರವಾಗಿದ್ದು, ಅಧ್ಯಕ್ಷರಿಗೆ ಯಾವುದೇ ಸೋಂಕು ತಗುಲಿಲ್ಲ" ಎಂದು ಅಧ್ಯಕ್ಷರ ಆಪ್ತ ವೈದ್ಯಾಧಿಕಾರಿ ಸೀನ್ ಕೊನ್ಲಿ ಪ್ರಕಟಣೆ ಹೊರಡಿಸಿದ್ದಾರೆ.

ಕೊರೊನಾಭೀತಿ: ಯುಎಸ್‌ನಿಂದ ಭಾರತಕ್ಕೆ ಹೊರಡುವ ಮುನ್ನ ಓದಿಕೊರೊನಾಭೀತಿ: ಯುಎಸ್‌ನಿಂದ ಭಾರತಕ್ಕೆ ಹೊರಡುವ ಮುನ್ನ ಓದಿ

ಟ್ರಂಪ್ ಜೊತೆ ಡಿನ್ನರ್ ಮೇಜಿನಲ್ಲಿ ಕುಳಿತಿದ್ದ ರಾಯಭಾರಿ ಕಚೇರಿಯ ಪ್ರತಿನಿಧಿ ನೆಸ್ಟರ್ ಫೋರ್ಸ್ಟರ್ ಕೊರೊನಾ ಸೋಂಕು ಹೊಂದಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನಾರೊ ಅವರ ಆಪ್ತ ಬೆಂಬಲಿಗರೊಬ್ಬರು ಟ್ರಂಪ್ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಹೀಗಾಗಿ, ಟ್ರಂಪ್ ಪರೀಕ್ಷೆ ಅಗತ್ಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಹ್ಯಾಂಡ್ ಶೇಕ್ ಮಾಡದೆ ಇರುವುದು ಕಷ್ಟ ಕಷ್ಟ ಎಂದು ಟ್ರಂಪ್ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಟ್ರಂಪ್, ಕೊರೊನಾ ವಿರುದ್ಧ ಹೋರಾಡಲು ಕಾರ್ಪೊರೇಟ್ ಎಕ್ಸಿಕ್ಯೂಟಿವ್ಸ್, ಆರೋಗ್ಯ ಅಧಿಕಾರಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

ಸಾಂಕ್ರಾಮಿಕ ಪಿಡುಗೆ ಕೊವಿಡ್ 19 ಅಮೆರಿಕದಲ್ಲೂ ತನ್ನ ಅಟ್ಟಹಾಸ ಮೆರೆದಿದೆ. 2,200 ಜನರಿಗೆ ಸೋಂಕು ತಗುಲಿದ್ದು, 50ಕ್ಕೂ ಅಧಿಕ ಮಂದಿ ಮೃತರಾಗಿದ್ದರೆ.

English summary
United States President Donald Trump has tested negative for the new coronavirus, according to the president's personal physician.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X