ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಟೋ ಸಭೆ ಬೆನ್ನಲ್ಲೇ ಚೀನಾಗೆ ವಾರ್ನಿಂಗ್ ಕೊಟ್ಟ ಬೈಡನ್!

|
Google Oneindia Kannada News

ವಾಶಿಂಗ್ಟನ್, ಮಾರ್ಚ್ 25: ಉಕ್ರೇನ್ ವಿರುದ್ಧ ನಡೆಸುತ್ತಿರುವ ಆಕ್ರಮಣದಲ್ಲಿ ಬೆಂಬಲ ನೀಡಿದರೆ ಚೀನಾ ಕೂಡ ಅದರ ಆರ್ಥಿಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ರಷ್ಯಾಕ್ಕೆ ಚೀನಾ ನೆರವು ನೀಡುವ ಸಾಧ್ಯತೆಯ ಕುರಿತು, ಬೈಡನ್ ಅವರು ಕಳೆದ ವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಈ ವಿಷಯದ ಬಗ್ಗೆ "ನೇರವಾಗಿ ಸಂಭಾಷಣೆ" ನಡೆಸಿರುವುದಾಗಿ ಹೇಳಿದರು.

ರಷ್ಯಾ ವಿರುದ್ಧ ತಿರುಗಿ ಬಿದ್ದ ನ್ಯಾಟೋ ಪಡೆ: ಉಕ್ರೇನ್‌ಗೆ ಸಂಪೂರ್ಣ ಬೆಂಬಲರಷ್ಯಾ ವಿರುದ್ಧ ತಿರುಗಿ ಬಿದ್ದ ನ್ಯಾಟೋ ಪಡೆ: ಉಕ್ರೇನ್‌ಗೆ ಸಂಪೂರ್ಣ ಬೆಂಬಲ

ಗುರುವಾರ ಬ್ರಸೆಲ್ಸ್‌ನ ನ್ಯಾಟೋ ಪ್ರಧಾನ ಕಛೇರಿಯಲ್ಲಿ ನಡೆದ ನ್ಯಾಟೋ ಶೃಂಗಸಭೆ ಮತ್ತು ಗ್ರೂಪ್ ಆಫ್ ಸೆವೆನ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತು ಟೀಕೆ ಮಾಡಿದರು. "ಯಾವುದೇ ಬೆದರಿಕೆಗಳನ್ನು ಹಾಕುವುದಿಲ್ಲ" ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ "ರಷ್ಯಾಗೆ ಸಹಾಯ ಮಾಡುವುದರ ಪರಿಣಾಮಗಳನ್ನು ಅರ್ಥಮಾಡಿಕೊಂಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.

US President Biden Warns China to face economic consequences if it aids Russia in Ukraine War

ಪಶ್ಚಿಮದ ನಂಟು ಉಳಿಸಿಕೊಳ್ಳಬೇಕೋ ಬೇಡವೋ?:

ರಷ್ಯಾದ ನಡುವಳಿಕೆಯನ್ನು ಉಲ್ಲೇಖಿಸಿದ ಜೋ ಬೈಡನ್ ಚೀನಾದ ಕುರಿತು ಮಾತನಾಡಿದರು. ಪಶ್ಚಿಮದ ರಾಷ್ಟ್ರಗಳೊಂದಿಗೆ ತನ್ನ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೆ ಚೀನಾ ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅಡ್ಡಿ ಆತಂಕಗಳು ಇರಬಾರದು. ಭವಿಷ್ಯದಲ್ಲಿ ಉತ್ತಮ ಸಂಬಂಧ ಹಾಗೂ ವ್ಯಾಪಾರವನ್ನು ಉಳಿಸಿಕೊಳ್ಳುವುದು ಚೀನಾಗೆ ಮುಖ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಒಂದು ವೇಳೆ ಕ್ಸಿ ಜಿನ್ ಪಿಂಗ್ ರಷ್ಯಾಗೆ ಬೆಂಬಲವನ್ನು ಒದಗಿಸಿದರೆ, ತನ್ನನ್ನು ತಾನೇ ಅಪಾಯಕ್ಕೆ ಸಿಲುಕಿಸಿದಂತೆ ಆಗುತ್ತದೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.

ರಷ್ಯಾಕ್ಕಿಂತ ಚೀನಾಗೆ ಪಶ್ಚಿಮದ ನಂಟು ನಿಕಟ:

ಭವಿಷ್ಯದ ಆರ್ಥಿಕತೆಯನ್ನು ನೋಡುವುದಾದರೆ ರಷ್ಯಾಗಿಂತ ಚೀನಾಗೆ ಪಶ್ಚಿಮದ ಸಂಬಂಧವು ತೀರಾ ನಿಕಟವಾಗಿರುತ್ತದೆ. ಹೀಗೆ ಇರುವಾಗ ಕ್ಸಿ ಜಿನ್ ಪಿಂಗ್ ತಾವು ಮುಂದುವರಿಯುವ ಮೊದಲು ಗಂಭೀರವಾಗಿ ಆಲೋಚಿಸಬೇಕಾಗುತ್ತದೆ. ಒಂದು ವೇಳೆ ನೀವು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಬೆಂಬಲ ನೀಡುವುದೇ ಆದರೆ, ಅದರ ಆರ್ಥಿಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೋ ಬೈಡನ್ ಚೀನಾಗೆ ವಾರ್ನಿಂಗ್ ಪಾಸ್ ಮಾಡಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಅನ್ನು ಯುರೋಪಿನ "ಬ್ರೆಡ್ ಬಾಸ್ಕೆಟ್" ಎಂದು ಕರೆದ ಬೈಡೆನ್, ಆಹಾರದ ಕೊರತೆಯು "ನೈಜ" ಎಂದು ಹೇಳಿದರು. NATO ತುರ್ತು ಸಭೆಯ ನಂತರ, "ನಿರ್ಬಂಧಗಳನ್ನು ಕೇವಲ ರಷ್ಯಾದ ಮೇಲೆ ವಿಧಿಸಲಾಗಿಲ್ಲ. ಇದು ಯುರೋಪಿಯನ್ ರಾಷ್ಟ್ರಗಳು ಮತ್ತು ನಮ್ಮ ದೇಶವನ್ನು ಒಳಗೊಂಡಂತೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ," ಎಂದರು.

ಚೀನಾಗೆ ಎಚ್ಚರಿಕೆ ನೀಡಿದ ನ್ಯಾಟೋ:

"ವಿಶ್ವದ ಇತರ ಭಾಗಗಳೊಂದಿಗೆ ಸೇರಿ ಉಕ್ರೇನ್ ವಿರುದ್ಧದ ಕ್ರೂರ ಯುದ್ಧವನ್ನು ಖಂಡಿಸಬೇಕು. ರಷ್ಯಾವನ್ನು ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಬೆಂಬಲಿಸಬಾರದು ಎಂಬುದು ಚೀನಾಕ್ಕೆ ಸಂದೇಶವಾಗಿದೆ," ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. "ನಾವು ಒಂದು ಪೀಳಿಗೆಯಲ್ಲಿ ಅತಿದೊಡ್ಡ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ನಮ್ಮ ಮೈತ್ರಿಯನ್ನು ಬಲವಾಗಿ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ," ಎಂದು ತಿಳಿಸಿದರು.

ಉಕ್ರೇನ್‌ ಬತ್ತಳಿಕೆಗೆ ನ್ಯಾಟೋ ಅಸ್ತ್ರ:

Recommended Video

ಇವತ್ತು Metro ಸಂಚಾರ ಸ್ಥಗಿತ:ಎಲ್ಲೆಲ್ಲಿ ಗೊತ್ತಾ? | Oneindia Kannada

ರಷ್ಯಾದ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಉಕ್ರೇನ್‌ ಪರವಾಗಿ ನ್ಯಾಟೋ ಎಲ್ಲಾ ರಕ್ಷಣಾ ಯೋಜನೆಗಳನ್ನು ಸಕ್ರಿಯಗೊಳಿಸಿದೆ ಎಂದು ನ್ಯಾಟೋ ಹೇಳಿಕೆಯಲ್ಲಿ ತಿಳಿಸಿದೆ. "40,000 ಪಡೆಗಳನ್ನು ಪೂರ್ವದಲ್ಲಿ ನಿಯೋಜನೆ ಮಾಡಲಾಗಿದೆ. ಮಿತ್ರ ರಾಷ್ಟ್ರಗಳೆಲ್ಲವೂ ಸಹಾಯ ಮಾಡಲಿದೆ. ನಾವು ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಸ್ಲೋವಾಕಿಯಾದಲ್ಲಿ ನಾಲ್ಕು ಹೆಚ್ಚುವರಿ ಯುದ್ಧ ಪಡೆಯನ್ನು ನಿಯೋಜನೆ ಮಾಡುತ್ತೇವೆ. ಮಿತ್ರರಾಷ್ಟ್ರಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಣು ಬಾಂಬ್ ಅನ್ನು ಎದುರಿಸಲು ಬೇಕಾದ ರಕ್ಷಣಾತ್ಮಕ ಕ್ರಮವನ್ನು ಕೂಡಾ ಕೈಗೊಳ್ಳಲಾಗುವುದು. ಸೈಬರ್ ದಾಳಿಯ ಸಂದರ್ಭದಲ್ಲಿ ಪರಸ್ಪರ ಬೆಂಬಲ ಒದಗಿಸುತ್ತೇವೆ. ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ನ್ಯಾಟೋ ಹೇಳಿದೆ.

English summary
US President Biden Warns China to face economic consequences if it aids Russia in Ukraine War.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X