ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನ್ಯೂಕ್ಲಿಯರ್ ಬಾಂಬ್’ ಶಾಕ್! ಅಮೆರಿಕ ವಿರುದ್ಧ ಚೀನಾ-ರಷ್ಯಾ ಚಕ್ರವ್ಯೂಹ!

|
Google Oneindia Kannada News

ಇಷ್ಟು ದಿನ ತಾನೇ ಎಲ್ಲಾ, ತನ್ನಿಂದಲೇ ಎಲ್ಲಾ ಎಂದು ವಿಶ್ವದ ದೊಡ್ಡಣ್ಣನಾಗಿ ಮೆರೆದಿದ್ದ ಅಮೆರಿಕದ ನಂಬರ್ 1 ಪಟ್ಟದ ಆಯಸ್ಸು ಮುಗಿದಿದೆ ಅಂತಾ ಅನಿಸುತ್ತಿದೆ. ಹೆಜ್ಜೆ ಹೆಜ್ಜೆಗೂ ಅಮೆರಿಕ ಸೋತಿದೆ. ಅದರಲ್ಲೂ ಕೊರೊನಾ ಕೂಪದಲ್ಲಿ ಬಿದ್ದು ನರಳಾಡಿರುವ ಅಮೆರಿಕ ನಾಯಕತ್ವಕ್ಕೆ ಶಾಕ್ ನೀಡುತ್ತಿದೆ ಚೀನಾ. ಈಗ ಮತ್ತೆ ಶಾಕ್‌ ರುಚಿ ತೋರಿಸಲು ಚೀನಾ ಹಾಗೂ ರಷ್ಯಾ ಒಗ್ಗಟ್ಟಾಗಿವೆ.

ಇಷ್ಟುದಿನ ನ್ಯೂಕ್ಲಿಯರ್ ಬಾಸ್ ಎನಿಸಿಕೊಂಡಿದ್ದ ಅಮೆರಿಕ ಹಾಗೂ ರಷ್ಯಾ ಸಾಲಿಗೆ ಚೀನಾ ಕೂಡ ಸೇರುತ್ತಿದೆ. ಇಷ್ಟು ಮಾತ್ರವಲ್ಲ ರಷ್ಯಾ ಹಾಗೂ ಚೀನಾ ಅತಿ ವೇಗವಾಗಿ ತಮ್ಮಲ್ಲಿರುವ ನ್ಯೂಕ್ಲಿಯರ್ ವೆಪನ್‌ಗಳನ್ನ ಅಧುನಿಕಗೊಳಿಸುತ್ತಿವೆ ಎನ್ನಲಾಗಿದೆ. ಖುದ್ದು ಅಮೆರಿಕದ ಅಧಿಕಾರಿ ಬಳಗ ಈ ಎಚ್ಚರಿಕೆ ನೀಡಿದೆ.

ರಷ್ಯಾ ಹಾಗೂ ಚೀನಾ ತಮ್ಮಲ್ಲಿರುವ ಅಣು ಬಾಂಬ್‌ಗಳನ್ನ ಆಧುನಿಕಗೊಳಸಿವೆ, ಆದರೆ ಅಮೆರಿಕ ತೀರಾ ಹಿಂದುಳಿದಿದೆ ಎಂದು ಅಮೆರಿಕದ ನ್ಯೂಕ್ಲಿಯರ್ ನೇತೃತ್ವ ವಹಿಸಿರುವ ಅಧಿಕಾರಿಗಳು ಎಚ್ಚರಿಸಿದ್ದಾರೆ. ಹೀಗೆ ರಷ್ಯಾ-ಚೀನಾ ಬಗ್ಗೆ ಅಮೆರಿಕನ್ನರಿಗೆ ಮೆಲ್ಲಗೆ ಭಯ ಮತ್ತಷ್ಟು ಜಾಸ್ತಿ ಆದಂತಾಗಿದೆ.

ಅಮೆರಿಕ ಭಯಪಡುವುದು ಏಕೆ..?

ಅಮೆರಿಕ ಭಯಪಡುವುದು ಏಕೆ..?

ಅಮೆರಿಕ ತನ್ನ ನಂಬರ್ 1 ಪಟ್ಟ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದೆ. ಅದರಲ್ಲೂ ಅಮೆರಿಕದ ಬಳಿ ಇರುವ ನ್ಯೂಕ್ಲಿಯರ್ ವೆಪನ್‌ಗಳೇ ಆ ದೇಶಕ್ಕೆ ಆನೆ ಬಲವಿದ್ದಂತೆ. ಆದರೆ ಈಗ ನ್ಯೂಕ್ಲಿಯರ್ ವೆಪನ್‌ ವಿಚಾರದಲ್ಲೂ ಅಮೆರಿಕ ಹಿಂದುಳಿಯುತ್ತಿರುವುದು ಸಹಜವಾಗಿ ಆತಂಕ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಜಗತ್ತಿನ ಪ್ರಬಲ ನೌಕಾಸೇನೆ ಹೊಂದಿರುವ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿತ್ತು. ಈ ಮೂಲಕ ಇಷ್ಟುದಿನ ಅಮೆರಿಕದ ಹೆಸರಿನಲ್ಲಿದ್ದ ಪಟ್ಟವನ್ನು ಚೀನಾ ಅಲಂಕರಿಸಿತ್ತು. ಇದೀಗ ಅಣುಬಾಂಬ್‌ಗಳ ಅಭಿವೃದ್ಧಿಯಲ್ಲಿ ರಷ್ಯಾ ಹಾಗೂ ಚೀನಾ ಒಗ್ಗೂಡಿರುವುದು ಅಮೆರಿಕದ ನಾಯಕರನ್ನು ಚಿಂತೆಗೀಡು ಮಾಡಿದೆ.

400 ಯುದ್ಧ ನೌಕೆಗಳ ಟಾರ್ಗೆಟ್..!

400 ಯುದ್ಧ ನೌಕೆಗಳ ಟಾರ್ಗೆಟ್..!

ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಿಯರ ಪ್ರಾಬಲ್ಯವನ್ನು ತಗ್ಗಿಸಲು ಅಮೆರಿಕ ನೇತೃತ್ವದಲ್ಲಿ 'ಕ್ವಾಡ್' ಒಕ್ಕೂಟ ಪ್ರಯತ್ನಿಸುತ್ತಿದೆ.

ವಿನಾಶಕಾರಿ ಬಾಂಬ್ ತಂತ್ರ..!

ವಿನಾಶಕಾರಿ ಬಾಂಬ್ ತಂತ್ರ..!

ಇಡೀ ಮನುಕುಲ ನಾಶ ಮಾಡಬಲ್ಲ ಅಣುಬಾಂಬ್ ಮೊಟ್ಟಮೊದಲು ಕಂಡುಹಿಡಿದಿದ್ದು ಅಮೆರಿಕ. ಅಷ್ಟಕ್ಕೂ ಅಮೆರಿಕ ತನ್ನ ಕಾರ್ಯಸಾಧನೆಗೆ ಬಳಸಿಕೊಂಡಿದ್ದು ಶತಮಾನದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಅವರನ್ನು. ಅವರಿಗೇ ಗೊತ್ತಿಲ್ಲದಂತೆ ಅಣುಬಾಂಬ್ ತಂತ್ರ ಕದ್ದು, ಶಾಂತಿ ಸ್ಥಾಪನೆ ಹೆಸರಲ್ಲಿ ಅಮೆರಿಕ ಕ್ಷಣದಲ್ಲಿ ವಿನಾಶ ಸೃಷ್ಟಿಸಬಲ್ಲ ನ್ಯೂಕ್ಲಿಯರ್ ಬಾಂಬ್ ಕಂಡು ಹಿಡಿಯಿತು ಎಂಬ ಆರೋಪವಿದೆ. ಹೀಗೆ ಮೊದಲಿಗೆ ತನ್ನ ಅಣುಬಾಂಬ್ ಪ್ರಯೋಗ ಮಾಡಿದ್ದು ಜಪಾನ್ ಮೇಲೆ. ನಂತರ ಅಣುಬಾಂಬ್ ತಂತ್ರಜ್ಞಾನ ರಷ್ಯಾ ಮತ್ತಿತರ ರಾಷ್ಟ್ರಗಳಿಗೂ ಗೊತ್ತಾಯಿತು. ನ್ಯೂಕ್ಲಿಯರ್ ಬಾಂಬ್‌ಗಳ ತಯಾರಿಕೆಯಲ್ಲಿ ನಕ್ಷತ್ರಗಳು ಅಥವಾ ಸೂರ್ಯನ ಬೈಜಿಕ ಕ್ರಿಯೆಗಳ ಮಾದರಿ ಅನುಸರಿಸುತ್ತಾರೆ.

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಸಾಮಾನ್ಯವಾಗಿ ಹೇಳುವುದಾದರೆ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ನಕ್ಷತ್ರಗಳ ಮಾದರಿಯನ್ನೇ ಅನುಸರಿಸುತ್ತವೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನದ ಮೂಲಕ ಶಕ್ತಿ ಬಿಡುಗಡೆ ಆಗುತ್ತದೆ. ಆದರೆ ಅಣು ಬಾಂಬ್‌ಗಳಲ್ಲಿ ಬೈಜಿಕ ವಿದಳನ ಕ್ರಿಯೆಯಿಂದ ಸ್ಫೋಟ ಸಂಭವಿಸುತ್ತೆ. ಉದಾಹರಣೆಗೆ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತೆ. ಅದೇ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ಇದನ್ನು ಬೈಜಿಕ ಸಮ್ಮಿಲನ ಎನ್ನುತ್ತೇವೆ. ನಕ್ಷತ್ರಗಳಲ್ಲಿ ಈ ಕ್ರಿಯೆ ನಡೆಯುತ್ತದೆ. ಆದರೆ ನ್ಯೂಕ್ಲಿಯರ್ ಬಾಂಬ್‌ನಲ್ಲಿ ಇದು ಉಲ್ಟಾ, ಉದಾಹರಣೆಗೆ ಬೆರಿಲಿಯಂನ (Be4) ಬೇರೊಂದು ಕಣದಿಂದ ಜೋರಾಗಿ ತಾಡಿಸಿ ಅದನ್ನ ಇಬ್ಬಾಗ ಮಾಡುತ್ತಾರೆ. ಆಗ ಬೆರಿಲಿಯಂ (Be4) 2 ಭಾಗವಾಗಿ ಹೀಲಿಯಂ (H2) + ಹೀಲಿಯಂ (H2) ಆಗುತ್ತದೆ. ಒಟ್ಟಾರೆ ನ್ಯೂಕ್ಲಿಯರ್ ವೆಪನ್ಸ್ ಜಗತ್ತಿನ ವಿನಾಶಕಾರಿ ಅಸ್ತ್ರ ಎಂಬುದರಲ್ಲಿ ಅನುಮಾನವೇ ಇಲ್ಲ.

English summary
American nuclear officers warned their administration over Russia & China nuclear warheads modernization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X