ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಚೀನಾ ಸಮುದ್ರಕ್ಕೆ ಕಸ ಎಸೆಯುತ್ತಿವೆ: ಟ್ರಂಪ್ ಕಿಡಿ

|
Google Oneindia Kannada News

ನ್ಯೂಯಾರ್ಕ್, ನವೆಂಬರ್ 13: ಭಾರತ, ಚೀನಾ, ರಷ್ಯಾದಂತಹ ದೇಶಗಳು ತಮ್ಮ ಹೊಗೆ ಕೊಳವೆಗಳು ಮತ್ತು ಕೈಗಾರಿಕಾ ಸ್ಥಾವರಗಳನ್ನು ಸ್ವಚ್ಛಗೊಳಿಸಲು ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಸಮುದ್ರಕ್ಕೆ ಎಸೆಯುವ ತ್ಯಾಜ್ಯ ಲಾಸ್ ಏಂಜಲಿಸ್‌ಗೆ ಹರಿದುಬರುತ್ತಿದೆ ಎಂದು ಕಿಡಿಕಾರಿದ್ದಾರೆ.

ಹವಾಮಾನ ವೈಪರೀತ್ಯವನ್ನು ಬಹಳ ಸಂಕೀರ್ಣ ಸಮಸ್ಯೆ ಎಂದು ವಿಶ್ಲೇಷಿಸಿದ ಟ್ರಂಪ್, 'ನಾನು ಅನೇಕ ರೀತಿಗಳಲ್ಲಿ ಒಬ್ಬ ಪರಿಸರವಾದಿ. ನೀವು ನಂಬಿ ಅಥವಾ ಬಿಡಿ' ಎಂದು ತಮ್ಮನ್ನು ತಾವು ಪರಿಗಣಿಸಿಕೊಂಡಿರುವುದಾಗಿ ಹೇಳಿಕೊಂಡರು.

ದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಓದಲ್ಲ ಎಂದ ಟ್ರಂಪ್ದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಓದಲ್ಲ ಎಂದ ಟ್ರಂಪ್

ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಜಾಗತಿಕ ತಾಪಮಾನ ಕುರಿತಾದ ಸಭೆಯಲ್ಲಿ ಮಾತನಾಡಿದ ಅವರು, 'ಹಮಾನಾವ ವೈಪರೀತ್ಯದ ವಿಚಾರದಲ್ಲಿ ನಾನು ಬಹಳ ತೊಡಗಿಸಿಕೊಡಿದ್ದೇನೆ. ಆದರೆ ನಾನು ನಮ್ಮ ಗ್ರಹದಲ್ಲಿ ಶುದ್ಧ ಗಾಳಿಯನ್ನು ಮತ್ತು ಶುದ್ಧ ನೀರನ್ನು ಬಯಸಿದ್ದೇನೆ' ಎಂದರು.

2016ರ ಪ್ಯಾರಿಸ್ ಒಪ್ಪಂದದ ಪ್ರಕಾರ ಹವಾಮಾನ ವೈಪರೀತ್ಯವನ್ನು ತಡೆಯಲು ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ದೇಶಗಳಿಗೆ ಆರ್ಥಿಕ ನೆರವು, ತಂತ್ರಜ್ಞಾನ ಮತ್ತು ಸಾಮರ್ಥ್ಯ ವೃದ್ಧಿ ಮುಂತಾದ ರೀತಿಯಲ್ಲಿ ಸಹಾಯ ಮಾಡಬೇಕು. ಇದಕ್ಕೆ ಬಲವಾಗಿ ಆಕ್ಷೇಪಿಸಿದ್ದ ಅಮೆರಿಕ ಒಪ್ಪಂದದಿಂದ ಹೊರಬಂದಿತ್ತು.

ನ್ಯಾಯಸಮ್ಮತವಲ್ಲದ ಒಪ್ಪಂದ

ನ್ಯಾಯಸಮ್ಮತವಲ್ಲದ ಒಪ್ಪಂದ

ಹವಾಮಾನ ವೈಪರೀತ್ಯದ ಕುರಿತಾದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದಕ್ಕೆ ಕಾರಣ ವಿವರಿಸಿದ ಅವರು, 'ಅಮೆರಿಕವು ಏಕಪಕ್ಷೀಯ, ಭಯಾನಕವಾದ ಆರ್ಥಿಕವಾಗಿ ನ್ಯಾಯಸಮ್ಮತವಲ್ಲದ ಒಪ್ಪಂದವಾಗಿತ್ತು. ಅದು ಅಮೆರಿಕದ ಉದ್ಯೋಗಗಳನ್ನು ಕೊಂದು ವಿದೇಶಿ ಮಲಿನಕಾರರಿಗೆ ರಕ್ಷಣೆ ನೀಡುವಂತೆ ಇದೆ. ಮೂರು ವರ್ಷದೊಳಗೆ ನಿಮ್ಮ ವ್ಯವಹಾರ ಮುಚ್ಚಿಬಿಡಿ, ಚುಚ್ಚಬೇಡಿ, ಕೊರೆಯಬೇಡಿ, ನಮಗೆ ಇಂಧನವೇ ಬೇಡ ಎಂದೆಲ್ಲ ಒಪ್ಪಂದದಲ್ಲಿ ಇದೆ' ಎಂದು ಕಿಡಿಕಾರಿದರು.

ನಮ್ಮ ಹಣ ಭಾರತಕ್ಕೆ ನೀಡಬೇಕು

ನಮ್ಮ ಹಣ ಭಾರತಕ್ಕೆ ನೀಡಬೇಕು

'ಪ್ಯಾರಿಸ್ ಹವಾಮಾನ ವೈಪರೀತ್ಯ ಒಪ್ಪಂದ ಅಮೆರಿಕಕ್ಕೆ ವಿನಾಶಕಾರಿಯಾಗಿತ್ತು. ಈ ಒಪ್ಪಂದವು ಕೊನೆಗೆ ಅಮೆರಿಕಕ್ಕೆ ಟ್ರಿಲಿಯನ್‌ಗಟ್ಟಲೆ ಡಾಲರ್ ಹಾಳುಮಾಡುವ ಫಲಿತಾಂಶವನ್ನಷ್ಟೇ ನೀಡುತ್ತಿತ್ತು. ಇದು ನ್ಯಾಯೋಚಿತವಾಗಿಲ್ಲ. ಚೀನಾದಲ್ಲಿ ಇದು 2030ರವರೆಗೂ ಆರಂಭವಾಗುವುದಿಲ್ಲ. ರಷ್ಯಾ ಜಗತ್ತಿನಲ್ಲಿಯೇ ತನ್ನ ಅತ್ಯಂತ ಕೊಳಕಾಗಿದ್ದ ವರ್ಷವಾದ 1990ಕ್ಕೆ ವಾಪಸ್ ಹೋಗಿದೆ. ಭಾರತವು ಅಭಿವೃದ್ಧಿಶೀಲ ದೇಶವಾಗಿರುವ ಕಾರಣಕ್ಕೆ ನಾವು ಅವರಿಗೆ ಹಣ ನೀಡಬೇಕು. ಅದಕ್ಕೆ ನಾನು ಹೇಳಿದೆ, ನಮ್ಮದೂ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು' ಎಂಬುದಾಗಿ ವ್ಯಂಗ್ಯವಾಡಿದರು.

ಐಎಸ್ ಉಗ್ರ ಸಂಘಟನೆ ಹೊಸ ವಕ್ತಾರನ ಬಗ್ಗೆ ನಮಗೆ ಗೊತ್ತು: ಟ್ರಂಪ್ಐಎಸ್ ಉಗ್ರ ಸಂಘಟನೆ ಹೊಸ ವಕ್ತಾರನ ಬಗ್ಗೆ ನಮಗೆ ಗೊತ್ತು: ಟ್ರಂಪ್

ಸಮುದ್ರಕ್ಕೆ ಕಸ ಹಾಕುತ್ತಿದ್ದಾರೆ

ಸಮುದ್ರಕ್ಕೆ ಕಸ ಹಾಕುತ್ತಿದ್ದಾರೆ

'ನಾವು ಚಿಕ್ಕದಾದ ಭೂಮಿಯ ತುಂಡು ಹೊಂದಿದ್ದೇವೆ ಅದು ಅಮೆರಿಕ. ನೀವು ಚೀನಾ, ಭಾರತ, ರಷ್ಯಾದಂತಹ ಬೇರೆ ಯಾವುದಾದರೂ ದೇಶಕ್ಕೆ ಹೋಲಿಸಿದರೆ ಅವರು ತಮ್ಮ ಹೊಗೆಕೊಳವೆಗಳನ್ನು ಸ್ವಚ್ಛಗೊಳಿಸಲು, ತಮ್ಮ ಎಲ್ಲ ಸ್ಥಾವರಗಳನ್ನು ಶುದ್ಧಗೊಳಿಸಲು ಏನನ್ನೂ ಮಾಡುತ್ತಿಲ್ಲ. ಅವರು ಸಮುದ್ರದೊಳಗೆ ಎಸೆಯುತ್ತಿರುವ ಕಸ ಲಾಸ್ ಏಂಜಲಿಸ್‌ಗೆ ತೇಲಿಬರುತ್ತಿದೆ. ಲಾಸ್ ಏಂಜಲಿಸ್ ಹೊಂದಿರುವ ಇತರೆ ಸಮಸ್ಯೆಗಳ ಜತೆ ಇದೂ ಒಂದು ಸೇರಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಏನನ್ನೂ ಹೊಂದುವಂತಿಲ್ಲ

ನಾವು ಏನನ್ನೂ ಹೊಂದುವಂತಿಲ್ಲ

'ಆದರೆ ನೀವು ಇದನ್ನೆಲ್ಲ ನೋಡುತ್ತಿದ್ದರೂ ಈ ಬಗ್ಗೆ ಮಾತನಾಡಲು ಯಾರೂ ಬಯಸುವುದಿಲ್ಲ. ಅವರು ನಮ್ಮ ದೇಶದ ಕುರಿತು ಮಾತನಾಡಲು ಬಯಸುತ್ತಾರೆ. ನಾವು ಇದನ್ನು ಮಾಡಬೇಕು. ನಾವು ಇನ್ನು ಮುಂದೆ ವಿಮಾನಗಳನ್ನು ಹೊಂದುವಂತಿಲ್ಲ. ನಾವು ಹಸುಗಳನ್ನು ಸಾಕುವಂತಿಲ್ಲ. ನಾವು ಏನನ್ನೂ ಹೊಂದುವಂತಿಲ್ಲ. ಅದಕ್ಕೆ ನಾನು ಕೇಳಿದೆ, ಚೀನಾದ ಬಗ್ಗೆ ಏನು ಎಂದು' ವ್ಯಂಗ್ಯವಾಗಿ ಹೇಳಿದರು.

ಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ 50 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ 50 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ

English summary
US President Donald Trump on Tuesday said, countries like China, India and Russia dumping all of the garbage in the sea and that float into Los Angeles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X