ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಅಧ್ಯಕ್ಷರ ಜತೆ ಸತತ 2 ಗಂಟೆ ಜೋ ಬೈಡನ್ ದೂರವಾಣಿ ಮಾತುಕತೆ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 11: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಮೊದಲ ದೂರವಾಣಿ ಮಾತುಕತೆಯು ಸತತ ಎರಡು ಗಂಟೆಗಳ ಕಾಲ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

'ಕಳೆದ ರಾತ್ರಿ ನಾನು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸತತ ಎರಡು ಗಂಟೆ ದೂರವಾಣಿ ಮೂಲಕ ಮಾತನಾಡಿದೆ' ಎಂದು ಬೈಡನ್ ಸುದ್ದಿಗಾರರಿಗೆ ತಿಳಿಸಿದರು. ಅಮೆರಿಕದ ಅಧ್ಯಕ್ಷರು ಈ ರೀತಿ ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುವುದು ತೀರಾ ವಿಶೇಷವಾಗಿದೆ. ಏಕೆಂದರೆ ಮುಖಾಮುಖಿ ಸಭೆಗಳಲ್ಲಿಯೂ ಅಮೆರಿಕ ಅಧ್ಯಕ್ಷರು ಒಂದು ಗಂಟೆಗಿಂತ ಹೆಚ್ಚು ಸಮಯ ನೀಡಿದ ಉದಾಹರಣೆಗಳು ವಿರಳ.

ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಮೋದಿ-ಬೈಡನ್ ಮಾತುಕತೆಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಮೋದಿ-ಬೈಡನ್ ಮಾತುಕತೆ

ಚೀನಾ ಕುರಿತಾದ ನೀತಿಯಲ್ಲಿ ಅಮೆರಿಕವು ಮುಂದುವರಿಯದೆ ಹೋದರೆ ನಮ್ಮ ಊಟವನ್ನು ಅವರೇ ಸವಿಯುತ್ತಾರೆ ಒಂದು ಬೈಡನ್ ಎಚ್ಚರಿಕೆ ನೀಡಿದರು. ಮಾತುಕತೆ ಸಂದರ್ಭದಲ್ಲಿ ಮಾನವಹಕ್ಕುಗಳು, ವ್ಯಾಪಾರ ಮತ್ತು ಪ್ರಾದೇಶಿಕ ಸಂಘರ್ಷಗಳ ಬಗ್ಗೆ ಜಿನ್‌ಪಿಂಗ್ ಅವರನ್ನು ಪ್ರಶ್ನಿಸಿದರು. ಅಮೆರಿಕ-ಚೀನಾ ಸಂಬಂಧಕ್ಕೆ ಬುನಾದಿಯಾಗಿಸುವ ಗುರಿಯನ್ನು ಮಾತುಕತೆ ಹೊಂದಿತ್ತು ಎನ್ನಲಾಗಿದೆ.

US Predident Joe Biden Says Call With Xi Jinping Lasted Two Straight Hours

ಬೀಜಿಂಗ್‌ನ ದಬ್ಬಾಳಿಕೆಯ ಮತ್ತು ನ್ಯಾಯೋಚಿತವಲ್ಲದ ಆರ್ಥಿಕ ಅಭ್ಯಾಸಗಳು, ಹಾಂಕಾಂಗ್‌ನಲ್ಲಿನ ಕೃತ್ಯಗಳು, ಕ್ಸಿಂಜಿಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತೈವಾನ್ ಸೇರಿದಂತೆ ಈ ಭಾಗದಲ್ಲಿ ಆಕ್ರಮಣಕಾರಿ ನೀತಿಗಳ ಪ್ರದರ್ಶನದ ಕುರಿತು ಮೂಲಭೂತ ಕಳವಳಗಳನ್ನು ಬೈಡನ್ ವ್ಯಕ್ತಪಡಿಸಿದರು ಎಂದು ಶ್ವೇತಭವನ ತಿಳಿಸಿದೆ.

ಬರಾಕ್ ಒಬಾಮ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್, ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದರು. ಪ್ರಸ್ತುತ ಅವರು ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ತಾಳಿದ್ದ ನಿಲುವನ್ನೇ ಪಾಲಿಸಬೇಕಾದ ಒತ್ತಡದಲ್ಲಿದ್ದಾರೆ.

English summary
US President Joe Biden said he was in the phone call for two straight hours with Xi Jinping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X