ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾನಕ್ಕೂ ಕುತ್ತು ತಂದ ‘ಕೊರೊನಾ’, ಜನಸಂಖ್ಯೆ ಏರಿಕೆಯಲ್ಲಿ ಭಾರಿ ಇಳಿಕೆ..!

|
Google Oneindia Kannada News

ಅದು ಸಂಸದನೇ ಆಗಿರಲಿ, ಶ್ರೀಮಂತ ಉದ್ಯಮಿಯೇ ಆಗಿರಲ್ಲಿ. ಅಮೆರಿಕದ ಕೊರೊನಾ ಪರಿಸ್ಥಿತಿ ಭಯಾನಕತೆ ವಿವರಿಸಲು ಸಾಧ್ಯವಿಲ್ಲ. ಸೂಪರ್ ಪವರ್, ಸೂಪರ್ ಪವರ್ ಅಂತಾ ಎದೆಯುಬ್ಬಿಸಿ ನಿಲ್ಲುತ್ತಿದ್ದ ಅಮೆರಿಕ ಸ್ಥಿತಿ ಕೊರೊನಾ ಕಾಲಘಟ್ಟದಲ್ಲಿ ಹೀನಾಯವಾಗಿದೆ. ಹೀಗಿರುವಾಗಲೇ ಅಮೆರಿಕದ ಸಂತಾನೋತ್ಪತ್ತಿ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಳೆದ 4 ದಶಕ ಅಂದರೆ 40 ವರ್ಷಗಳಲ್ಲೇ ಅತ್ಯಂತ ಕನಿಷ್ಠಮಟ್ಟದ ಜನನ ಪ್ರಮಾಣ ಅಮೆರಿಕದಲ್ಲಿ ದಾಖಲಾಗಿದೆ.

2019ರಲ್ಲಿ 35 ವರ್ಷದಲ್ಲೇ ಕನಿಷ್ಠ ಜನನ ಪ್ರಮಾಣ ದಾಖಲಾಗಿತ್ತು. 2021ರಲ್ಲಿ ಈ ಪ್ರಮಾಣ ಮತ್ತಷ್ಟು ಕುಸಿತ ಕಾಣುವ ಮುನ್ಸೂಚನೆ ಸಿಕ್ಕಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 3 ಕೋಟಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 5 ಲಕ್ಷ 30 ಸಾವಿರ ಅಮೆರಿಕನ್ನರು ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ.

ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾದರೂ ಜೀವ ಉಳಿಸಲು ಸಾಧ್ಯವಾಗ್ತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ. ಹೊರ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು.

ಲಾಕ್‌ಡೌನ್ ಆದರೂ ಸಂತಾನವಿಲ್ಲ..!

ಲಾಕ್‌ಡೌನ್ ಆದರೂ ಸಂತಾನವಿಲ್ಲ..!

ಕೆಲ ದೇಶಗಳಲ್ಲಿ ಲಾಕ್‌ಡೌನ್ ಘೋಷಣೆ ಆಗಿದ್ದೇ ತಡ ಜನನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಾ ಉಲ್ಟಾ. ಲಾಕ್‌ಡೌನ್ ಆದರೂ ಹೊಸ ಮಕ್ಕಳ ಜನನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿಲ್ಲ. ಬದಲಾಗಿ 40 ವರ್ಷಗಳ ಹಿಂದಿನ ದಾಖಲೆಯೇ ಉಡೀಸ್ ಆಗಿದೆ. ಇಷ್ಟೆಲ್ಲದರ ನಡುವೆ ಜನ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದ ಬಿರುಗಾಳಿಗೆ ಸಿಲುಕಿ ಜೀವನ ನಡೆಸಲು ಕೂಡ ಪರದಾಡುತ್ತಿದ್ದಾರೆ. ಸದ್ಯ ಪರಿಹಾರ ಪ್ಯಾಕೇಜ್ ಘೋಷಣೆ ಆಗಿದ್ದರೂ ಅಮೆರಿಕದ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಇದು ಬೈಡನ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

2-3 ತಿಂಗಳು ಎಚ್ಚರಿಕೆ ಅಗತ್ಯ..!

2-3 ತಿಂಗಳು ಎಚ್ಚರಿಕೆ ಅಗತ್ಯ..!

ಮುಂದಿನ 2-3 ತಿಂಗಳು ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಅಮೆರಿಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕನ್ನರಿಗೆ ಒಂದಿಷ್ಟು ನೆಮ್ಮದಿ ತಂದಿದೆ. ಭೂಮಿಯ ಮೇಲಿನ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಅಮೆರಿಕ, ಕೊರೊನಾ ಕಾರಣಕ್ಕೆ ಭೂಮಿ ಮೇಲಿನ ನರಕ ಎಂಬಂತಾಗಿದೆ. ಸುಮಾರು 1 ವರ್ಷದಿಂದಲೂ ಅಮೆರಿಕ ಕೊರೊನಾ ರಾಯಭಾರಿ ಆಗಿದೆ. ಆದರೆ ಪರಿಸ್ಥಿತಿ ಸುಧಾರಿಸಲು ಇನ್ನೊಂದಿಷ್ಟು ದಿನ ಅಮೆರಿಕದ ನಿವಾಸಿಗಳು ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡರೆ ಪರಿಸ್ಥಿತಿ ಹಿಡಿತಕ್ಕೆ ಬಂದರೂ ಬರಬಹುದು. ಆದರೆ ಅಂತಹ ಲಕ್ಷಣಗಳೇ ಕಾಣುತ್ತಿಲ್ಲ. ಸರ್ಕಾರದ ನಿಯಮಗಳಿಗೆ ಜನ ಕೇರ್ ಮಾಡ್ತಿಲ್ಲ.

ಅರ್ಧ ಮಿಲಿಯನ್ ಜನರು ಬಲಿ

ಅರ್ಧ ಮಿಲಿಯನ್ ಜನರು ಬಲಿ

ಅಮೆರಿಕ ಪರಿಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಮತ್ತೊಂದು ದಾಖಲೆಯನ್ನ ಬರೆದಿದೆ. ಕಳೆದ ಕಲ ವಾರಗಳಿಂದ ಪರಿಸ್ಥಿತಿ ಒಂದಿಷ್ಟು ಸುಧಾರಿಸಿದ್ದರೂ ಸಾವಿನ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಇದಕ್ಕಿಂತ ಭಯಾನಕ ಸಂಗತಿ ಎಂದರೆ ಅಮೆರಿಕದಲ್ಲಿ ಹಾಲಿ 89 ಲಕ್ಷ ಆಕ್ಟಿವ್ ಕೇಸ್‌ಗಳಿವೆ. ಈವರೆಗೆ ಅರ್ಧ ಮಿಲಿಯನ್ ಅಮೆರಿಕನ್ನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ಎಲ್ಲಾ ಅಯೋಮಯವಾಗಿದೆ. ಕೊರೊನಾ ಬಂದಪ್ಪಳಿಸಿದ ಬಳಿಕ ವಿಶ್ವದ ದೊಡ್ಡಣ್ಣನ ಬುಡ ಅಲುಗಾಡುತ್ತಿದೆ. ವಿಶ್ವದ ನಂ. 1 ರಾಷ್ಟ್ರ ಎಂಬ ಪಟ್ಟಕ್ಕೂ ಕುತ್ತು ಬಂದಿದೆ.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಸುಮಾರು 1 ವರ್ಷದಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಇಷ್ಟೆಲ್ಲಾ ನಡೆದರೂ ಅಮೆರಿಕ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ, ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಲೇ ಇಲ್ಲ.

English summary
United States of America’s population growth has been fell down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X