ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ ಆದೇಶ ಕಸದ ಬುಟ್ಟಿಗೆ! ಟಿಕ್‌ಟಾಕ್ ಬ್ಯಾನ್ ಕ್ಯಾನ್ಸಲ್.. ಕ್ಯಾನ್ಸಲ್!

|
Google Oneindia Kannada News

ಟ್ರಂಪ್ ಮಾಡಿದ್ದ ಒಂದೊಂದೇ ವಿವಾದಾತ್ಮಕ ಆದೇಶಗಳಿಗೆ ಎಳ್ಳುನೀರು ಬಿಡುತ್ತಿರುವ ಜೋ ಬೈಡನ್, ಈಗ ಇಂತಹದ್ದೇ ಮತ್ತೊಂದು ನಿರ್ಧಾರ ಕೈಗೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ 'ಟಿಕ್‌ಟಾಕ್' ಬ್ಯಾನ್ ಮಾಡಿದ್ದರು. ಆದರೆ ಟ್ರಂಪ್‌ ಮಾಡಿದ್ದ ಈ ಆದೇಶವನ್ನ ಕಸದ ಬುಟ್ಟಿಗೆ ಎಸೆದಿದ್ದಾರೆ ಜೋ ಬೈಡನ್. ಶತಮಾನಗಳಿಂದ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದ್ದ ಅಮೆರಿಕ, ಟ್ರಂಪ್ ಅವಧಿಯಲ್ಲಿ ಪಡಬಾರದ ಕಷ್ಟಗಳನ್ನೆಲ್ಲಾ ಕಂಡಿದೆ.

Recommended Video

ಡೊನಾಲ್ಡ್ ಟ್ರಂಪ್ ಆದೇಶ ಕಸದ ಬುಟ್ಟಿಗೆ ಎಸೆದ ಜೋ ಬಿಡೆನ್ | Oneindia Kannada

ಟಿಕ್ ಟಾಕ್ ಇಂಡಿಯಾ ತೊರೆದ ಸಿಇಒ ನಿಖಿಲ್ ಗಾಂಧಿಟಿಕ್ ಟಾಕ್ ಇಂಡಿಯಾ ತೊರೆದ ಸಿಇಒ ನಿಖಿಲ್ ಗಾಂಧಿ

ಅದ್ರಲ್ಲೂ ವ್ಯಾಪಾರ ನೀತಿಗಳ ವಿಚಾರದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಟ್ರಂಪ್ ಬೆಂಕಿ ಹಚ್ಚಿದ್ದರೆಂಬ ಆರೋಪವಿದೆ. ಹಾಗೇ ಈ ಆರೋಪಗಳಿಗೆ ಪುಷ್ಟಿ ನೀಡುವಂತೆ ಟ್ರಂಪ್ ಕೂಡ ಹಲವಾರು ವಿವಾದಾತ್ಮಕ ನಿರ್ಧಾರ ಕೈಗೊಂಡಿದ್ದರು. ಅದರಲ್ಲೂ ಚೀನಾ ಮೂಲದ 'ಟಿಕ್‌ಟಾಕ್' ಬ್ಯಾನ್ ಆದಾಗ ಚೀನಾ ಆಕ್ರೋಶ ಹೊರಹಾಕಿತ್ತು.

ಕೋರ್ಟ್ ಸೂಚನೆ ಮೇರೆಗೆ ಟಿಕ್ ಟಾಕ್ ಆ್ಯಪ್ ನಿರ್ಬಂಧಿಸಿದ ಪಾಕಿಸ್ತಾನಕೋರ್ಟ್ ಸೂಚನೆ ಮೇರೆಗೆ ಟಿಕ್ ಟಾಕ್ ಆ್ಯಪ್ ನಿರ್ಬಂಧಿಸಿದ ಪಾಕಿಸ್ತಾನ

ಅಂದು ಟ್ರಂಪ್ ಕೈಗೊಂಡ ವಿವಾದಾತ್ಮಕ ಆದೇಶವನ್ನ ಈಗ ಬೈಡನ್ ಕಸದಬುಟ್ಟಿಗೆ ಎಸೆದಿದ್ದಾರೆ. ಟಿಕ್‌ಟಾಕ್ ಮಾತ್ರವಲ್ಲ ವೀಚಾಟ್‌ ಸೇರಿದಂತೆ ಇತರ 8 ಆ್ಯಪ್‌ಗಳಿಗೂ ಅವಕಾಶ ಕಲ್ಪಿಸಿದ್ದಾರೆ. ಈ ಮೂಲಕ ನೂತನ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಮಾಡಿದ್ದಾರೆ ಅಮೆರಿಕದ 46ನೇ ಅಧ್ಯಕ್ಷ ಬೈಡನ್‌.

ವಿವಾದದ ಹಿನ್ನೆಲೆ ಏನು..?

ವಿವಾದದ ಹಿನ್ನೆಲೆ ಏನು..?

ಕಳೆದ ವರ್ಷ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಹಾಗೇ 2020ರಲ್ಲಿ ಚೀನಾ ವಿರುದ್ಧ ನೇರವಾಗಿ ವಾಣಿಜ್ಯ ಯುದ್ಧಕ್ಕೆ ಇಳಿದಿದ್ದರು ಟ್ರಂಪ್. ಚೀನಾ ಸರಕುಗಳಿಗೆ ಭಾರಿ ಪ್ರಮಾಣದಲ್ಲಿ ಟ್ಯಾಕ್ಸ್ ಹಾಕುವುದು, ಚೀನಾ ಮೂಲದ ಕಂಪನಿಗಳನ್ನು ಗೋಳು ಹುಯ್ದು ಕೊಳ್ಳೋದು ಮಾಮೂಲಾಗಿತ್ತು. ಹೀಗೆ ಟ್ರಂಪ್ ಚೀನಾ ಮೂಲದ ಅಪ್ಲಿಕೇಷನ್‌ಗಳನ್ನೂ ಟಾರ್ಗೆಟ್ ಮಾಡಿದ್ದರು. ಅದರಲ್ಲಿ ಮೊದಲು ಬಲಿಯಾಗಿದ್ದು ಟಿಕ್‌ಟಾಕ್. ಅಮೆರಿಕದಲ್ಲಿ ಬಳಕೆಯಲ್ಲಿರುವ ಅಪ್ಲಿಕೇಷನ್ಸ್ ಹಾಗೂ ಸಾಫ್ಟ್‌ವೇರ್‌ನ ಬಳಸಿಕೊಂಡು ಚೀನಾದಿಂದ ನಿಯಂತ್ರಿಸುವವರು ಅಮೆರಿಕದ ಆಂತರಿಕ ವಿಚಾರವನ್ನ ಕದಿಯಬಹುದು ಎಂದು ಆರೋಪಿಸಿದ್ದರು ಟ್ರಂಪ್. ಅಲ್ಲದೆ ಈ ಅಪ್ಲಿಕೇಷನ್ಸ್ ಅಮೆರಿಕದ ಭದ್ರತೆಗೆ ಅಪಾಯಕಾರಿ ಎಂದು ಆರೋಪಿಸಿ ಸೀದಾ ಸೀದಾ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದರು.

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..!

ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ..!

ನ್ಯೂಟನ್ ಹೇಳಿದಂತೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಿಕ್ಕಿತ್ತು. ಅತ್ತ ಅಮೆರಿಕ ತನ್ನ ದೇಶದ ಸಂಸ್ಥೆಗಳ ಒಡೆತನದ ಅಪ್ಲಿಕೇಷನ್ಸ್ ಬ್ಯಾನ್ ಮಾಡುತ್ತಿದ್ದಂತೆ ರೊಚ್ಚಿಗೆದ್ದು ಅಮೆರಿಕದ ಮೇಲೆ ವೆರೈಟಿಯಾಗಿ ಸೇಡು ತೀರಿಸಿಕೊಂಡ ಚೀನಾ, ವಾಣಿಜ್ಯ ಯುದ್ಧಕ್ಕೆ ತಾನೂ ಸಿದ್ಧ ಎಂಬ ಸಂದೇಶ ರವಾನಿಸಿತ್ತು. ಹೀಗೆ ಟ್ರಂಪ್ ಪ್ರತಿಷ್ಠೆಯ ಫಲವಾಗಿ ಅಮೆರಿಕದ ಜನಸಾಮಾನ್ಯರು ಪರದಾಡುವಂತಾಗಿತ್ತು. ಏಕೆಂದರೆ ಚೀನಾ ಮೂಲದ ಸರಕುಗಳನ್ನೇ ನಂಬಿದ್ದಾರೆ ಅಮೆರಿಕದ ಜನ. ಹೀಗಾಗಿ ದಿನಬಳಕೆ ವಸ್ತುಗಳು ಕೂಡ ದುಪ್ಪಟ್ಟಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಇದು ಪ್ರತ್ಯಕ್ಷ್ಯ ಪರಿಣಾಮ, ಹಾಗೇ ಪರೋಕ್ಷ ಪರಿಣಾಮಗಳು ಇನ್ನೂ ಹೆಚ್ಚಾಗೇ ಇದ್ದವು.

ಟ್ರಂಪ್‌ ಮಾಡಿದ್ದೆಲ್ಲಾ ಉಲ್ಟಾ..!

ಟ್ರಂಪ್‌ ಮಾಡಿದ್ದೆಲ್ಲಾ ಉಲ್ಟಾ..!

ಹೌದು, ಅಮೆರಿಕದ ಅಭಿವೃದ್ಧಿಗೆ ಬೇಕಾಗಿದ್ದನ್ನ ಟ್ರಂಪ್ ಮಾಡಲೇ ಇಲ್ಲ. ಬದಲಾಗಿ ಟ್ರಂಪ್ ಎಡವಟ್ಟುಗಳನ್ನೇ ಮಾಡಿಕೊಳ್ಳುತ್ತಾ ಬಂದರು ಎಂಬುದು ಟ್ರಂಪ್ ವಿರೋಧಿಗಳ ಆರೋಪ. ಇನ್ನು ಬೈಡನ್ ಕೂಡ ಚುನಾವಣೆಗೆ ಮೊದಲೇ ಟ್ರಂಪ್ ಕೈಗೊಂಡ ನಿರ್ಧಾರಗಳಿಗೆ ಎಳ್ಳುನೀರು ಬಿಡುವ ಮುನ್ಸೂಚನೆ ನೀಡಿದ್ದರು. ಈಗಾಗಲೇ ಈ ಕೆಲಸ ಮಾಡಿದ್ದಾರೆ ಬೈಡನ್. ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ಕಟ್ಟಿಸುತ್ತಿದ್ದ ಲಕ್ಷಾಂತರ ಕೋಟಿ ವೆಚ್ಚದ ಗೋಡೆ ಕೆಡವಿದ್ದಾರೆ. ವಲಸಿಗರಿಗೆ ನ್ಯಾಯಸಮ್ಮತವಾಗಿ ತಲುಪಬೇಕಾದ ಹಕ್ಕುಗಳನ್ನು ತಲುಪಿಸಿದ್ದಾರೆ. ಇದೀಗ ಚೀನಾ ಕಣ್ಣು ಕೆಂಪಗಾಗಿಸಿದ್ದ ಟ್ರಂಪ್ ಆದೇಶವನ್ನೂ ಕಿಕ್ ಔಟ್ ಮಾಡಿದ್ದಾರೆ ಬೈಡನ್. ಈ ಮೂಲಕ ತನ್ನ ಪ್ರಜೆಗಳ ಹಿತಾಸಕ್ತಿಗೆ ಬದ್ಧ, ಚೀನಾ ಜೊತೆ ವಾಣಿಜ್ಯ ಸ್ನೇಹ ಬೇಕು ಎಂಬುದನ್ನ ಜಗತ್ತಿಗೆ ತಿಳಿಸಿದ್ದಾರೆ ಬೈಡನ್.

ಯಾವ ಆ್ಯಪ್‌ಗೆ ಬಂಪರ್..?

ಯಾವ ಆ್ಯಪ್‌ಗೆ ಬಂಪರ್..?

ಅಮೆರಿಕದ ಅಧ್ಯಕ್ಷರಿಗೆ ಇರುವ ಪವರ್ ಅಂತಹದ್ದು. ಹಣಕಾಸಿನ ವಿಚಾರ ಹಾಗೂ ಅಮೆರಿಕದ ಕೆಲ ಆಂತರಿಕ ವಿಚಾರಗಳನ್ನ ಬಿಟ್ಟರೆ, ಅಮೆರಿಕದ ಅಧ್ಯಕ್ಷರಿಗೆ ಫುಲ್ ಪವರ್ ಇರುತ್ತೆ. ಅದ್ರಲ್ಲೂ ಅಮೆರಿಕದ ಭದ್ರತೆ ವಿಚಾರ ಬಂದರೆ, ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ಅಧ್ಯಕ್ಷ ಸರ್ವ ಸ್ವತಂತ್ರ. ಇದೀಗ ಇದೇ ಪವರ್ ಬಳಸಿ ಬೈಡನ್ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಟ್ರಂಪ್ ಬ್ಯಾನ್ ಮಾಡಿದ್ದ ಹಲವು ಆ್ಯಪ್‌ಗಳಿಗೆ ಮತ್ತೊಮ್ಮೆ ವೆಲ್‌ಕಮ್ ಮಾಡಿದ್ದಾರೆ ಬೈಡನ್. ಟಿಕ್‌ಟಾಕ್‌ ಸೇರಿದಂತೆ ವಿಮೇಟ್‌, ವಿಚಾಟ್‌ ಪೇ, ಕ್ಯಾಮ್‌ ಸ್ಕ್ಯಾನರ್‌, ಕ್ಯೂಕ್ಯೂ ವ್ಯಾಲೆಟ್‌, ಶೇರ್‌ಇಟ್‌, ಟೆನ್‌ಸೆಂಟ್‌ ಕ್ಯೂಕ್ಯೂ ಹೀಗೆ ಹಲವು ಆ್ಯಪ್‌ಗಳಿಗೆ ಅನುಮತಿ ಸಿಕ್ಕಿದೆ.

English summary
Biden cancelled one more Trump administration's order & lifts the ban on TikTok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X