• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇನ್ನು 25 ದಿನಗಳಲ್ಲಿ ಜಗದ ಪಾಲಿನ ದೊಡ್ಡಣ್ಣ ಅಮೆರಿಕದ ಚುಕ್ಕಾಣಿ ಹಿಡಿಯೋರು ಯಾರು ಅನ್ನೋದು ನಿರ್ಧಾರವಾಗಲಿದೆ. ಆದರೆ ಅದಕ್ಕೂ ಮೊದಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಹಾಲಿ ಅಧ್ಯಕ್ಷ ಟ್ರಂಪ್ ಸೋಲಿಗೆ ಮುನ್ನುಡಿ ಬರೆಯುತ್ತಿವೆ. ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ನಡುವಿನ ರಾಜಕೀಯ ರಣರಂಗದಲ್ಲಿ ಬಿಡೆನ್ ಪರವಾಗಿಯೇ ಜನಾಭಿಪ್ರಾಯ ಮೂಡುತ್ತಿದ್ದು, ಸಮೀಕ್ಷೆಗಳ ಮಾಹಿತಿ ಪ್ರಕಾರ ಟ್ರಂಪ್‌ರನ್ನ ಬಿಡೆನ್ ಹಿಂದಿಕ್ಕಿದ್ದಾರೆ.

ಅಲ್ಲದೆ ಅಧ್ಯಕ್ಷೀಯ ಅಭ್ಯರ್ಥಿಯಾಗಿ ತಮ್ಮ ಮೊದಲೇ ಪ್ರಯತ್ನದಲ್ಲೇ ಅಚ್ಚರಿಯ ಗೆಲುವು ಸಾಧಿಸುವ ಸುಳಿವನ್ನೂ ಬಿಡೆನ್ ನೀಡಿದ್ದಾರೆ. ಕೊರೊನಾ ಸಂಕಷ್ಟ, ಅಮೆರಿಕದ ಆರ್ಥಿಕತೆ ಕುಸಿತ, ಜನಾಂಗೀಯ ಘರ್ಷಣೆ, ಬಾಯಿಗೆ ಬಂದಂತೆ ವಿಜ್ಞಾನದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದೇ ಟ್ರಂಪ್‌ಗೆ ಮುಳುವಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ತಜ್ಞರ ಮಾತುಗಳಿಗೆ ಪುಷ್ಟಿ ನೀಡುವಂತೆ ಕಳೆದ ಚುನಾವಣೆಯಲ್ಲಿ ಟ್ರಂಪ್ ಗೆದ್ದುಬೀಗಿದ್ದ ರಾಜ್ಯಗಳಲ್ಲೇ ಅವರಿಗೆ ಬಾರಿ ಹಿನ್ನಡೆ ಉಂಟಾಗಿದೆ. ಅದರಲ್ಲೂ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲೇ ಈ ಬಾರಿ ಟ್ರಂಪ್ ಮುಗ್ಗರಿಸುವ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಯಾವಾ ಯಾವ ರಾಜ್ಯದಲ್ಲಿ ಟ್ರಂಪ್ ಮತ್ತು ಬಿಡೆನ್ ಹವಾ ಎಷ್ಟರಮಟ್ಟಿಗೆ ಇದೆ ಅನ್ನೋದರ ಅಂಕಿ-ಅಂಶ ನೋಡೋದಾದ್ರೆ.

ಗ್ರಾಫಿಕ್ಸ್ ಹೆಡ್: ಯಾರ ಪಾಲಿಗೆ ಎಷ್ಟು ಮತ..?

ಗ್ರಾಫಿಕ್ಸ್ ಹೆಡ್: ಯಾರ ಪಾಲಿಗೆ ಎಷ್ಟು ಮತ..?

ರಾಜ್ಯ ಬಿಡೆನ್ ಟ್ರಂಪ್ 2016 ಫಲಿತಾಂಶ

ರಾಜ್ಯ ಬಿಡೆನ್ ಟ್ರಂಪ್ 2016 ಫಲಿತಾಂಶ
ಅರಿಜೋನಾ 48.8% 45.7% ಟ್ರಂಪ್ (3.6% ಅಂತರ)
ಫ್ಲೋರಿಡಾ 48.0% 44.3% ಟ್ರಂಪ್ (1.2% ಅಂತರ)
ಜಾರ್ಜಿಯಾ 46.8% 46.5% ಟ್ರಂಪ್ (5.2% ಅಂತರ)
ಮಿನ್ನೇಸೋಟ 50.4% 41.0% ಹಿಲರಿ (1.5% ಅಂತರ)
ನೆವಾಡಾ 49.7% 43.7% ಹಿಲರಿ (2.4% ಅಂತರ)
ನ್ಯೂ ಹ್ಯಾಂಪ್ಶೈರ್ 52.0% 43.0% ಹಿಲರಿ (0.4% ಅಂತರ)
ಉತ್ತರ ಕರೋಲಿನಾ 48.3% 46.9% ಟ್ರಂಪ್ (3.7% ಅಂತರ)
ಪೆನ್ಸಿಲ್ವೇನಿಯಾ 51.0% 43.9% ಟ್ರಂಪ್ (0.7% ಅಂತರ)
ಟೆಕ್ಸಾಸ್ 44.8% 49.0% ಟ್ರಂಪ್ (9.1% ಅಂತರ)
ವರ್ಜೀನಿಯಾ 51.3% 40.3% ಹಿಲರಿ (5.4% ಅಂತರ)

(ವಿ.ಸೂ: ಕೊನೆಯ ಕಾಲಂನಲ್ಲಿ ಸೂಚಿಸಿರುವ ಅಂಕಿ-ಅಂಶ 2016ರಲ್ಲಿ ಆಯಾ ರಾಜ್ಯಗಳಲ್ಲಿ ಟ್ರಂಪ್ ಹಾಗೂ ಹಿಲರಿ ಶೇಕಡವಾರು ಎಷ್ಟು ಮತಗಳ ಅಂತರದಲ್ಲಿ ಗೆದಿದ್ದರು ಎಂಬುದನ್ನು ತಿಳಿಸುತ್ತದೆ.)

ಇದು ಜಸ್ಟ್ ಟ್ರೇಲರ್, ಮುಂದೆ ಇದೆ ಮೂವಿ..!

ಇದು ಜಸ್ಟ್ ಟ್ರೇಲರ್, ಮುಂದೆ ಇದೆ ಮೂವಿ..!

ಅಂದಹಾಗೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನ ನೋಡಿದ ತಕ್ಷಣ ಬಿಡೆನ್ ಗೆದ್ದು ಬೀಗಲಿದ್ದಾರೆ ಎಂಬುದನ್ನು ಕನ್ಫರ್ಮ್ ಮಾಡಲು ಆಗುವುದಿಲ್ಲ. ಏಕೆಂದರೆ ಸಮೀಕ್ಷೆಗಳಲ್ಲಿ ಗೆದ್ದು ಬೀಗಿದ್ದವರು ಚುನಾವಣೆಯಲ್ಲೂ ಹೀಗೆ ಮತ ಗಳಿಸುತ್ತಾರೆ ಎಂದು ಹೇಳಲು ಆಗುವುದಿಲ್ಲ. ಇದಕ್ಕೆ ಅಮೆರಿಕದ ಚುನಾವಣಾ ಇತಿಹಾಸದಲ್ಲೂ ಹತ್ತಾರು ಉದಾಹರಣೆಗಳು ಸಿಗುತ್ತವೆ. ಏಕೆಂದರೆ ಅಮೆರಿಕದಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿ ಇಲ್ಲ. ಹೀಗೆ ಪ್ರಜೆಗಳು ನೇರವಾಗಿ ತಮ್ಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಪರೋಕ್ಷ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ನಮ್ಮ ವ್ಯವಸ್ಥೆಯಲ್ಲಿ ಪ್ರಧಾನಿ ಆಯ್ಕೆ ಮಾಡುವ ರೀತಿ. ನಾವೆಲ್ಲರೂ ಸಂಸದರನ್ನು ಆಯ್ಕೆ ಮಾಡುತ್ತೇವೆ, ನಂತರ ಅದೇ ಸಂಸದರು ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎಂಬುದನ್ನು ಪರಿಗಣಿಸಿ ಆರಿಸುತ್ತಾರೆ. ಹೀಗಾಗಿ ತಕ್ಷಣಕ್ಕೆ ಬಿಡೆನ್ ಗೆದ್ದರು ಎನ್ನಲು ಆಗದು. ಯಾಕಂದ್ರೆ ಇದು ಜಸ್ಟ್ ಟ್ರೇಲರ್ ಅಷ್ಟೇ, ಮುಂದೆ ಇನ್ನೂ ಮೂವಿ ಬಾಕಿ ಇದೆ.

ಹಿಲರಿ ಕ್ಲಿಂಟನ್ ಮುಗ್ಗರಿಸಿದ್ದರು..!

ಹಿಲರಿ ಕ್ಲಿಂಟನ್ ಮುಗ್ಗರಿಸಿದ್ದರು..!

ಚುನಾವಣಾ ಸಮೀಕ್ಷೆಗಳನ್ನೇಕೆ ಪರಿಪೂರ್ಣವಾಗಿ ನಂಬೋದಕ್ಕೆ ಸಾಧ್ಯವಿಲ್ಲ ಎಂಬುದಕ್ಕೆ 2016ರ ಎಲೆಕ್ಷನ್ ತಾಜಾ ಉದಾಹರಣೆ. ಚುನಾವಣೆಗೂ ಮೊದಲು ಹಿಲರಿ ಕ್ಲಿಂಟನ್ ಟ್ರಂಪ್‌ಗಿಂತ ಭಾರಿ ಮುನ್ನಡೆ ಪಡೆದಿದ್ದರು. ಟ್ರಂಪ್‌ ಪರ ಇದ್ದ ಮತದಾರರಿಗಿಂತ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ವೋಟರ್ಸ್ ಹಿಲರಿ ಬೆಂಬಲಿಸಿದ್ದರು. ಆದರೆ ಚುನಾವಣೆ ಫಲಿತಾಂಶ ಬಂದಾಗ ಎಲ್ಲಾ ಉಲ್ಟಾ ಆಗಿಹೋಗಿತ್ತು, ‘ಎಲೆಕ್ಟೊರೋಲ್ ಕಾಲೇಜು' ವ್ಯವಸ್ಥೆ ಪರಿಣಾಮ ಹಿಲರಿ ಕ್ಲಿಂಟನ್ ಮುಗ್ಗರಿಸಿದ್ದರು. ಟ್ರಂಪ್ ಭರ್ಜರಿ ಗೆಲುವು ಸಾಧಿಸಿ 2016ರಲ್ಲಿ ಅಧ್ಯಕ್ಷರಾಗಿದ್ದರು.

244 ವರ್ಷಗಳ ಇತಿಹಾಸ..!

244 ವರ್ಷಗಳ ಇತಿಹಾಸ..!

ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಟ್ಟಿದ್ದು ಯುರೋಪಿಯನ್ನರು. ಆದರೆ ಅದೇ ಪ್ರಜಾಪ್ರಭುತ್ವವನ್ನು ಆಧುನಿಕ ಜಗತ್ತಿನಲ್ಲಿ ಎತ್ತಿಹಿಡಿದಿದ್ದು ಅಮೆರಿಕ. ಜಾರ್ಜ್ ವಾಷಿಂಗ್‌ಟನ್, ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಒಬಾಮಾ ಹೀಗೆ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯುವವರೆಗೂ 45 ಅಧ್ಯಕ್ಷರನ್ನ ಅಮೆರಿಕ ಕಂಡಿದೆ. ಅಮೆರಿಕ ಪ್ರಜಾಪ್ರಭುತ್ವ ಇತಿಹಾಸಕ್ಕೆ 244 ವರ್ಷ ಇತಿಹಾಸವಿದೆ. ಆಧುನಿಕ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಕೂಡ ಈ ವಿಚಾರದಲ್ಲಿ ಅಮೆರಿಕವನ್ನು ಹಿಂದೆ ಹಾಕಲು ಸಾಧ್ಯವಾಗಿಲ್ಲ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?

ಅಧ್ಯಕ್ಷನಾಗಲು ಇರಬೇಕಾದ ಅರ್ಹತೆ ಏನು..?

ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಲ್ಲೇ ಹುಟ್ಟಿರಬೇಕು, ಅಮೆರಿಕದ ಪ್ರಜೆಯಾಗಿರಬೇಕು. ಅಲ್ಲದೆ ಅಭ್ಯರ್ಥಿಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಮೆರಿಕ ಅಧ್ಯಕ್ಷರ ಆಯ್ಕೆ ಸುಲಭದ ವಿಚಾರವಲ್ಲ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸುದೀರ್ಘವಾಗಿದ್ದು, ನವೆಂಬರ್‌ನಲ್ಲೇ ಮತದಾನ ನಡೆದರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ಶುರುವಾಗುವುದು ಜನವರಿಯಲ್ಲಿ. ಹೀಗೆ ಅಮೆರಿಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಹಲವು ತಿಂಗಳ ಸಮಯ ಬೇಕಾಗುತ್ತದೆ.

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

4 ವರ್ಷಕ್ಕೊಮ್ಮೆ ಅಧ್ಯಕ್ಷರು ಬದಲಾಗುತ್ತಾರೆ

ಅಮೆರಿಕ ಅಧ್ಯಕ್ಷರನ್ನು ಪ್ರತಿ 4 ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ ಅಥವಾ ಮರು ಆಯ್ಕೆ ಮಾಡುತ್ತಾರೆ. 2020ರಲ್ಲಿ ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಅಮೆರಿಕನ್ನರು ಮತದಾನ ಮಾಡಲಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಅಂಚೆ ಮತದಾನ ಪದ್ಧತಿಯ ಮೊರೆ ಹೋಗಲಾಗಿದೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಆಯ್ಕೆ ಹೇಗೆ..?

ಚುನಾಯಿತ ಪ್ರತಿನಿಧಿಗಳ ಆಯ್ಕೆ ಹೇಗೆ..?

ಚುನಾಯಿತ ಪ್ರತಿನಿಧಿಗಳು ಅಮೆರಿಕ ಅಧ್ಯಕ್ಷರನ್ನು ನೇರವಾಗಿ ಆಯ್ಕೆಮಾಡುವ ಅಧಿಕಾರ ಹೊಂದಿರುವವರು. ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಅಂದರೆ 2019ರಲ್ಲಿ ನಡೆದ ಅಮೆರಿಕದ ಜನಗಣತಿ ಆಧಾರದಲ್ಲಿ ಅಮೆರಿಲದಲ್ಲಿ ಒಟ್ಟು 32.8 ಕೋಟಿ ಪ್ರಜೆಗಳಿದ್ದಾರೆ. ಈ ಜನಸಂಖ್ಯೆಗೆ ಅನುಗುಣವಾಗಿ 2020ರಲ್ಲಿ ಚುನಾಯಿತ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ಇನ್ನೂ ಚುನಾಯಿತ ಪ್ರತಿನಿಧಿಗಳನ್ನು ಹೇಗೆ ಆಯ್ಕೆಮಾಡಲಾಗುತ್ತದೆ ಎಂದರೆ, ಎರಡೂ ರಾಜಕೀಯ ಪಕ್ಷಗಳು ಆಯಾ ರಾಜ್ಯದಲ್ಲಿ ಚುನಾವಣೆಗೂ ಮುನ್ನ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆಯ್ಕೆಮಾಡುತ್ತವೆ. ಪ್ರಜೆಗಳು ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ಅಥವಾ ತಮಗಿಷ್ಟವಾದ ಚುನಾಯಿತ ಪ್ರತಿನಿಧಿಗೆ ಮತ ಚಲಾಯಿಸುತ್ತಾರೆ.

English summary
According to US presidential election polls, Joe Biden's grandeur victory over Donald Trump is forecast. This time, the chances of Trump's defeat in states that won the last election are denser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X