ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಚಿಗಾನ್ ನಲ್ಲಿ ಮರು ಮತಎಣಿಕೆ ಅಭಿಯಾನ ಕೈಬಿಟ್ಟ ಟ್ರಂಪ್

|
Google Oneindia Kannada News

ವಾಶಿಂಗ್ಟನ್, ನವೆಂಬರ್.19: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ-2020ರಲ್ಲಿ ಡೆಮಾಕ್ರೆಟಿಕ್ ಪಕ್ಷ ಅಭ್ಯರ್ಥಿ ಜೋ ಬಿಡೆನ್ ಗೆಲುವಿನ ವಿರುದ್ಧ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಿಚಿಗಾನ್ ನಲ್ಲಿ ನಡೆಸಿದ ಅಭಿಯಾನವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ರಾಯಟರ್ಸ್ ವರದಿ ಮಾಡಿದೆ.

ನವೆಂಬರ್.03ರಂದು ಹೊರಬಿದ್ದ ಮಿಚಿಗಾನ್ ಕ್ಷೇತ್ರದ ಮತಎಣಿಕೆಯಲ್ಲಿ ದೋಷವಿದೆ. ಮರು ಮತ ಎಣಿಕೆ ನಡೆಸುವಂತೆ ಡೊನಾಲ್ಡ್ ಟ್ರಂಪ್ ಈ ಮೊದಲು ರಿಪಬ್ಲಿಕನ್ ಪಕ್ಷದ ಬೆಂಬಲಿಗರೊಂದಿಗೆ ಅಭಿಯಾನವನ್ನು ಆರಂಭಿಸಿದ್ದರು.

ವಿಸ್ಕೋಸಿನ್ ಗೆದ್ದ ಬೈಡನ್, ಶೇ 50 ದಾಟಿದ ಮತ ಗಳಿಕೆವಿಸ್ಕೋಸಿನ್ ಗೆದ್ದ ಬೈಡನ್, ಶೇ 50 ದಾಟಿದ ಮತ ಗಳಿಕೆ

ಗುರುವಾರ ಬೆಳಗ್ಗೆ ಮಿಚಿಗಾನ್ ನಲ್ಲಿ ನಾವು ಸಲ್ಲಿಸಿದ್ದ ದೂರನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇವೆ. ವೇಯ್ನ್ ಕೌಂಟಿಯಲ್ಲಿ ಪ್ರತಿ ನಿವಾಸಿಗಳ ಕಾನೂನಾತ್ಮಕ ಮತಗಳನ್ನು ಎಣಿಸಲಾಗಿದೆ. ಇದರ ಜೊತೆಗೆ ಅಕ್ರಮ ಮತಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಎಂದು ಟ್ರಂಪ್ ಪರ ವಕೀಲ ರೂಡಿ ಗಿಯುಲಿಯಾನಿ ತಿಳಿಸಿದ್ದಾರೆ.

US President Donald Trumps Campaign Says They Are Withdrawing Lawsuit In Michigan

ಜೋ ಬಿಡೆನ್ ಮತ್ತು ಟ್ರಂಪ್ ನಡುವೆ ಅಂತರ:

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 290 ಮತಗಳನ್ನು ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 232 ಮತಗಳೊಂದಿಗೆ ಸೋಲು ಕಂಡಿದ್ದಾರೆ. ಇಷ್ಟಲ್ಲದೇ ಒಟ್ಟು 306 ಕ್ಷೇತ್ರಗಳಲ್ಲಿ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ.

English summary
US Election: US President Donald Trump's Campaign Says They Are Withdrawing Lawsuit In Michigan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X