ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 19: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ಆಘಾತ ಅನುಭವಿಸಿದ್ದಾರೆ. ಅಧಿಕಾರ ದುರುಪಯೋಗದ ಹಿನ್ನೆಲೆಯಲ್ಲಿ ಅವರನ್ನು ಜನಪ್ರತಿನಿಧಿಗಳ ಸಭೆಯಲ್ಲಿ ವಾಗ್ದಂಡನೆಗೆ ಗುರಿಪಡಿಸಲಾಗಿದೆ. ಜನಪ್ರತಿನಿಧಿಗಳ ಸಭೆಯಲ್ಲಿ ತೀವ್ರ ಚರ್ಚೆ, ವಾಗ್ವಾದದ ಬಳಿಕ ವಾಗ್ದಂಡನೆಗೆ ಮತ ಚಲಾವಣೆ ಮಾಡಲಾಗಿದ್ದು, ಇದರಲ್ಲಿ ಟ್ರಂಪ್ ಸೋಲು ಅನುಭವಿಸಿದ್ದಾರೆ.

ಅಧಿಕಾರ ದುರುಪಯೋಗ ಮತ್ತು ಕಾಂಗ್ರೆಸ್‌ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದರ ಎರಡು ಅಂಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ವಿರುದ್ಧ ಡಮಾಕ್ರಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯು ಇದಕ್ಕೆ 23-17ರ ಮತಗಳಲ್ಲಿ ಅನುಮೋದನೆ ನೀಡಿತ್ತು. ಬಳಿಕ ಇದು ಜನಪ್ರತಿನಿಧಿಗಳ ಸಭೆಗೆ (ಕೆಳಮನೆ) ಬಂದಿತ್ತು. ಹತ್ತು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಮತ ಪ್ರಕ್ರಿಯೆ ನಡೆದಿದೆ.

ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತ

ವಿರೋಧಪಕ್ಷದವರು ಆರೋಪಿಸಿರುವ ಎರಡು ಅಂಶಗಳ ವಿರುದ್ಧವೂ ಪ್ರತ್ಯೇಕವಾಗಿ ಮತ ಹಾಕಲಾಯಿತು. ಮೊದಲು ಅಧಿಕಾರ ದುರುಪಯೋಗದ ವಿರುದ್ಧದ ಮತ ಚಲಾವಣೆಯಾಯಿತು. ಟ್ರಂಪ್ ವಿರುದ್ಧ 230 ಮತಗಳು ಬಿದ್ದರೆ, ಅವರ ಪರ 197 ಮತಗಳು ಚಲಾವಣೆಗೊಂಡವು.

ಒಂದು ಕಡೆ ವಾಗ್ದಂಡನೆಗೆ ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಮಿಚಿಗನ್‌ನಲ್ಲಿ ಟ್ರಂಪ್ ಅವರು ಕ್ರಿಸ್‌ಮಸ್ ಸಮಾವೇಶದಲ್ಲಿ ಕಿಕ್ಕಿರಿದು ತುಂಬಿದ್ದ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.

ಅಚ್ಚರಿ ಮೂಡಿಸಿದ ಗಬ್ಬಾರ್ಡ್

ಅಚ್ಚರಿ ಮೂಡಿಸಿದ ಗಬ್ಬಾರ್ಡ್

ವಾಗ್ದಂಡನೆ ಪರ-ವಿರೋಧದ ಮತಚಲಾವಣೆಯಲ್ಲಿ ಡಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಭಾರತೀಯ ಸಂಜಾತೆ ತುಳಸಿ ಗಬ್ಬಾರ್ಡ್ ಅವರ ನಡೆ ಅಚ್ಚರಿ ಮೂಡಿಸಿತು. ಎರಡೂ ಆರೋಪಗಳ ಸಂದರ್ಭದಲ್ಲಿಯೂ ಅವರು ವಾಗ್ದಂಡನೆ ಪರ ಅಥವಾ ವಿರೋಧ ಇದ್ದೇನೆ ಎಂದು ಹೇಳುವ ಬದಲು 'ಹಾಜರಿದ್ದೇನೆ' ಎಂದಷ್ಟೇ ಹೇಳಿದರು.

ಎರಡೂ ಕಡೆ ಸೋಲು

ಎರಡೂ ಕಡೆ ಸೋಲು

ಎರಡನೆಯ ಆರೋಪವಾದ ಕಾಂಗ್ರೆಸ್ ಕಾರ್ಯಕ್ಕೆ ಅಡ್ಡಿಪಡಿಸಿದ್ದರ ಕುರಿತು ನಡೆದ ಮತ ಚಲಾಚಣೆಯಲ್ಲಿ 229-198 ಮತಗಳಿಂದ ಟ್ರಂಪ್‌ಗೆ ಸೋಲಾಯಿತು.

ಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿ

ಮತ ಚಲಾವಣೆಗೂ ಮುನ್ನ ಸಭೆಯಲ್ಲಿ ಮಾತನಾಡಿದ ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ, 'ಎರಡು ದಶಕಗಳಲ್ಲಿ ಮೊದಲ ಬಾರಿಗೆ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಟ್ರಂಪ್ ಅವರು ನಮ್ಮ ರಾಷ್ಟ್ರೀಯ ಭದ್ರತೆಗೆ ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ವ್ಯವಸ್ಥೆಗೆ ಬೆದರಿಕೆಯಾಗಿದ್ದಾರೆ' ಎಂದು ಹೇಳಿದರು.

ಸೆನೆಟ್ ಅಂಗೀಕಾರ ಅಗತ್ಯ

ಸೆನೆಟ್ ಅಂಗೀಕಾರ ಅಗತ್ಯ

ಇದು ಇನ್ನು ಸೆನೆಟ್ ವಿಚಾರಣೆಗೆ ಹೋಗಲಿದೆ. ಜನವರಿಯಲ್ಲಿ ಇದು ಸೆನೆಟ್‌ನಲ್ಲಿ ಚರ್ಚೆಗೆ ಬರಲಿದೆ. ಅಲ್ಲಿಯೂ ಟ್ರಂಪ್ ವಿರುದ್ಧದ ವಾಗ್ದಂಡನೆ ನಿರ್ಣಯ ಅಂಗೀಕಾರವಾದರೆ, ಈ ರೀತಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲಿರುವ ಅಮೆರಿಕದ ಮೂರನೇ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಒಳಗಾಗಲಿದ್ದಾರೆ. ಇದಕ್ಕೂ ಮುನ್ನ 1868ರಲ್ಲಿ ಆಂಡ್ರೂ ಜಾನ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಾಗ್ದಂಡನೆಯ ಮೂಲಕ ಅಧ್ಯಕ್ಷಗಿರಿ ಕಳೆದುಕೊಂಡಿದ್ದರು.

ಡೆಮಾಕ್ರಟಿಕ್ ಪಕ್ಷಕ್ಕೆ ಹೆಚ್ಚು ಬಲ

ಡೆಮಾಕ್ರಟಿಕ್ ಪಕ್ಷಕ್ಕೆ ಹೆಚ್ಚು ಬಲ

435 ಸದಸ್ಯರು ಇರುವ ಜನಪ್ರತಿನಿಧಿ ಸಭೆಯಲ್ಲಿ ಬುಧವಾರ ಚರ್ಚೆ ನಡೆಯಿತು. ಇಲ್ಲಿ ಟ್ರಂಪ್ ವಿರೋಧಿ ಬಣದ ಸದಸ್ಯರೇ ಅಧಿಕ ಸಂಖ್ಯೆಯಲ್ಲಿದ್ದರು. ಡೆಮಾಕ್ರಟಿಕ್ ಪಕ್ಷವು 233-197 ಸದಸ್ಯರ (ಕೆಲವು ಸ್ಥಾನಗಳು ಖಾಲಿ ಇವೆ) ಬಲದೊಂದಿಗೆ ಟ್ರಂಪ್ ವಿರುದ್ಧದ ವಾಗ್ದಂಡನೆಯನ್ನು ಖಚಿತಪಡಿಸಿತ್ತು.

ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸುತ್ತಿರುವ ಆ ಹುಡುಗಿ ಯಾರು?ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸುತ್ತಿರುವ ಆ ಹುಡುಗಿ ಯಾರು?

ಜನವರಿಯಲ್ಲಿ ನಿರ್ಧಾರ

ಜನವರಿಯಲ್ಲಿ ನಿರ್ಧಾರ

ಕ್ರಿಸ್‌ಮಸ್ ರಜಾ ಅವಧಿಗೂ ಮೊದಲೇ ಮುಂದಿನ ವಾರ ಜನಪ್ರತಿನಿಧಿ ಸಭೆಯ ಸಂಪೂರ್ಣ ಮತ ಪ್ರಕ್ರಿಯೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಪ್ರಕ್ರಿಯೆಗೆ ತಾರ್ಕಿಕ ಅಂತ್ಯ ನೀಡುವ ಸೆನೆಟ್ ವಿಚಾರಣೆಯು 2020ರ ಜನವರಿಗೂ ಮೊದಲು ಪ್ರಾರಂಭವಾಗುವ ಸಾಧ್ಯತೆ ಕಡಿಮೆ.

ವಾಗ್ದಂಡನೆ ಜಾರಿ ಆಗುತ್ತದೆಯೇ?

ವಾಗ್ದಂಡನೆ ಜಾರಿ ಆಗುತ್ತದೆಯೇ?

ಸೆನೆಟ್ ಶಿಕ್ಷೆ ವಿಧಿಸಿದರೆ ಮಾತ್ರ ಅಧ್ಯಕ್ಷರನ್ನು ಅವರ ಸ್ಥಾನದಿಂದ ವಜಾಗೊಳಿಸಬಹುದು. ಅದಕ್ಕೆ ಮೂರನೇ ಎರಡರಷ್ಟು ಮತಗಳು ಅವರ ವಿರುದ್ಧ ಬೀಳಬೇಕಾಗುತ್ತದೆ. ಆದರೆ ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು 53-47 ಮತಗಳ ಬಹುಮತ ಹೊಂದಿದೆ. ಹೀಗಾಗಿ ಟ್ರಂಪ್ ವಿರುದ್ಧದ ವಾಗ್ದಂಡನೆ ಜಾರಿಯಾಗುವುದು ಅನುಮಾನ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಭಾರತೀಯ ಸಂಜಾತೆ!ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಭಾರತೀಯ ಸಂಜಾತೆ!

ಟ್ರಂಪ್ ವಿರುದ್ಧ ವಾಗ್ದಂಡನೆ ಏಕೆ?

ಟ್ರಂಪ್ ವಿರುದ್ಧ ವಾಗ್ದಂಡನೆ ಏಕೆ?

ಟ್ರಂಪ್ ತಮ್ಮ ರಾಜಕೀಯ ಎದುರಾಳಿ, 2020ರ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ಅಭ್ಯರ್ಥಿ ಹಾಗೂ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ಜತೆಗೆ ತಮ್ಮ ವಿರುದ್ಧದ ತನಿಖೆಗೆ ಸಹಕಾರ ನೀಡಲು ನಿರಾಕರಿಸುವ ಮೂಲಕ ಅಡ್ಡಿಪಡಿಸಿದ್ದಾರೆ ಎಂದು ಸಹ ಆರೋಪಿಸಿದ್ದಾರೆ.

English summary
US President Donald Trump on Wednesday impeached by the House of Representatives for Abuse of Power and obstruction of Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X