ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಹುಟ್ಟಿದ ಮಾತ್ರಕ್ಕೆ ಪೌರತ್ವ ಸಿಗದು: ಹೊಸ ಆದೇಶಕ್ಕೆ ಟ್ರಂಪ್ ಯೋಚನೆ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 31: ವಲಸಿಗರಿಗೆ ನೀಡುತ್ತಿರುವ ಪೌರತ್ವದ ಹಕ್ಕುಗಳನ್ನು ತೆಗೆದುಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಈಗ 'ಜನನ ಹಕ್ಕು ಪೌರತ್ವ'ದ ಮೇಲೆ ಬಿದ್ದಿದೆ.

ವಲಸಿಗ ಪೋಷಕರಿಗೆ ಅಮೆರಿಕ ನೆಲದಲ್ಲಿ ಮಗು ಜನಿಸಿದರೆ, ಮಗುವಿಗೆ ಅಲ್ಲಿನ ಪೌರತ್ವ ಲಭ್ಯವಾಗುವ ಅವಕಾಶವನ್ನು ರದ್ದುಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಛತ್ರಿ ಮುಚ್ಚಲು ಹೆಣಗಿದ ಟ್ರಂಪ್, ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲುಛತ್ರಿ ಮುಚ್ಚಲು ಹೆಣಗಿದ ಟ್ರಂಪ್, ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲು

ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ಈ ಕಾನೂನಿನಲ್ಲಿ ಸಾಂವಿಧಾನಿಕ ತಿದ್ದುಪಡಿ ತರಲು ಸಿದ್ಧತೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

US president Donald Trump plans to end birthright citizenship

'ಬೇರೆ ದೇಶದ ವ್ಯಕ್ತಿಗಳು ಇಲ್ಲಿಗೆ ಬಂದು ಮಗುವನ್ನು ಪಡೆದುಕೊಂಡಾಗ, ಆ ಮಗುವನ್ನು ಅಮೆರಿಕದ ಪ್ರಜೆ ಎಂದು ಪರಿಗಣಿಸುವ ಮೂಲಕ ದೇಶದ ಎಲ್ಲ ಸೌಲಭ್ಯ-ಸವಲತ್ತುಗಳನ್ನು ಒದಗಿಸುತ್ತಿರುವ ಜಗತ್ತಿನ ಏಕೈಕ ದೇಶವೆಂದರೆ ಅಮೆರಿಕ' ಎಂದು ಟ್ರಂಪ್ ಹೇಳಿದ್ದಾರೆ.

ಆದರೆ, ವಾಸ್ತವವಾಗಿ ಜಗತ್ತಿನ ಸುಮಾರು 30 ದೇಶಗಳಲ್ಲಿ ಬರ್ಥ್ ರೈಟ್ ಸಿಟಿಜನ್‌ಶಿಪ್ ಕಾನೂನು ಇದೆ.

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಟ್ರಂಪ್ ಬರ್ತಾ ಇಲ್ಲಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಟ್ರಂಪ್ ಬರ್ತಾ ಇಲ್ಲ

ಇದು ಅತ್ಯಂತ ಹಾಸ್ಯಾಸ್ಪದ ಕಾನೂನು. ಇದು ಅಂತ್ಯವಾಗಬೇಕು. ಇದರ ಬಗ್ಗೆ ಆದೇಶ ಹೊರಡಿಸಲು ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡಿದ್ದು, ಅದರ ಪ್ರಕ್ರಿಯೆ ನಡೆಯುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಈ ಸೌಲಭ್ಯವು ಪರಮಾಧಿಕಾರದ ಆದೇಶದೊಂದಿಗೆ ರದ್ದುಗೊಳ್ಳಲಿದೆ ಎಂದಿದ್ದಾರೆ.

ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್

ಟ್ರಂಪ್ ಈ ಹೇಳಿಕೆ ನೀಡಿರುವ ಬೆನ್ನಲ್ಲೇ, ಅದರ ವಿರುದ್ಧ ಕಾನೂನು ಸಮರ ನಡೆಸಲು ತಯಾರಿ ಆರಂಭವಾಗಿದೆ.

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿ ಪ್ರಕಾರ, ಅಮೆರಿಕದಲ್ಲಿ ಜನಿಸಿದ ಎಲ್ಲ ವ್ಯಕ್ತಿಗಳೂ ಸಹಜವಾಗಿಯೇ ಅಲ್ಲಿನ ಪ್ರಜೆಗಳಾಗುತ್ತಾರೆ.

English summary
US President Donald Trump said that he plans to sign an executive order to end the birthright citizenship for non American citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X