ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸೂರ್ಯನ ಬೆಳಕು, ಶಾಖ, ತೇವಾಂಶ ಕೊರೊನಾವನ್ನು ದುರ್ಬಲಗೊಳಿಸುತ್ತದೆ'

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 24: ಸೂರ್ಯನ ಬೆಳಕು, ಶಾಖ, ತೇವಾಂಶವು ಕೊರೊನಾ ವೈರಸ್‌ನ್ನು ದುರ್ಬಲವಾಗಿಸುತ್ತದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ವೈರಸ್ ಹೊರಗಡೆ ಶುಷ್ಕ ಸ್ಥಿತಿಯಲ್ಲಿ ಬದುಕುಳಿಯುತ್ತದೆ. ತಾಪಮಾನ ಮತ್ತು ತೇವಾಂಶ ಮತ್ತ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಕೊರೊನಾ ವೈರಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯಕಾರಿ ಮುಖ್ಯಸ್ಥ ವಿಲಿಯಂ ಬರಿಯಾನ್ ಹೇಳಿದ್ದಾರೆ.

ದೆಹಲಿ ಸರ್ಕಾರಿ ಆಸ್ಪತ್ರೆಯ 14 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ದೆಹಲಿ ಸರ್ಕಾರಿ ಆಸ್ಪತ್ರೆಯ 14 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ

ಬೇಸಿಗೆಯಲ್ಲೂ ಕೂಡ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಸಾಕಷ್ಟು ರಾಜ್ಯಗಳಲ್ಲಿ ಕೊರೊನಾ ಸೋಂಖಿನ ಪ್ರಮಾಣ ಕಡಿಮೆಯಾಗುತ್ತಿದೆ. ಅಮೆರಿಕದಲ್ಲಿ 8,74000 ಮಂದಿಗೆ ಕೊರೊನಾ ತಗುಲಿದೆ. 46,900 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.

ವೈರಸ್ ಮೇಲೆ ನೇರವಾಗಿ ಸೂರ್ಯನ ಕಿರಣ ಬಿದ್ದರೆ ಸಾಯುತ್ತದೆ

ವೈರಸ್ ಮೇಲೆ ನೇರವಾಗಿ ಸೂರ್ಯನ ಕಿರಣ ಬಿದ್ದರೆ ಸಾಯುತ್ತದೆ

ಸೂರ್ಯನ ಕಿರಣಗಳು ವೈರಸ್ ಮೇಲೆ ನೇರವಾಗಿ ಬಿದ್ದಾಗ ಅದು ಸಾಯುತ್ತದೆ. ಕೊರೊನಾವು ಇನ್‌ಫ್ಲುಯೆನ್ಜಾನಂತಹ ಇತರೆ ಉಸಿರಾಟ ಕಾಯಿಲೆಗಳಂತೆಯೇ ಇರುತ್ತದೆ. ಇದು ಸಾಮಾನ್ಯವಾಗಿ ಬೆಚ್ಚನೆಯ ವಾತಾವರಣದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.

ಸಿಂಗಾಪುರದಲ್ಲಿ ಇದು ಮಾರಕ ಎಂದು ಸಾಬೀತಾಗಿದೆ

ಸಿಂಗಾಪುರದಲ್ಲಿ ಇದು ಮಾರಕ ಎಂದು ಸಾಬೀತಾಗಿದೆ

ಸಿಂಗಾಪುರದಂತಹ ಬೆಚ್ಚನೆಯ ಹವಾಮಾನವಿರುವ ಸ್ಥಳಗಳಲ್ಲಿ ಮಾರಕವೆಂದು ಸಾಬೀತಾಗಿದೆ.ಹೀಗಾಗಿ ಪರಿಸರದ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಡೊನಾಲ್ಡ್ ಟ್ರಂಪ್ ಕೂಡ ಇದೇ ಹೇಳಿದ್ದರು

ಡೊನಾಲ್ಡ್ ಟ್ರಂಪ್ ಕೂಡ ಇದೇ ಹೇಳಿದ್ದರು

ಕೊರೊನಾ ವೈರಸ್ ಬೆಚ್ಚನೆಯ ವಾತಾವರಣದಲ್ಲಿದ್ದಾಗ ಸಾಯುತ್ತದೆ, ಹೀಗಾಗಿ ಇನ್ನೇನು ಬೇಸಿಗೆ ಬರುತ್ತಿದೆ, ಕೊರೊನಾ ಹೆಚ್ಚು ದಿನಗಳ ಕಾಲ ಮನುಷ್ಯನ ದೇಹದಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ನೆನಪಿಸಿಕೊಂಡರು. ಆದರೆ ಜನರು ಅವರ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಆರ್ಥಿಕತೆಯನ್ನು ಪುನರಾರಂಭಿಸುವ ಯೋಚನೆ

ಆರ್ಥಿಕತೆಯನ್ನು ಪುನರಾರಂಭಿಸುವ ಯೋಚನೆ

ಅಮೆರಿಕದಲ್ಲಿ ಆರು ರಾಜ್ಯಗಳು ಆರ್ಥಿಕತೆಯನ್ನು ಪುನರಾರಂಭಿಸಲು ಆಲೋಚನೆ ನಡೆಸಿವೆ. ಜಾರ್ಜಿಯಾ, ದಕ್ಷಿಣ ಕೆರೊಲಿನಾ ಮುಂದಿನ ವಾರ ಮತ್ತೆ ತಮ್ಮ ವ್ಯವಹಾರ, ವಹಿವಾಟನ್ನು ಆರಂಭಿಸಲಿದೆ.

English summary
The coronavirus appears to weaken more quickly when exposed to sunlight, heat and humidity, a U.S. official said on Thursday in a potential sign that the pandemic could become less contagious in summer months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X