ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬಿಡೆನ್ ಮಾತುಗಾರಿಕೆಯ ಸುಧಾರಣೆಗೆ ಡ್ರಗ್ಸ್ ಸೇವನೆ ಕಾರಣ- ಟ್ರಂಪ್

|
Google Oneindia Kannada News

ವಾಶಿಂಗ್ಟನ್, ಸಪ್ಟೆಂಬರ್.15: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳ ನಡುವಿನ ಮಾತಿನ ಸಮರ ಮುಂದುವರಿದಿದೆ. ಡೆಮಾಕ್ರಟಿಕ್ ಪಕ್ಷದ ತಮ್ಮ ಪ್ರತಿಸ್ಪರ್ಧಿ ಜೋ ಬಿಡೆನ್ ಚರ್ಚೆಗಳಲ್ಲಿ ತಮ್ಮ ಕಾರ್ಯಕ್ಷಮತೆ ಸುಧಾರಿಸಿಕೊಳ್ಳಲು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

"ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದ ಸಂದರ್ಭ ಡೆಮಾಕ್ರಟಿಕ್ ಪ್ರಾಥಮಿಕ ಕಲಾಪದ ಚರ್ಚೆಯಲ್ಲಿ ಜೋ ಬಿಡೆನ್ ಅವರ ಆರಂಭಿಕ ಮಾತುಗಾರಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು ಭಾರಿ ವಿಚಿತ್ರವನ್ನು ಹುಟ್ಟಿಸುವಂತಿತ್ತು" ಎಂದು ಟ್ರಂಪ್ ದೂಷಿಸಿದ್ದಾರೆ.

'ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ''ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ'

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಆರಂಭಿಕ ಹಂತದಲ್ಲಿ ಡೆಮಾಕ್ರಟಿಕ್ ಪಕ್ಷದ ಅನೇಕ ಅಭ್ಯರ್ಥಿಗಳು ವೇದಿಕೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಅಂದು ಬಿಡೆನ್ "ಒಂದು ವಿಪತ್ತು" ಮತ್ತು "ಅಸಮರ್ಥ ಅಭ್ಯರ್ಥಿ" ಎಂದು ಟ್ರಂಪ್ ಟೀಕಿಸಿದ್ದರು. ಆದರೆ ತದನಂತರದ ಚರ್ಚೆಯಲ್ಲಿ ಎಡಪಂಥೀಯ ಪ್ರತಿಸ್ಪರ್ಧಿ ಬರ್ನಿ ಸ್ಯಾಂಡರ್ಸ್ ಮತ್ತು ಬಿಡೆನ್ ಪರಸ್ಪರ ಒಬ್ಬರಿಗೊಬ್ಬರು "ಅವರೇ ಸರಿ" ಎಂದುಕೊಂಡಿದ್ದಾರೆ ಎಂದು ಟ್ರಂಪ್ ಕಿಡಿ ಕಾರಿದ್ದಾರೆ.

US President Donald Trump Demand For Biden To Undergo Drugs Testing Before Sep.29th Debate

ಚರ್ಚೆ ಆರಂಭಕ್ಕೂ ಮೊದಲು ಡ್ರಗ್ಸ್ ತಪಾಸಣೆ:

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಧ್ಯರ್ಥಿ ಜೋ ಬಿಡೆನ್ ಅವರು ಚರ್ಚೆ ಆರಂಭಿಸುವುದಕ್ಕೂ ಮೊದಲು ಡ್ರಗ್ಸ್ ಸೇವನೆ ಮಾಡಿರುತ್ತಾರೆ. ಇದರಿಂದ ಅವರ ಮಾತುಗಾರಿಕೆಯಲ್ಲಿ ಇತ್ತೀಚಿಗೆ ಸುಧಾರಣೆ ಕಂಡು ಬರುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಅಲ್ಲದೇ ಸಪ್ಟೆಂಬರ್.29ರಂದು ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳ ನಡುವಿನ ಮೂರರ ಪೈಕಿ ಮೊದಲ ಚರ್ಚೆ ನಡೆಯಲಿದೆ. ಈ ಚರ್ಚೆ ಆರಂಭಕ್ಕೂ ಮೊದಲು ಜೋ ಬಿಡೆನ್ ರನ್ನು ಡ್ರಗ್ಸ್ ಸೇವನೆ ಶಂಕೆ ಹಿನ್ನೆಲೆ ತಪಾಸಣೆಗೆ ಒಳಪಡಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆಗೆ ತಾವೂ ಕೂಡಾ ಆ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಹೇಳಿದ್ದಾರೆ.

English summary
US President Donald Trump Demand For Biden To Undergo Drugs Testing Before Sep.29th Debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X