ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಹೆಸರಲ್ಲಿ ಅಮೆರಿಕ ಚೀನಾ ಪರಸ್ಪರ ಕೆಸರೆರಚಾಟ!

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 18: ಇಡೀ ಜಗತ್ತಿನಲ್ಲಿ ತೀವ್ರ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಹಾವಳಿಯಿಂದ ಜನಜೀವನ ತತ್ತರಿಸಿದೆ.

ಆದರೆ, ಕೊರೊನಾ ವೈರಸ್ ಹೆಸರಿನಲ್ಲಿ ಜಗತ್ತಿನ ಎರಡು ದೊಡ್ಡ ರಾಷ್ಟ್ರಗಳಾದ ಚೀನಾ ಹಾಗೂ ಅಮೆರಿಕ ಪರಸ್ಪರ ಕೆಸರೆರಚಾಟಕ್ಕೆ ಇಳಿದಿವೆ.

ಬುಧವಾರ ಅಮೆರಿಕದ ವೈಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಕೊರೊನಾ ವೈರಸ್ ಗೆ ಚೀನಾ ವೈರಸ್ ಎಂದು ಹೆಸರಿಟ್ಟಿದ್ದಾರೆ.

ಚೀನಾ ಮೇಲೆ ಟ್ರಂಪ್ ಕೋಪ

ಚೀನಾ ಮೇಲೆ ಟ್ರಂಪ್ ಕೋಪ

ಕೊರೊನಾ ವೈರಸ್ ಚೀನಾದಲ್ಲಿ ಅಟ್ಟಹಾಸ ಶುರು ಇಟ್ಟುಕೊಂಡಾಗ ಅಲ್ಲಿನ ಕೆಲ ಮಾಧ್ಯಮಗಳು ಕೊರೊನಾ ವೈರಸ್ ಅಮೆರಿಕದಿಂದ ಬಂದಿದೆ ಎಂದು ಆರೋಪಿಸಿದ್ದರು. ಅಮೆರಿಕದ ಸೈನಿಕರು ಕೊರೊನಾ ವೈರಸ್ ನ್ನು ಚೀನಾ ಒಳಕ್ಕೆ ತಂದಿದ್ದು ಎಂದು ಆರೋಪಿಸಿದ್ದವು.

ಚೀನಾದಿಂದಲೇ ಅಲ್ಲವೇ ಕೊರೊನಾ ಬಂದಿರುವುದು

ಚೀನಾದಿಂದಲೇ ಅಲ್ಲವೇ ಕೊರೊನಾ ಬಂದಿರುವುದು

ಕೊರೊನಾ ವೈರಸ್ ನ್ನು ಅಮೆರಿಕ ಯೋಧರು ತಂದಿದ್ದು ಎಂದಿದ್ದ ಚೀನಾ ಮೇಲೆ ಟ್ರಂಪ್ ಮುನಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕೊರೊನಾ ವೈರಸ್ ಚೀನಾ ವೈರಸ್ ಅದು ಎಂದಿದ್ದಾರೆ. ಯುಎಸ್ ಮಿಲಿಟರಿ ವೈರಸ್ ಸೃಷ್ಟಿಸಿದೆ ಎನ್ನುವುದು ಅವರ ಸುಳ್ಳು ಆರೋಪ. ಚೀನಾದಿಂದಲೇ ಅಲ್ಲವೇ ಕೊರೊನಾ ಎಲ್ಲ ದೇಶಕ್ಕೆ ಹರಡಿದ್ದು ಎಂದು ಹೇಳಿದ್ದಾರೆ.

ಚೀನಾ ಪ್ರಯಾಣ ರದ್ದು

ಚೀನಾ ಪ್ರಯಾಣ ರದ್ದು

ಕೊರೊನಾ ವೈರಸ್ ಗೆ ಚೀನಿ ವೈರಸ್ ಎಂದು ಕರೆಯುವುದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಚೀನಾ ಪ್ರಯಾಣ ಕೈಗೊಳ್ಳುವುದನ್ನು ನಮ್ಮ ಸರ್ಕಾರ ರದ್ದು ಮಾಡಿರುವುದನ್ನೂ ನಾನು ಸ್ವಾಗತಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

ಚೀನಾ ಉತ್ತಮ ಕೆಲಸ ಮಾಡುತ್ತಿದೆ

ಚೀನಾ ಉತ್ತಮ ಕೆಲಸ ಮಾಡುತ್ತಿದೆ

ತಮ್ಮ ಸೇನೆಯ ಬಗ್ಗೆ ಮಾತನಾಡಿದ ಚೀನಾ ಬಗ್ಗೆ ತೀವ್ರ ಕೆಂಡಕಾರಿದ ಟ್ರಂಪ್, ಚೀನಿ ವೈರಸ್ ಗೆ ಔಷಧಿ ಕಂಡು ಹಿಡಿಯುವಲ್ಲಿ ಸೋಂಕು ಹರಡದಂತೆ ತಡೆಯುವಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಚೀನಾವನ್ನು ಹೊಗಳಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್ ಹೆಸರಿನಲ್ಲಿ ಎರಡು ಬಲಿಷ್ಠ ರಾಷ್ಟ್ರಗಳು ಪರಸ್ಪರ ಕೆಸರೆರಚಾಟ ಮಾಡುತ್ತಿರುವುದು ಇತರ ರಾಷ್ಟ್ರಗಳಿಗೆ ಬೇಸರ ತರಿಸಿರುವುದಂತೂ ಸುಳ್ಳಲ್ಲ

English summary
US President Donald Trump Attacks On China Ahead Of Coronavirus issue. He justify calling Coronavirus is China Virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X