ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಲೈಬ್ರರಿಗೆ ಅನುದಾನ; ಮೋದಿಯನ್ನು ಗೇಲಿ ಮಾಡಿದ ಟ್ರಂಪ್

|
Google Oneindia Kannada News

'ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ' ಅನ್ನೋ ಮಾತಿದೆ. ಅಂದರೆ ಸಿಹಿ, ಹಣ್ಣು ಅಂಥ ವಸ್ತುಗಳು ಮಾತ್ರ ಇರುವ ಕಡೆ ನೊಣಗಳು ಇರುತ್ತವೆ ಎಂಬುದು ಅದರರ್ಥ. ಇಂಥದ್ದೇ ಮಾತನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಆಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಲೈಬ್ರರಿ ನಿರ್ಮಾಣ ಮಾಡುವುದಕ್ಕೆ ಅನುದಾನ ನೀಡುವ ಬಗ್ಗೆ ಮೋದಿ ನಿರ್ಧಾರವನ್ನು ಗೇಲಿ ಮಾಡಿದ್ದಾರೆ.

ಏನೂ ಉಪಯೋಗ ಇಲ್ಲದ ಲೈಬ್ರರಿಗೆ ಅನುದಾನ ನೀಡ್ತಿರಲ್ಲ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಟ್ರಂಪ್, ಅಫ್ಘಾನಿಸ್ತಾನದಲ್ಲಿ ಲೈಬ್ರರಿ ನಿರ್ಮಿಸುವುದಾಗಿ ಆಗಾಗ ಮೋದಿ ಹೇಳುತ್ತಲೇ ಇರುತ್ತಾರೆ. ನಿಮಗೆ ಗೊತ್ತೆ? ಅದು ನಾವು ಐದು ಗಂಟೆ ಸಮಯ ಕಳೆದಂತೆ. ನಾವಾಗ ಲೈಬರಿಗಾಗಿ ಥ್ಯಾಂಕ್ ಯೂ ಹೇಳಬೇಕು. ನನಗೆ ಗೊತ್ತಿಲ್ಲ ಅಪ್ಘಾನಿಸ್ತಾನದಲ್ಲಿ ಅದನ್ನು ಯಾರು ಬಳಸುತ್ತಾರೆ ಎಂದಿದ್ದಾರೆ.

ಪಾಕ್ ಜೊತೆ ಮತ್ತೆ ಕುಚಿಕು ಕುಚಿಕು? ಟ್ರಂಪ್ ಸಿಡಿಸಿದ ಹೊಸ ಬಾಂಬ್! ಪಾಕ್ ಜೊತೆ ಮತ್ತೆ ಕುಚಿಕು ಕುಚಿಕು? ಟ್ರಂಪ್ ಸಿಡಿಸಿದ ಹೊಸ ಬಾಂಬ್!

ಯಾವ ಯೋಜನೆಗೆ ಸಂಬಂಧಿಸಿದಂತೆ ಟ್ರಂಪ್ ಮಾತನಾಡಿದ್ದಾರೋ ತಿಳಿದುಬಂದಿಲ್ಲ. ಆದರೆ ಭಾರತ ಮಾತ್ರ ಅಫ್ಘಾನಿಸ್ತಾನಕ್ಕೆ ಮೂರು ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವ ಭರವಸೆ ನೀಡಿದೆ. ಅದರಲ್ಲಿ ಕಾಬೂಲ್ ನಲ್ಲಿ ಅತ್ಯುತ್ತಮವಾದ ಶಾಲೆ ಪುನರ್ ನಿರ್ಮಾಣ, ಭಾರತದಲ್ಲಿ ವ್ಯಾಸಂಗ ಮಾಡಲು ಅಫ್ಘಾನಿಸ್ತಾನದ ಸಾವಿರ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿದ್ಯಾರ್ಥಿವೇತನ ಒಳಗೊಂಡಿದೆ.

US president Donald Trump mocks PM Modi over Afghan library

2015ರಲ್ಲಿ ಅಫ್ಘಾನಿಸ್ತಾನದ ಸಂಸತ್ ಭವನ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಅಫ್ಘಾನಿಸ್ತಾನದ ಯುವ ಜನತೆಗೆ ಆಧುನಿಕ ಶಿಕ್ಷಣ ಹಾಗೂ ವೃತ್ತಿಪರ ಕೌಶಲ ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಭಾರತದ ಈ ನಡೆಗಳೆಲ್ಲ ಪಾಕಿಸ್ತಾನಕ್ಕೆ ಸಿಟ್ಟು ತರಿಸುತ್ತಿದೆ. ಜತೆಗೆ ಅಫ್ಘಾನಿಸ್ತಾನದ ಮೂಲಭೂತವಾದಿ ಉಗ್ರ ಸಂಘಟನೆಗಳ ಜತೆಗೆ ಪಾಕ್ ನ ಬೇಹುಗಾರಿಕೆ ಸಂಸ್ಥೆಗಳ ನಂಟಿದೆ.

ಅಮೆರಿಕದಲ್ಲಿ ಸರಕಾರದ 'ಅಂಗಡಿ' ಭಾಗಶಃ ಬಂದ್, ಎಲ್ಲ ಟ್ರಂಪ್ ಮಹಿಮೆ!ಅಮೆರಿಕದಲ್ಲಿ ಸರಕಾರದ 'ಅಂಗಡಿ' ಭಾಗಶಃ ಬಂದ್, ಎಲ್ಲ ಟ್ರಂಪ್ ಮಹಿಮೆ!

ಬೇರೆ ದೇಶಗಳಲ್ಲಿ ಇರುವ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದ ಟ್ರಂಪ್, ಕಳೆದ ತಿಂಗಳು ಸಿರಿಯಾದಿಂದ ಎರಡು ಸಾವಿರ ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಂಡರು. ಇನ್ನು ಅಫ್ಘಾನಿಸ್ತಾನದಿಂದ ಹದಿನಾಲ್ಕು ಸಾವಿರ ಸೈನ್ಯವನ್ನು ವಾಪಸ್ ಕರೆಸಿದ್ದಾರೆ.

ಇನ್ನು ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಲ್ಲಿ ನಡೆಸಿದ ಯುದ್ಧದ ಬಗ್ಗೆ ಮಾತನಾಡಿದ ಟ್ರಂಪ್, ರಷ್ಯಾ ಮೊದಲಿಗೆ ಸೋವಿಯತ್ ಒಕ್ಕೂಟವಾಗಿತ್ತು. ಆದರೆ ಅಫ್ಘಾನಿಸ್ತಾನವೇ ಅದನ್ನು ರಷ್ಯಾವನ್ನಾಗಿ ಮಾಡಿತು. ಅಲ್ಲಿ ಮಾಡಿದ ಯುದ್ಧದಿಂದ ಸೋವಿಯತ್ ಯೂನಿಯನ್ ಆರ್ಥಿಕ ಸ್ಥಿತಿ ಅಧೋಗತಿ ತಲುಪಿತು ಎಂದಿದ್ದಾರೆ.

English summary
US President Donald Trump on Wednesday mocked Prime Minister Narendra Modi for funding a library in Afghanistan, suggesting it was of no use.Trump brought up India’s aid during a rambling press appearance at a cabinet meeting as he defended his push for the United States to invest less overseas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X