• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಯುಎಸ್‌ನ ದುರ್ಬಲ ಸರ್ಕಾರ ಚೀನಾದೊಂದಿಗೆ ಯುದ್ಧವಾಗಿ ಪತನವಾಗಲಿದೆ': ಟ್ರಂಪ್‌

|
Google Oneindia Kannada News

ವಾಷಿಂಗ್ಟನ್‌, ಅಕ್ಟೋಬರ್‌ 07: "ಪ್ರಸ್ತುತ ಯುಎಸ್‌ ಸರ್ಕಾರವು ದುರ್ಬಲವಾಗಿದೆ, ಆದ್ದರಿಂದ ಚೀನಾದೊಂದಿಗೆ ಯುದ್ಧ ಮಾಡಿ ಈ ಸರ್ಕಾರವು ಪತನವಾಗಲಿದೆ," ಎಂದು ಮಾಜಿ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಹೇಳಿದ್ದಾರೆ.

ಈಗ ಅಮೆರಿಕದಲ್ಲಿ ದುರ್ಬಲ ಹಾಗೂ ಭ್ರಷ್ಟ ಸರ್ಕಾರ ಇರುವ ಹಿನ್ನೆಲೆ ಬೇಜಿಂಗ್‌ಗೆ ಈಗ ಅಮೆರಿಕದ ಮೇಲೆ ಯಾವುದೇ ಗೌರವವಿಲ್ಲ ಎಂದು ಕೂಡಾ ಡೊನಾಲ್ಡ್‌ ಟ್ರಂಪ್‌ ಈ ಸಂದರ್ಭ ಹೇಳಿದ್ದಾರೆ. ತೈವಾನ್‌ಗೆ ಸಮೀಪದಲ್ಲಿ ಚೀನಾದ ಸೇನಾಪಡೆಯು ಏರ್‌ಡ್ರಿಲ್‌ ನಡೆಸುತ್ತಿದೆ. ಈ ವಿಚಾರದಲ್ಲಿ ಯುಎಸ್‌ ಹಾಗೂ ಚೀನಾ ನಡುವೆ ವಾಗ್ವಾದವಾಗಿದ್ದು, ಸ್ವಿಝರ್‌ಲ್ಯಾಂಡ್‌ನಲ್ಲಿ ಮಾತುಕತೆ ನಡೆಯಲಿದೆ.

25 ವರ್ಷದಲ್ಲಿ ಮೊದಲ ಬಾರಿಗೆ ಶ್ರೀಮಂತರ ಪಟ್ಟಿಯಿಂದ ಟ್ರಂಪ್‌ ಔಟ್‌!25 ವರ್ಷದಲ್ಲಿ ಮೊದಲ ಬಾರಿಗೆ ಶ್ರೀಮಂತರ ಪಟ್ಟಿಯಿಂದ ಟ್ರಂಪ್‌ ಔಟ್‌!

ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳಾಗಿರುವ ಚೀನಾ ಹಾಗೂ ಅಮೆರಿಕ ಪರಸ್ಪರ ಕಳೆದ 18 ತಿಂಗಳುಗಳಿಂದ ವ್ಯಾಪಾರ ವಿವಾದವನ್ನು ಹೊಂದಿದೆ. ಬೃಹತ್ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಿ ಎಂದು ಹೇಳಿ ಟ್ರಂಪ್‌ 2018 ರಲ್ಲಿ ಚೀನಾದ ವಿರುದ್ದ ವ್ಯಾಪಾರ ಯುದ್ಧ ಆರಂಭ ಮಾಡಿದ್ದಾರೆ. ಆ ಸಂದರ್ಭದಲ್ಲೇ ಚೀನಾ ಹಾಗೂ ಯುಎಸ್‌ ನಡುವಿನ ಸಂಬಂಧವು ತೀರಾ ಕ್ಷೀಣಿಸಿತ್ತು. ಈಗ ಹಲವಾರು ವಿಷಯಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ವಾಗ್ವಾದ ನಡೆಯುತ್ತಿದೆ. ಇನ್ನು ಕೊರೊನಾ ವೈರಸ್‌ ಸೋಂಕಿನ ಉಭಯ ಸ್ಥಾನದ ವಿಚಾರದಲ್ಲೂ ಅಮೆರಿಕ ಹಾಗೂ ಚೀನಾ ನಡುವೆ ಚರ್ಚೆಗಳು ನಡೆಯುತ್ತಿದೆ.

"ಚುನಾವಣೆ ನಡೆದು ಹೊಸ ಸರ್ಕಾರ ಬಂದ ಬಳಿಕ ಈಗ ಅಮೆರಿಕ ದುರ್ಬಲವಾಗಿದೆ ಹಾಗೂ ಭಷ್ಟ ನಾಯಕತ್ವವನ್ನು ಹೊಂದಿದೆ. ಚೀನಾಗೆ ಈಗ ಅಮೆರಿಕದ ಮೇಲೆ ಯಾವ ಗೌರವವೂ ಇಲ್ಲ. ನಾವು ಈಗ ಚೀನಾದೊಂದಿಗೆ ಯುದ್ಧ ಮಾಡಿ ಕೊನೆಯಾಗುತ್ತೇವೆ," ಎಂದು ಟ್ರಂಪ್‌, ಪ್ರಸ್ತುತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ವಿರುದ್ದ ಟೀಕೆ ಮಾಡಿದ್ದಾರೆ.

"ನಮ್ಮ 13 ಸೈನಿಕರು ಸಾವನ್ನಪ್ಪಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗೆ ನಮ್ಮ ಜನರಲ್‌ಗಳು ಶರಣವಾಗುವ ಮೂಲಕ ತಮ್ಮ ದುರ್ಬಲತೆಯನ್ನು ಈ ಅಮೆರಿಕ ಸರ್ಕಾರ ಪ್ರದರ್ಶನ ಮಾಡಿದೆ. ಸುಮಾರು 85 ಬಿಲಿಯನ್‌ ಡಾಲರ್‌ ವ್ಯಯ ಮಾಡಿರುವ ಉತ್ತಮ ಹಾಗೂ ಅಧಿಕ ದುಬಾರಿಯಾದ ಶಸ್ತ್ರಾಸ್ತ್ರಗಳನ್ನು ತಾಲಿಬಾನ್‌ಗೆ ನೀಡುವ ಮೂಲಕ ಸರ್ಕಾರ ಶರಣಾಗಿದೆ. ಪ್ರಸ್ತುತ ಚೀನಾ ಹಾಗೂ ರಷ್ಯಾ ದೇಶವು ಅಫ್ಘಾನಿಸ್ತಾನದಲ್ಲಿ ತಮ್ಮ ನೆಲೆಯೂರುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ," ಎಂದು ಟ್ರಂಪ್‌ ದೂಷಿಸಿದರು.

ಬೈಡನ್ ವಿರುದ್ಧ ರೊಚ್ಚಿಗೆದ್ದ ಟ್ರಂಪ್..! ಮತ್ತೊಮ್ಮೆ ಟ್ರಂಪ್‌ಗೆ ಅಧ್ಯಕ್ಷ ಪಟ್ಟ ಸಿಗುತ್ತಾ..?ಬೈಡನ್ ವಿರುದ್ಧ ರೊಚ್ಚಿಗೆದ್ದ ಟ್ರಂಪ್..! ಮತ್ತೊಮ್ಮೆ ಟ್ರಂಪ್‌ಗೆ ಅಧ್ಯಕ್ಷ ಪಟ್ಟ ಸಿಗುತ್ತಾ..?

ಅಮೆರಿಕವು ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ, ಅಫ್ಘಾನಿಸ್ತಾನದ ಮೇಲೆ ತಾಲಿಬಾನ್‌ ದಾಳಿ ನಡೆಸಿದೆ. ಕಳೆದ ಆಗಸ್ಟ್‌ 15 ರಂದು ತಾಲಿಬಾನ್‌ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಈಗ ಸರ್ಕಾರವನ್ನು ನಡೆಸುತ್ತಿದೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಹಲವಾರು ಬಾಂಬ್‌ ದಾಳಿ ಪ್ರಕರಣಗಳು ವರದಿ ಆಗುತ್ತಿದೆ.

ರಿಯಲ್‌ ಎಸ್ಟೇಟ್‌ನ ಪ್ರಮುಖ ವ್ಯಕ್ತಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಮಾರು 25 ವರ್ಷಗಳ ಬಳಿಕ ಅಮೆರಿಕದ ಫೋರ್ಬ್ಸ್‌ನ 400 ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂದು ನಿಯತಕಾಲಿಕೆ (ಮ್ಯಾಗಜೀನ್‌) ವರದಿ ಮಾಡಿದೆ. ಕಳೆದ ವರ್ಷ ಟ್ರಂಪ್‌ ಎಷ್ಟು ಸಂಪತ್ತನ್ನು ಹೊಂದಿದ್ದರೋ ಅಷ್ಟೇ ಸಂಪತ್ತನ್ನು ಹೊಂದಿದ್ದರು. ಆದರೆ ಕೊರೊನಾ ವೈರಸ್‌ ಸೋಂಕು ಆರಂಭವಾದ ಬಳಿಕ ಟ್ರಂಪ್‌ನ ಸಂಪತ್ತಿನಲ್ಲಿ ಸುಮಾರು 600 ಮಿಲಿಯನ್‌ ಯುನೈಟೆಡ್‌ ಸ್ಟೇಟ್ಸ್‌ ಡಾಲರ್‌ ಸಂಪತ್ತು ನಷ್ಟವಾಗಿದೆ," ಎಂದು ವರದಿಯು ಹೇಳುತ್ತದೆ.

ಟ್ರಂಪ್‌ನ ಸಂಪತ್ತು 2.5 ಬಿಲಿಯನ್‌ ಡಾಲರ್‌ ಆಗಿದ್ದು, 600 ಮಿಲಿಯನ್‌ ಡಾಲರ್‌ ಕಡಿಮೆಯಾದ ಕಾರಣದಿಂದಾಗಿ ಟ್ರಂಪ್‌ರನ್ನು ತನ್ನ ಶ್ರೀಮಂತರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಫೋರ್ಬ್ಸ್‌ನ ವರದಿಯು ಹೇಳಿದೆ. "ಟ್ರಂಪ್‌ನ ಸಂಪತ್ತು ಇಳಿಕೆಯ ಹೊಣೆಯನ್ನು ನಾವು ಯಾರಿಗಾದರೂ ಹೊರಿಸುವುದಾದರೆ, ಮೊದಲು ಟ್ರಂಪ್‌ ಅವರೇ ಆ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಈ ಸಂಪತ್ತು ಇಳಿಕೆಗೆ ಅವರೇ ಕಾರಣ," ಎಂದು ಫೋರ್ಬ್ಸ್‌ ವರದಿ ಆರೋಪ ಮಾಡಿದೆ.

(ಒನ್‌ಇಂಡಿಯಾ ಸುದ್ದಿ)

English summary
US Now Has Weak Government, May End Up In War With China Says Former President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X