• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3ನೇ ಮಹಾಯುದ್ಧಕ್ಕೆ ಅಮೆರಿಕ ರಣಕಹಳೆ? ರಷ್ಯಾ ಅಧ್ಯಕ್ಷ ಕೊಲೆಗಾರ ಎಂದ ಬೈಡನ್!

|

ಅಮೆರಿಕ ಹಾಗೂ ರಷ್ಯಾ ನಡುವಿನ ಸಂಬಂಧ ಹಳಸಿರುವುದು ಮತ್ತೆ ಬಟಾಬಯಲಾಗಿದೆ. ಖುದ್ದು ಅಮೆರಿಕ ಅಧ್ಯಕ್ಷರೇ ರಷ್ಯಾ ಅಧ್ಯಕ್ಷರನ್ನ ಕೊಲೆಗಾರ ಎಂದಿದ್ದಾರೆ. ಹೌದು, ಇದೇ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಜೋ ಬೈಡನ್ ರಷ್ಯಾ ವಿರುದ್ಧ ಕೆಂಡವಾಗಿದ್ದಾರೆ. ಅದರಲ್ಲೂ ವ್ಲಾದಿಮಿರ್ ಪುಟಿನ್‌ರನ್ನು ಒಬ್ಬ ಕೊಲೆಗಾರ ಎಂದು ಕರೆದಿದ್ದಾರೆ.

ಅಮೆರಿಕದ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಜೋ ಬೈಡನ್ ಮಾತನಾಡುತ್ತಾ, ರಷ್ಯಾ ಅಧ್ಯಕ್ಷ ಪುಟಿನ್ ಕೊಲೆಗಾರ ಎಂಬ ಅಭಿಪ್ರಾಯ ಒಪ್ಪುತ್ತೇನೆ ಎಂದಿದ್ದಾರೆ. ಅಲ್ಲದೆ ನಮ್ಮ ದೇಶದ ಚುನಾವಣೆಯಲ್ಲಿ ರಷ್ಯಾ ಕೈಹಾಕಿತ್ತು. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಕೈವಾಡ ಸಾಬೀತಾಗಿದೆ. ಇದಕ್ಕೆ ರಷ್ಯಾ ಬೆಲೆ ತೆರಬೇಕಾಗುತ್ತದೆ ಎಂದು ಜೋ ಬೈಡನ್ ಗುಡುಗಿದ್ದಾರೆ.

ಪುಟಿನ್ ಹಂತಕ ಎಂಬ ಹೇಳಿಕೆ ಹಿಂಪಡೆಯುವಂತೆ ಬೈಡನ್‌ಗೆ ರಷ್ಯಾ ಒತ್ತಾಯಪುಟಿನ್ ಹಂತಕ ಎಂಬ ಹೇಳಿಕೆ ಹಿಂಪಡೆಯುವಂತೆ ಬೈಡನ್‌ಗೆ ರಷ್ಯಾ ಒತ್ತಾಯ

ಅಮೆರಿಕ ಅಧ್ಯಕ್ಷ ಬೈಡನ್ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದು, ಕೆಲವರು ಇದು 3ನೇ ಮಹಾಯುದ್ಧದ ಮುನ್ಸೂಚನೆ ಎಂದು ಗೊಣಗುತ್ತಿದ್ದಾರೆ. ಆದ್ರೆ ಬೈಡನ್ ಹೇಳಿಕೆಗೆ ರಷ್ಯಾ ಅಧ್ಯಕ್ಷರಾಗಲಿ, ರಷ್ಯಾ ಸರ್ಕಾರವಾಗಲಿ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಪುಟಿನ್‌ ಬಗ್ಗೆ ನನಗೆ ಗೊತ್ತು..!

ಪುಟಿನ್‌ ಬಗ್ಗೆ ನನಗೆ ಗೊತ್ತು..!

ಬೈಡನ್ ತಮ್ಮ ಸಂದರ್ಶನದ ತುಂಬಾ ಪುಟಿನ್ ಹಾಗೂ ಅಮೆರಿಕದ ಎದುರಾಳಿಗಳ ವಿರುದ್ಧ ಗುಡುಗಿದ್ದಾರೆ. ಅದರಲ್ಲೂ ರಷ್ಯಾ ಮತ್ತು ಪುಟಿನ್ ವಿರುದ್ಧ ಒಂದಷ್ಟು ಆಕ್ರೋಶ ಹೆಚ್ಚಾಗಿತ್ತು. ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪುಟಿನ್ ಜೊತೆಗೆ ಚರ್ಚಿಸಿದ್ದೇನೆ. ಪುಟಿನ್‌ರನ್ನು ನಾನು ಚೆನ್ನಾಗಿ ಬಲ್ಲೆ ಎಂದಿದ್ದಾರೆ ಬೈಡನ್. ಈ ಹಿಂದೆ ಒಬಾಮಾ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಬೈಡನ್ ಪುಟಿನ್ ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೇ ಬಲಿಷ್ಠ ರಾಷ್ಟ್ರಗಳ ನಾಯಕರ ನಡುವಿನ ಬಿರುಕು ತೀವ್ರ ಆತಂಕ ಸೃಷ್ಟಿಸಿದೆ.

ಅಮೆರಿಕ ಮಾಡಿದ ಆರೋಪವೇನು..?

ಅಮೆರಿಕ ಮಾಡಿದ ಆರೋಪವೇನು..?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ರಷ್ಯಾ ಕೈವಾಡದ ಬಗ್ಗೆ ಈಗಾಗಲೇ ಹಲವು ಸಾಕ್ಷ್ಯಗಳನ್ನ ಸಂಗ್ರಹಿಸಲಾಗಿದೆ. ಅಮೆರಿಕದ ತನಿಖಾ ಸಂಸ್ಥೆಗಳು ಇದನ್ನು ರಿವೀಲ್ ಮಾಡಿವೆ. ದಾಖಲೆಗಳೇ ಹೇಳುವಂತೆ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಕೈವಾಡ ಇತ್ತು ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಬೈಡನ್ ರಷ್ಯಾ ಹಾಗೂ ಶತ್ರು ರಾಷ್ಟ್ರಗಳ ವಿರುದ್ಧ ಗುಡುಗಿದ್ದರು.

ರಷ್ಯಾ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ವ್ಲಾದಿಮಿರ್ ಪುಟಿನ್ ?ರಷ್ಯಾ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾದ ವ್ಲಾದಿಮಿರ್ ಪುಟಿನ್ ?

ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಡಿಬೆಟ್ ವೇಳೆ, ಬೈಡನ್ ವಾರ್ನಿಂಗ್ ಕೊಟ್ಟಿದ್ದರು. ನಮ್ಮ ದೇಶದ ಚುನಾವಣೆಯಲ್ಲಿ ಮೂರನೇ ವ್ಯಕ್ತಿಗಳು ಕೈ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು. ಡಿಬೆಟ್‌ನಲ್ಲಿ ಬೈಡನ್ ಹೇಳಿಕೆ ಕೊಟ್ಟ ಬೆನ್ನಲ್ಲೇ ರಷ್ಯಾ ಮೂಲದ ಹ್ಯಾಕರ್ಸ್ ಅಮೆರಿಕದಲ್ಲಿ ಹಲವು ಕೃತ್ಯ ಎಸಗಿದ್ದರು ಎಂಬ ಆರೋಪವೂ ಇದೆ.

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ಜಗತ್ತಿನಲ್ಲಿ ರಷ್ಯನ್ ಹ್ಯಾಕರ್ಸ್ ಹೆಸರು ಕೇಳಿದರೆ ಭಯ ಆವರಿಸಿಬಿಡುತ್ತದೆ. ಏಕೆಂದರೆ ರಷ್ಯಾದ ಹ್ಯಾಕರ್‌ಗಳು ಅಷ್ಟು ಖತರ್ನಾಕ್. ಚಿಟಿಕೆ ಹೊಡೆಯುವುದರ ಒಳಗಾಗಿ ಎಂತಹ ಪ್ರಬಲ ಕಂಪ್ಯೂಟರ್‌ಗಳನ್ನು ಬೇಕಾದರೂ ಮುಳುಗಿಸಿಬಿಡುತ್ತಾರೆ. ಅದೆಷ್ಟೇ ಸೈಬರ್ ಸೆಕ್ಯೂರಿಟಿ ಕೊಟ್ಟಿದ್ದರೂ ರಷ್ಯನ್ ಹ್ಯಾಕರ್ಸ್ ಕೈಯಿಂದ ಬಚಾವ್ ಆಗುವುದು ತುಂಬಾನೇ ಕಷ್ಟ. ಅದರಲ್ಲೂ ಅಮೆರಿಕದ ಕಂಪ್ಯೂಟರ್‌ಗಳು ಎಂದರೆ ರಷ್ಯಾ ಹ್ಯಾಕರ್ಸ್‌ಗೆ ಬಲು ಪ್ರೀತಿ. ಹೀಗಾಗಿ ಪದೇ ಪದೆ ಅಮೆರಿಕದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ ಎಂಬ ಆರೋಪವಿದೆ.

 ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಅಮೆರಿಕದ ಸರ್ಕಾರಿ ಇಲಾಖೆಗಳ ಮೇಲೆ ನಿರಂತರವಾಗಿ ಸೈಬರ್ ಅಟ್ಯಾಕ್ ಆಗಿತ್ತು. 2020ರ ಅಕ್ಟೋಬರ್‌ನಲ್ಲಿ ಅಮೆರಿಕ ಮತದಾರರ ಮಾಹಿತಿ ಕದ್ದಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕದ ನೀರು ಸರಬರಾಜು ಕೇಂದ್ರ, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನು ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿತ್ತು. ಅಮೆರಿಕದ ಇಂಧನ ಇಲಾಖೆ ಮೇಲೆ ದಾಳಿ ಮಾಡುವ ಮೂಲಕ ಅಲ್ಲಿನ ನ್ಯೂಕ್ಲಿಯರ್ ಪ್ಲಾಂಟ್‌ಗಳ ಮೇಲೆ ದಾಳಿಗೆ ಹೊಂಚು ಹಾಕಿರುವುದು ಬಯಲಾಗಿತ್ತು. ಈ ಎಲ್ಲಾ ಘಟನೆಗೂ ಅಮೆರಿಕ ರಷ್ಯಾ ಮೇಲೆ ಆರೋಪ ಮಾಡುತ್ತಾ ಬಂದಿದೆ. ಆದರೆ ರಷ್ಯಾ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿಲ್ಲ.

ಚೀನಾ ವಿರುದ್ಧ ಭಾರತಕ್ಕೆ ಬೆಂಬಲ, ಇಂಡಿಯಾಗೆ ಪುಟಿನ್ ವಿಸಿಟ್..!ಚೀನಾ ವಿರುದ್ಧ ಭಾರತಕ್ಕೆ ಬೆಂಬಲ, ಇಂಡಿಯಾಗೆ ಪುಟಿನ್ ವಿಸಿಟ್..!

ಅಮೆರಿಕದ ಖಜಾನೆಗೂ ಗುನ್ನಾ..!

ಅಮೆರಿಕದ ಖಜಾನೆಗೂ ಗುನ್ನಾ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಮಾತ್ರವಲ್ಲ, ಚುನಾವಣೆ ಮುಗಿದ ಮೇಲೂ ಹಲವು ಬಾರಿ ಅಮೆರಿಕದಲ್ಲಿ ಸೈಬರ್ ಅಟ್ಯಾಕ್ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಅಮೆರಿಕ ಹಣಕಾಸು ಇಲಾಖೆ ಕಂಪ್ಯೂಟರ್‌ ಲಪಟಾಯಿಸಿರುವ ಆರೋಪ ಕೇಳಿಬಂದಿತ್ತು. ದೊಡ್ಡಣ್ಣ ಅಮೆರಿಕದ ಹಣಕಾಸು ಇಲಾಖೆಗೆ ಸಂಬಂಧಿಸಿದ ಬಹುಮುಖ್ಯ ದಾಖಲೆಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎನ್ನಲಾಗಿತ್ತು. ಹೀಗೆ ತಮ್ಮ ವಿರುದ್ಧ ಸೈಬರ್ ದಾಳಿ ನಡೆದಾಗಲೆಲ್ಲಾ ಅಮೆರಿಕ ರಷ್ಯಾ ಕಡೆಗೆ ಬೆರಳು ತೋರಿಸುತ್ತಾ ಬಂದಿದೆ. ಸೈಬರ್ ಅಟ್ಯಾಕ್ ರಷ್ಯಾ ಮೂಲದ ಹ್ಯಾಕರ್ಸ್ ಕೃತ್ಯ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಆದರೆ ಈವರೆಗೂ ರಷ್ಯಾ ಸೈಬರ್ ಅಟ್ಯಾಕ್ ಮಾಡಿದೆ ಎಂಬುದಕ್ಕೆ ಬಲವಾದ ಸಾಕ್ಷಿ ಸಿಕ್ಕಿಲ್ಲ. ಮತ್ತೊಂದ್ಕಡೆ ನೇರವಾಗಿ ಅಮೆರಿಕ ಅಧ್ಯಕ್ಷರೇ ರಷ್ಯಾ ಮತ್ತು ರಷ್ಯಾ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿರುವುದು ಪರಿಸ್ಥಿತಿಯನ್ನ ಮತ್ತೆ ಕಾವೇರುವಂತೆ ಮಾಡಿದೆ.

English summary
US President Joe Biden said Russian president Vladimir Putin Is Murderer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X